ಸುದ್ದಿಮೂಲ ವಾರ್ತೆ ಬಳಗಾನೂರು, ಸೆ.27:
ಪಟ್ಟಣ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಶುಕ್ರವಾರ 104 ಮಿ.ಲಿ ಮೀಟರ್ಮಳೆ ಸುರಿದ ದಾಖಲಾಗಿದೆ.
ಅದಲ್ಲದೆ ಮಳೆಯಿಂದಾಗಿ ಮಸ್ಕಿಿ ನಾಲೆ ಮಾರಲದಿನ್ನಿಿ ಡ್ಯಾಾಂನಿಂದ ಸುಮಾರು 400 ಕ್ಯೂಸೆಕ್ ನೀರು ಹರಿ ಬಿಟ್ಟಿಿರುವ ಹಿನ್ನಲೆಯಲ್ಲಿ ಮಳೆ ನೀರು ಸೇರಿ ಪಟ್ಟಣದ ಹಿರೇಹಳ್ಳ ತುಂಬಿಹರಿಯಿತು. ಜನರು ಹಾಗೂ ಜಾನುವಾರುಗಳು ಹಳ್ಳದ ಸಮೀಪ ಹೋಗದಂತೆ ಎಚ್ಚರಿಸಿ ದಂಡೆಯ ಎರಡು ಕಡೆ ಬ್ಯಾಾರಿಕೇಡ್ಗಳನ್ನು ಹಾಕಿ ಪಪಂ ಅಧಿಕಾರಿಗಳು ಮುನ್ನೆೆಚ್ಚರಿಕೆ ವಹಿಸಿದರು.
ಮಳೆ ನೀರು ಮಾರಲದಿನ್ನಿಿ ಡ್ಯಾಾಂ ನೀರು ಸೇರಿ ಹಿರೇ ಹಳ್ಳಕ್ಕೆೆ ಹರಿದು ಬಂದಿರುವ ಹಿನ್ನಲೆಯಲ್ಲಿ ಹಿರೇ ಹಳ್ಳದ ನೀರು ಪಕ್ಕದ ಹೊಲಗದ್ದೆೆಗಳಿಗೆ ನುಗ್ಗಿಿ ಮಳೆ ನೀರು ಹೆಚ್ಚುವರಿ ನೀರು ನುಗ್ಗಿಿ ಬೆಳೆ ಹಾನಿಗಿಡಾಗಿವೆ.
ಮುನ್ನೆೆಚ್ಚರಿಕೆ ಕ್ರಮ: ಪೌರಕಾರ್ಮಿಕರೊಂದಿಗೆ ಹಳ್ಳದ ಸೇತುಗೆಯ ನೀರಿನೊಂದಿಗೆ ಪೈಪ್ಗೆ ಅಡ್ಡವಾಗಿಬರುತ್ತಿಿರುವ ತ್ಯಾಾಜ್ಯವನ್ನು ತೆರವುಗೊಳಿಸುತ್ತ ಸೇತುವೆಯಲ್ಲಿ ನೀರು ಸರಾಗವಾಗಿ ಹರಿಯುಂತೆ ಕ್ರಮ ಕೈಕೊಂಡರು. ಜನರು ಹಾಗೂ ಜಾನುವಾರುಗಳು ಹಳ್ಳದ ಸಮೀಪ ಹೋಗದಂತೆ ಎಚ್ಚರಿಸಿದಂಡೆಯ ಎರಡು ಕಡೆ ಬ್ಯಾಾರಿಕೇಡ್ಗಳನ್ನು ಹಾಕಿ ಪಪಂ ಸಿಬ್ಬಂದಿಗಳು ಮುನ್ನೆೆಚ್ಚರಿಕೆ ವಹಿಸಿದರು.
ಬಳಗಾನೂರು: ಮಸ್ಕಿಿ ಮಾರಲದಿನ್ನಿಿಡ್ಯಾಾಂನಿಂದ ಹೆಚ್ಚುವರಿ ನೀರು ತುಂಬಿಹರಿದ ಹಿರೇಹಳ್ಳ 104 ಮಿ.ಲಿ ಮೀಟರ ಮಳೆ ದಾಖಲು
