ಸುದ್ದಿಮೂಲ ವಾರ್ತೆ
ಹೊಸಕೋಟೆ, ಅ,10 : ನಾವು ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಳ್ಳದೇ ಸ್ವತಂತ್ರವಾಗಿ ಸ್ಪರ್ಧಿಸಿದ್ದು, ಕಾಂಗ್ರೆಸ್-ಬಿಜೆಪಿ ಎರಡೂ ಪಕ್ಷದ ಷೇರುದಾರರು ಅತ್ಯಧಿಕ ಮತ ನೀಡಿ ಆಯ್ಕೆ ಮಾಡಿದ್ದಾರೆ. ಇದರಲ್ಲಿ ರಾಜಕಾರಣ ಬೆರೆಸಬಾರದು ಎಂದು ಹಿರಿಯ ಮುಖಂಡ ಹಾಗೂ ಹಾಲಿ ನಿರ್ದೇಶಕ ಹೆಚ್.ಕೆ.ರಾಮಚಂದ್ರೇಗೌಡ ತಿಳಿಸಿದರು.
ಹೊಸಕೋಟೆ ತಾಲೂಕಿನ ಹಿಂಡಿಗನಾಳ ಗ್ರಾಮದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಕಳೆದ ತಿಂಗಳು 5 ರಂದು ನಡೆದ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯಲ್ಲಿ ಯಾವುದೇ ಪಕ್ಷದ ಬೆಂಬಲ ಬಯಸದೇ ಸ್ವತಂತ್ರವಾಗಿ ಚುನಾವಣೆಗೆ ಸ್ಪರ್ಧಿಸಿದ್ದು, ಚುನಾವಣೆಯಲ್ಲಿ ಆಯ್ಕೆಯಾದ ನಂತರ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದವರು ನಮ್ಮ ಅಭ್ಯರ್ಥಿಗಳೆಂದು ಪತ್ರಿಕೆಗಳಲ್ಲಿ ಬಿಂಬಿಸಿರುವುದು ಕಂಡು ಬಂದಿದೆ.
ಈ ವಿಚಾರವಾಗಿ ಸ್ಪಷ್ಟಿಕರಣ ನೀಡಿ ಅವರು, ಕಳೆದ 25 ವರ್ಷಗಳಿಂದ ನಮ್ಮ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಚುನಾವಣೆ ನಡೆಸದೆ ಅವಿರೋಧವಾಗಿ ಆಯ್ಕೆ ಮಾಡುವ ಸಂಪ್ರಾದಾಯ ಬೆಳೆದು ಬಂದು ಸತತ 25 ವರ್ಷ ಅಧ್ಯಕ್ಷನಾಗಿ ಸೇವೆ ಸಲ್ಲಿಸಿ ಸಂಘವನ್ನು ಪ್ರಗತಿಯ ಹಾದಿಯಲ್ಲ ಕೊಂಡಯ್ಯುದು ಪರಿಣಾಮ ನನ್ನ ಅಧಿಕಾರವಧಿಯಲ್ಲಿ ತಾಲೂಕಿನ ಉತ್ತಮ ಡೇರಿ ಪ್ರಶಸ್ತಿ ಗಳಿಸಿದ್ದು, ಬಮೂಲ್ ಹಾಗೂ ಸರಕಾರದ ಸವಲತ್ತುಗಳನ್ನು ರೈತರಿಗೆ ವಿತರಿಸಿ ಉತ್ತಮ ನಿರ್ವಹಣೆಯ ಹಾದಿಯಲ್ಲಿ ನಡೆದು ಬಂದಿತ್ತು.
