ಸುದ್ದಿಮೂಲ ವಾರ್ತೆ ಕಲಬುರಗಿ, ಡಿ.31
ಕಲಬುರಗಿ ಕೇಂದ್ರ ಕಾರಾಗೃಹದ ಕೈದಿಗಳು ರಾಜಾರೋಷವಾಗಿ ಎಣ್ಣೆೆ ಪಾರ್ಟಿ ಮಾಡುತ್ತಾಾ, ಜೂಜಾಟವಾಡುತ್ತಿಿರುವ ಎನ್ನಲಾದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಡೆ ವೈರಲ್ ಆಗಿದೆ.
ಜೈಲಿನ ಕೈದಿಗಳ ಗುಂಪೊಂದು ಭಾರಿ ಬ್ರ್ಯಾಾಂಡೆಡ್ ಎಣ್ಣೆೆ ಹೊಡೆಯುತ್ತಾಾ, ಕಂತೆ ಕಂತೆ ಹಣದಿಂದ ಜೂಜಾಟವಾಡುತ್ತಿಿರುವ ವಿಡಿಯೋ ವೈರಲ್ ಬಳಿಕ ಇದೀಗ, ಸಾಕಷ್ಟು ಬಿಗಿ ಭದ್ರತೆ ನಡುವೆಯೂ ಈ ರೀತಿಯ ಹೈೈ ಜೀವನ ನಡೆಸಲು ಹೇಗೆ ಸಾಧ್ಯ.?. ನಿಷೇಧಿತ ವಸ್ತುಗಳು ಕಾರಾಗೃಹದ ಒಳಗಡೆ ಹೋಗಿದ್ದು ಹೇಗೆ ಎಂಬ ಪ್ರಶ್ನೆೆಗಳು ಉದ್ಭವವಾಗಿವೆ.
ಕೇಂದ್ರ ಕಾರಾಗೃಹದಲ್ಲಿ ಎಲ್ಲಾ ನಿಷೇಧಿತ ವಸ್ತುಗಳು ಪ್ರವೇಶ ಹೇಗಾದವು ಎಂಬುದೇ ತಿಳಿಯದ ಸಂಗತಿಯಾಗಿದ್ದು, ಜೈಲಾಧಿಕಾರಿ ಕಣ್ಣು ಮುಚ್ಚಿಿ ಕುಳಿತಿದ್ದಾರೆಯೇ ಎಂಬ ಮಾತು ಇದೀಗ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಯಾಗುತ್ತಿಿದೆ.
ಕಾರಾಗೃಹಕ್ಕೆೆ ಪೋಲಿಸರ ತಂಡ ಭೇಟಿ, ಪರಿಶೀಲನೆ:
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಬಿಂದಾಸ್ ಲೆ್ೈ ನಡೆಸುತ್ತಿಿರುವ ವಿಡಿಯೋ ವೈರಲ್ ಬಳಿಕ ಕಾರಾಗೃಹದ ಮೇಲೆ ಪೊಲೀಸರು ದಾಳಿ ನಡೆಸಿ ಪರಿಶೀಲನೆ ಮಾಡಿದ್ದಾರೆ. ಸಬ್ ಅರ್ಬನ್ ಎಸಿಪಿ ಬಸವರಾಜ ಹೀರಾ, ಸಿಸಿಬಿ ಎಸಿಪಿ ಜೇಮ್ಸ್ ಮೀನೆಜೆಸ್ ನೇತೃತ್ವದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.ಪಿಎಸ್ಐ ನೇಮಕಾತಿ ಅಕ್ರಮದ ಕಿಂಗ್ ಪಿನ್ ಆರ್ ಡಿ ಪಾಟೀಲ್ ಸೇರಿ ಜೈಲ್ನ ಎಲ್ಲಾ ಬ್ಯಾಾರಕ್ಗೆ ಭೇಟಿ ನೀಡಿ, ಕೈದಿಗಳ ರಾಜಾರೋಷ ಹೈೈ ಜೀವನದ ವಿಡಿಯೋ ಹಿಂದಿನ ಸತ್ಯ ಶೋಧನೆಗೆ ಮುಂದಾಗಿದ್ದಾರೆ.
ಕಲಬುರಗಿ ಕಾರಾಗೃಹದ ಕೈದಿಗಳ ಹೈ ಜೀವನ; ವಿಡಿಯೋ ವೈರಲ್

