ಸುದ್ದಿಮೂಲ ವಾರ್ತೆ ಮಸ್ಕಿ, ಜ.01:
ಇತಿಹಾಸ ನೋಡುವ ಕ್ರಮ ಬದಲಾಗಬೇಕು ಎಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಾಲಯ ಕುಲಪತಿ ಪ್ರೊೊ. ಶಿವಾನಂದ ಕೆಳಗಿನಮನಿ ಅಭಿಪ್ರಾಾಯ ಪಟ್ಟರು. ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಾಲಯ ಹಾಗೂ ದೇವಾನಪ್ರಿಿಯ ಅಶೋಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಸ್ಕಿಿ ಇವರ ಸಹಯೋಗದಲ್ಲಿ ಹಮ್ಮಿಿಕೊಂಡಿದ್ದ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣವಾದ ಮಸ್ಕಿಿ ಪರಿಸರ : ಪುರಾತತ್ವ ಇತಿಹಾಸ ಮತ್ತು ಸಂಸ್ಕೃತಿ ’ ಕಾರ್ಯಕ್ರಮವನ್ನು ಉದ್ಘಾಾಟಿಸಿ ಮಾತನಾಡಿದರು.
ಮಸ್ಕಿಿಯಲ್ಲಿ ಎಲ್ಲಾ ಯುಗಗಳ ಐತಿಹಾಸಿಕ ಆಕರಗಳಿವೆ. ಇಲ್ಲಿನ ಬೆಟ್ಟಗಳಲ್ಲಿ ನಾಗರಿಕ, ಸಾಂಸ್ಕೃತಿಕ ಕುರುಹುಗಳು ಯಥೇಚ್ಛ ಪ್ರಮಾಣದಲ್ಲಿ ದೊರಕಿವೆ ವಿವಿಧ ಧಾರ್ಮಿಕ ಪಂಥಗಳಾದ ಬೌದ್ಧ, ಜೈನ, ವೈಷ್ಣವ,ವೀರಶೈವ, ಸಿದ್ದ,ನಾಥ, ಯೋಗಿ, ಜೋಗಿ, ತಾಣಗಳು ಕಂಡುಬರುತ್ತವೆ. ಇಲ್ಲಿನ ಮಾನವ ವಸತಿ ಜಾಗತಿಕ ಮಟ್ಟದಲ್ಲಿ ಮಹತ್ವ ಪಡೆದುಕೊಂಡಿದೆ ಎಂದು ತಿಳಿಸಿದರು.
ಇಲ್ಲಿನ ಜನ ವಸತಿ ಕೇಂದ್ರಗಳು ವಿದೇಶ ಸಂಶೋಧಕರಿಂದ, ಉತ್ತರ ಭಾರತದ ಸಂಶೋಧಕರಿಂದ ನಿರಂತರ ಉತ್ಖನನ ಮಾಡಿ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತಿಿದ್ದಾರೆ, ಇಲ್ಲಿನ ಇತಿಹಾಸ ನಿರಂತರ ವಿಸ್ತಾಾರವಾಗುತ್ತ ಹೋಗುತ್ತಿಿದ್ದು ಇವುಗಳನ್ನು ಸಾಮಾಜಿಕ, ಧಾರ್ಮಿಕ ಹಿನ್ನೆೆಲೆಯಲ್ಲಿ ನೋಡಬೇಕೆಂದರು.
ಇದೆ ವಿಚಾರ ಸಂಕಿರಣದಲ್ಲಿ ವಿವಿಧ ಗೋಷ್ಠಿಿಗಳು ನಡೆದವು ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷ ಡಾ. ದೇವರಕೊಂಡ ರೆಡ್ಡಿಿ ಯವರು ಕರ್ನಾಟಕದಲ್ಲಿ ಅಶೋಕನ ಶಾಸನಗಳ ಕುರಿತು ವಿಷಯ ಮಂಡಿಸಿದರು, ಅಶೋಕನ ಹೆಸರಿರುವ ಶಾಸನ ಮೊದಲ ಬಾರಿ ಪತ್ತೆೆಯಾದದ್ದು ಮಸ್ಕಿಿಯಲ್ಲಿ ಅದೇ ರೀತಿ ವಿವಿಧ ಭಾಗದಲ್ಲಿ ಅಶೋಕನ ಶಾಸನಗಳಿಂದ ಅವನ ಸಾಮ್ರಾಾಜ್ಯದ ವ್ಯಾಾಪ್ತಿಿ, ದಮ್ಮ ಪ್ರಚಾರ ಅಶೋಕ ಗೆಲುವಿನ ತುದಿಯಲ್ಲಿದ್ದರೂ ವೈರಾಗ್ಯ ಪಡೆದು ಗೆಲುವಿನಲ್ಲಿ ಸೋಲನ್ನು ಕಂಡು ಗೆಲುವು ಪಡೆದರು ಎಂದು ಹೇಳಿದರು.
