ಸುದ್ದಿಮೂಲ ವಾರ್ತೆ ಮಾನ್ವಿಿ, ಸೆ.27:
ಗ್ರಾಾಮೀಣ ಭಾಗದಲ್ಲಿ ವಸತಿ ಶಾಲೆಗಳನ್ನು ನಿರ್ಮಿಸುವ ಮೂಲಕ ಗ್ರಾಾಮೀಣ ಮಕ್ಕಳ ಶಿಕ್ಷಣಕ್ಕೆೆ ಹೆಚ್ಚಿಿನ ಆದ್ಯತೆ ನೀಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.
ಅವರು ಶನಿವಾರ ಮಾನ್ವಿಿ ತಾಲೂಕಿನ ಹಿರೇಕೊಟ್ನೆೆಕಲ್ ಗ್ರಾಾಮದಲ್ಲಿ 22 ಕೋಟಿ ರೂ. ವೆಚ್ಚದ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲಾ ನಿರ್ಮಾಣಕ್ಕೆೆ ಸಚಿವ ಎನ್.ಎಸ್.ಬೋಸರಾಜು ಹಾಗೂ ಶಾಸಕ ಹಂಪಯ್ಯ ನಾಯಕ ಅವರ ಜೊತೆಯಾಗಿ ಶಂಕುಸ್ಥಾಾಪನೆ ನೆರವೇರಿಸಿ ನಂತರ ಮಾತನಾಡುತ್ತಿಿದ್ದರು.
ಜನಪರ 5 ಗ್ಯಾಾರಂಟಿಗಳೊಂದಿಗೆ ನಮ್ಮ ಸರ್ಕಾರದ ಆಡಳಿತಾವಧಿಯಲ್ಲಿ ಸಂವಿಧಾನಾತ್ಮಕವಾಗಿ 371 ಜೆ ಶಾಶ್ವತ ಗ್ಯಾಾರಂಟಿ ಯೋಜನೆಯನ್ನು ನೀಡಿದ್ದೇವೆ. 371 ಜೆ ಮೂಲಕ ವಿಶೇಷ ಸ್ಥಾಾನಮಾನದ ಜೊತೆಗೆ ಕಲ್ಯಾಾಣ ಕರ್ನಾಟಕ ಪ್ರದೇಶ ಅಭಿವೃದ್ಧಿಿ ಮಂಡಳಿಯಿಂದ ಈ ಭಾಗದ ಸರ್ವಾಂಗೀಣ ಅಭಿವೃದ್ಧಿಿಗೆ ಪ್ರಯತ್ನಿಿಸುತ್ತಿಿದ್ದೇವೆ ಎಂದು ಹೇಳಿದರು.
ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್. ಎಸ್. ಬೋಸರಾಜು ಮಾತನಾಡಿ ಕಲ್ಯಾಾಣ ಕರ್ನಾಟಕ ಪ್ರದೇಶಾಭಿವೃದ್ಧಿಿ ಮಂಡಳಿಯಿಂದ ಶಿಕ್ಷಣಕ್ಕೆೆ ಹೆಚ್ಚಿಿನ ಅನುದಾನವನ್ನು ಮೀಸಲಿಟ್ಟಿಿದ್ದೇವೆ. ಖಾಲಿಯಿರುವ 5800 ಶಾಲಾ ಶಿಕ್ಷಕರನ್ನು ಎರಡು ತಿಂಗಳೊಳಗಾಗಿ ನೇಮಕಾತಿ ಮಾಡಲಾಗುವುದು. ಸದರಿ ವಸತಿ ಶಾಲೆಯ ಕಟ್ಟಡವನ್ನು ತ್ವರಿತಗತಿಯಲ್ಲಿ ಗುಣಮಟ್ಟದೊಂದಿಗೆ ಕಾಮಗಾರಿ ಮುಗಿಸಿ ಒಂದು ವರ್ಷದ ಒಳಗಾಗಿ ಮಾನ್ವಿಿಯ ಬಾಡಿಗೆ ಕಟ್ಟಡದಲ್ಲಿರುವ ಶಾಲೆಯನ್ನು ಸ್ಥಳಾಂತರಿಸಲಾಗುವುದು ಎಂದು ಹೇಳಿದರು.