ಇತ್ತಿಚಗೆ 2023-28ನೇ ಸಾಲಿಗೆ ನಡೆದ ಆಡಳಿತ ಮಂಡಳಿ ಚುನಾವಣೆ ಸಂದರ್ಭದಲ್ಲಿ ಒಮ್ಮತ ಮೂಡದೇ ಚುನಾವಣೆ ನಡೆಯುವ ಸ್ಥಿತಿ ನಿರ್ಮಾಣವಾಗಿದ್ದರಿಂದ ನಾನು 77 ಮತಗಳ ಹಾಗೂ ಹಾಲಿ ಅಧ್ಯಕ್ಷರಾಗಿರುವ ಹೆಚ್.ಟಿ.ವೆಂಕಟೇಶ್ 67 ಮತಗಳ ಅಂತರದಿಂದ ಯಾವುದೇ ಪಕ್ಷದ ಬೆಂಬಲ ಪಡೆಯದೇ ಸ್ವತಂತ್ರವಾಗಿ ಸ್ಪರ್ಧಿಸಿದ್ದೇವು. ಷೇರುದಾರರು ಪಕ್ಷವನ್ನು ನೋಡದೇ ಪಕ್ಷಾತೀತವಾಗಿ ಜನರು ಬೆಂಬಲಿಸಿ ನಮ್ಮನ್ನು ಅತ್ಯಧಿಕ ಮತ ಕೊಟ್ಟು ಆಯ್ಕೆ ಮಾಡಿದ್ದಾರೆ.
ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ಸಹ ನಾವು ಯಾವುದೇ ಪಕ್ಷವನ್ನು ಗುರುತಿಸಿಕೊಳ್ಳದೇ ಚುನಾವಣೆಯಲ್ಲಿ ಹೆಚ್.ಟಿ. ವೆಂಕಟೇಶ್ ರವರು ಸ್ಪರ್ಧಿಸಿ ನೂತನ ಅಧ್ಯಕ್ಷರಾಗಿ ಗೆಲುವು ಸಾಧಿಸಿದ್ದಾರೆ. ಈ ಚುನಾವಣೆಯಲ್ಲೂ ಸಹ ಹಾಗೂ ಬಿಜೆಪಿ ಪಕ್ಷದ ಬೆಂಬಲಿತರು ಪಕ್ಷ ಬೇಧವೆಣಿಸದೆ ನಮಗೆ ಮತ ನೀಡಿದ್ದಾರೆ ವಿನಹಃ ಇಲ್ಲಿ ನಾವು ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಂಡಿಲ್ಲ ಎಂದರು.
ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷ ಹೆಚ್.ಟಿ. ವೆಂಕಟೇಶ್ ಮಾತನಾಡಿ, ಕಳೆದ 10ವರ್ಷಗಳಿಂದ ನಿರ್ದೇಶಕನಾಗಿ ರೈತರಿಗೆ ಮತ್ತು ಸಂಘದ ಅಭಿವೃದ್ಧಿಗೆ ಶ್ರಮಿಸಿದ್ದು, ಈ ಬಾರಿ ನಡೆದ ಚುನಾವಣೆಯಲ್ಲಿ 67 ಮತಗಳ ಅಂತರದಿಂದ ಷೇರುದಾರರು ಪಕ್ಷಾತೀತವಾಗಿ ಅಯ್ಕೆ ಮಾಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಪಕ್ಷದಿಂದ ಬೆಂಬಲಕ್ಕೆ ನಿಲ್ಲಲು ಯಾರೋಬ್ಬರು ಮುಂದೆ ಬಂದಿಲ್ಲ, ಗೆದ್ದ ನಂತರ ಎರಡೂ ಪಕ್ಷದವರು ನಮ್ಮ ಬೆಂಬಲಿತ ಅಭ್ಯರ್ಥಿ ಎಂದು ಪತ್ರಿಕೆಗಳಲ್ಲಿ ಬಿಂಬಿಸುತ್ತಿರುವುದು ಕಂಡು ಬಂದಿದೆ.
ನಾವು ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಂಡಿಲ್ಲ ನಮ್ಮ ಅಭಿವೃದ್ಧಿಗೆಕೆಲಸ ಮೆಚ್ಚಿ, ನಮ್ಮ ಮೇಲೆ ವಿಶ್ವಾಸವಿಟ್ಟು, ನಮ್ಮನ್ನು ಅಯ್ಕೆ ಮಾಡಿದ್ದಾರೆ. ಷೇರುದಾರರು ಸಹ ಪಕ್ಷವನ್ನು ಬದಿಗೊತ್ತಿ ನನಗೆ ಮತ ಕೊಟ್ಟು ಅಧ್ಯಕ್ಷರನ್ನಾಗಿ ಅಯ್ಕೆ ಮಾಡಲು ಸಹಕಾರ ನೀಡಿದ್ದಾರೆ ಎಂದರು.