ಸುದ್ದಿಮೂಲ ವಾರ್ತೆ
ಸಿರುಗುಪ್ಪ,ಸೆ.29: ನಗರದಲ್ಲಿನ ರಾಜ್ಯ ಹೆದ್ದಾರಿ ಬಳಿಯ ಬಯಲು ಜಾಗೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ವಿಶ್ವ ಹಿಂದೂ ಪರಿಷತ್ ಹಿಂದೂ ಮಹಾಸಭಾ ಮತ್ತು ಬಜರಂಗದಳ ಇವರ ವತಿಯಿಂದ ಇದೇ ತಿಂಗಳ 19ರಂದು ಪ್ರತಿಷ್ಠಾಪನೆ ಮಾಡಲಾಗಿದ್ದ 6ನೇ ವರ್ಷದ ಬೃಹತ್ ಗಣೇಶ ಮೂರ್ತಿಯನ್ನು ಇಂದು ಶುಕ್ರವಾರ ವಿಸರ್ಜನೆಗಾಗಿ ಎಲ್ಲ ಸಿದ್ಧತೆಗಳನ್ನು ಮಾಡಲಾಗಿದೆ.
ಪ್ರತಿ ವರ್ಷದಂತೆಯೇ ರಾಜ್ಯ ಹೆದ್ದಾರಿ ರಸ್ತೆ ಮಹಾತ್ಮ ಗಾಂಧಿ ವೃತ್ತ, ಅಂಬೇಡ್ಕರ್ ವೃತ್ತ, ಚೌಡೇಶ್ವರಿ ವೃತ್ತ, ಕಾಳಿಕಾ ಕಮಠೇಶ್ವರ ದೇವಸ್ಥಾನ, ಕೊಟ್ಟೂರು ಬಸವೇಶ್ವರ ದೇವಸ್ಥಾನ, ಸುಂಕ್ಲಮ್ಮ ದೇವಿ ದೇವಸ್ಥಾನ ಮುಖಾಂತರ ಶ್ರೀ ಶಂಭುಲಿಂಗ ದೇವಸ್ಥಾನ ಬಳಿ ಇರುವ ತುಂಗಭದ್ರಾ ನದಿಯಲ್ಲಿ ವಿಸರ್ಜನಾ ಮೆರವಣಿಗೆ ಹಮ್ಮಿಕೊಳ್ಳಲಾಗಿರುವ ಕಾರಣ ಇತ್ತ ಪೊಲೀಸ್ ಇಲಾಖೆಯೂ ವಿಶೇಷವಾಗಿ ಹೆಚ್ಚಿನ ಬಂದೋಬಸ್ತ್ ಮಾಡಿಕೊಂಡಿದೆ ಈ ಹಿನ್ನೆಲೆಯಲ್ಲಿ ನಾಲ್ಕು ಡಿವೈಎಸ್ಪಿ ಗಳು 13 ಸಿಪಿಐ ಗಳು 30 ಪಿಎಸ್ಐ ಗಳು ನಾಲ್ಕು ಕೆ ಎಸ್ ಆರ್ ಪಿ ತಂಡಗಳು ಹಾಗೂ ಸಾವಿರಕ್ಕೂ ಹೆಚ್ಚು ಜನ ಪೊಲೀಸ್ ಸಿಬ್ಬಂದಿ ಈ ಬಂಧೋಬಸ್ತು ಕಾರ್ಯಕ್ರಮಕ್ಕಾಗಿ ನಿಯೋಜನೆ ಮಾಡಲಾಗಿದೆ ಜೊತೆಗೆ ಜಿಲ್ಲಾ ಎಸ್ ಪಿ ಮತ್ತು ಹೆಚ್ಚುವರಿ ಎಸ್ಪಿ ಇವರುಗಳು ಸ್ಥಳದಲ್ಲಿಯೇ ಮೊಕ್ಕಾಂ ಹೊಡಿ ಇಲಾಖೆಯ ಅಧಿಕಾರಿಗಳನ್ನು ಸಕ್ರಮ ಕರ್ತವ್ಯ ನಿರ್ವಹಿಸುವಂತೆ ನಿಗಾ ವಹಿಸಲಿದ್ದಾರೆ.