ಶಾಸಕ ಹಂಪಯ್ಯ ನಾಯಕ ಮಾತನಾಡಿ, ಜನಪರ ಅಭಿವೃದ್ದಿ ಕಾರ್ಯಗಳೊಂದಿಗೆ ನಾವು ನೀಡಿದ 5 ಗ್ಯಾಾರಂಟಿ ಭರವಸೆಗಳನ್ನು ಈಡೇರಿಸಿದ್ದೇವೆ. ಮಕ್ಕಳ ಶಿಕ್ಷಣಕ್ಕೆೆ ಹೆಚ್ಚಿಿನ ಅದ್ಯತೆ ನೀಡಲು ಗ್ರಾಾಮೀಣ ಭಾಗದಲ್ಲಿ ವಸತಿ ಶಾಲೆಗಳನ್ನು ನಿರ್ಮಿಸಲಾಗುತ್ತಿಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಿತೀಶ್. ಕೆ, ಜಿಲ್ಲಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕಂದೂ, ತಹಸೀಲ್ದಾಾರ್ಭೀಮರಾಯ, ಗ್ಯಾಾರಂಟಿ ಯೋಜನೆಗಳ ಅನುಷ್ಠಾಾನ ಸಮಿತಿ ತಾಲೂಕಾ ಅಧ್ಯಕ್ಷ ಬಿ.ಕೆ ಅಮರೇಶಪ್ಪ, ಬ್ಲಾಾಕ್ ಕಾಂಗ್ರೆೆಸ್ ಸಮಿತಿ ಅಧ್ಯಕ್ಷ ಅಬ್ದುಲ್ ಗೂರ್ ಸಾಬ್, ಮುಖಂಡರಾದ ದೊಡ್ಡಬಸಪ್ಪಗೌಡ ಭೋಗಾವತಿ, ಗೋಪಾಲ್ ಕೃಷ್ಣ ಅಮರೇಶ್ವರ ಕ್ಯಾಾಂಪ್, ಕೆ.ಶಾಂತಪ್ಪ, ಜಿ.ಶಿವಮೂರ್ತಿ, ಶರಣಯ್ಯ ನಾಯಕ ಗುಡದಿನ್ನಿಿ, ಬಾಲಸ್ವಾಾಮಿ ಕೊಡ್ಲಿಿ,, ಬಸನಗೌಡ ಮಾಲಿ ಪಾಟೀಲ್, ಅಮರೇಗೌಡ ಹಂಚಿನಾಳ, ಚಂದ್ರಶೇಖರ ಕುರ್ಡಿ, ಡಾ. ಗುರುಶರ್ಮಾ ಪೋತ್ನಾಾಳ್, ರುದ್ರಪ್ಪ ಅಂಗಡಿ, ದೇವೇಂದ್ರಪ್ಪ, ಖಾಲೀದ್ ಖಾದ್ರಿಿ, ರೌಡೂರು ಮಹಾಂತೇಶಸ್ವಾಾಮಿ, ರಾಜಾ ಸುಭಾಶ್ಚಂದ್ರ ನಾಯಕ ಮುಂತಾದವರು ಉಪಸ್ಥಿಿತರಿದ್ದರು.
ಹಿರೇಕೊಟ್ನೆೆಕಲ್: 22 ಕೋ.ರೂ.ವೆಚ್ಚದ ಅಂಬೇಡ್ಕರ್ ವಸತಿ ಶಾಲೆಗೆ ಶಂಕುಸ್ಥಾಾಪನೆ ಗ್ರಾಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಿಗೆ ಹೆಚ್ಚು ಒತ್ತು-ಡಾ.ಶರಣಪ್ರಕಾಶ ಪಾಟೀಲ್