ಡಾ. ರಮೇಶ ನಾಯಕ ಕನ್ನಡ ವಿಶ್ವವಿದ್ಯಾಾಲಯ, ಹಂಪಿ ಇತಿಹಾಸ ಮುಖ್ಯಸ್ಥ ಇವರು ಮಸ್ಕಿಿ ಪರಿಸರದ ಪ್ರಾಾಗೈತಿಹಾಸಿಕ ಕುರಿತು ವಿಷಯ ಮಂಡಿಸಿದರು. 1773ರ ನಂತರ ಬ್ರಿಿಟಿಷ್ ವಸಾಹತುಶಾಹಿ ಆಳ್ವಿಿಕೆಯಲ್ಲಿ ಹಲವಾರು ಪ್ರಾಾಚೀನ ತಾಣಗಳ ಸಂಶೋಧನೆ ಕೈಗೊಳ್ಳಲಾಯಿತು.ಬಿ.ಕೆ ಥಾಪರ್ ರವರು ಉತ್ಕನನ ಮಾಡಿ ಇಲ್ಲಿನ ಪರಿಸರ ಸುಮಾರು 3500 ವರ್ಷಗಳ ಹಿಂದೆ ಬೃಹತ್ ಶಿಲಾಯುಗ ಸಂಸ್ಕೃತಿ ಕಾಲದಲ್ಲಿ ಕಬ್ಬಿಿಣ ಬಳಕೆಯಿಂದ ಕೃಷಿ ವಿಕಸನಗೊಂಡು, ವ್ಯಾಾಪಾರ ಅಧಿಕವಾಗಿ ರೋಮ್, ಗ್ರೀೀಕ್ ನೊಂದಿಗೆ ವ್ಯಾಾಪಾರ ಸಂಪರ್ಕಗಳು ಬೆಳೆದವು. ಇಲ್ಲಿನ ಮಡಿಕೆಗಳ ಮೇಲೆ ರೋಮ್ ನ ಪ್ರಭಾವ ಕಾಣಬಹುದು ಇಲ್ಲಿನ ಕೆಲವು ಕುರುಹುಗಳು ಸಿಂಧೂ ನಾಗರಿಕತೆಯೊಂದಿಗೆ ಸಾಮ್ಯತೆ ಹೊಂದಿವೆ. ಈ ಭಾಗದಲ್ಲಿ ಉತ್ಕನನ ನಡೆಯುತ್ತಿಿರುವುದರಿಂದ ಹೊಸ ಹೊಸ ಕುರುಹುಗಳು ಪತ್ತೆೆಯಾಗುತ್ತಿಿವೆ, ಇದರಿಂದ ಸಾಮಾಜಿಕ, ಧಾರ್ಮಿಕ ಅಂಶಗಳನ್ನು ತಿಳಿಯಬಹುದು ಎಂದರು. ಡಾ.ಎಲ್. ಪಿ. ಮಾರುತಿ, ಕರ್ನಾಟಕ ವಿಶ್ವವಿದ್ಯಾಾಲಯ, ಧಾರವಾಡ ಇವರು ಮಸ್ಕಿಿ ಪರಿಸರದ ಇತಿಹಾಸ ಮತ್ತು ಸಂಸ್ಕೃತಿ ಬಗ್ಗೆೆ ವಿಷಯ ಮಂಡನೆ ಮಾಡಿ ಇಲ್ಲಿನ ಹೊಸ ವಿಚಾರಗಳ ಬಗ್ಗೆೆ ಬೆಳಕು ಚೆಲ್ಲಿದರು. ಮುಖ್ಯ ಅತಿಥಿಗಳಾಗಿ ಡಾ. ಎ. ಚನ್ನಪ್ಪ ಕುಲ ಸಚಿವರು ಆಡಳಿತ ),ಗೌರವ ಉಪಸ್ಥಿಿತರಾಗಿ ಪ್ರೊೊ. ಜ್ಯೋೋತಿ ದಮ್ಮ ಪ್ರಕಾಶ್ ಕುಲಸಚಿವರು (ಮೌಲ್ಯಮಾಪನ), ಶ್ರೀಮತಿ ಗಾಯತ್ರಿಿ,ಹಣಕಾಸು ಅಧಿಕಾರಿಗಳು, ಡಾ. ಕೆ. ವೆಂಕಟೇಶ ಇತಿಹಾಸ ವಿಭಾಗ ಮುಖ್ಯಸ್ಥರು, ಇತಿಹಾಸ ಸಂಯೋಜಕರಾದ ಡಾ. ಮಂಜುನಾಥ. ಕೆ. ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ಡಾ. ಮಹಾಂತಗೌಡ ಪಾಟೀಲ್ ವಹಿಸಿದ್ದರು. ಇತಿಹಾಸ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಆಶಾ. ಸಿ. ಸಂಯೋಜಕ ಸಣ್ಣಪ್ಪ ನಾಯಕ, ಇವರು ಸ್ವಾಾಗತಿಸಿದರು. ಐ.ಕ್ಯೂ. ಎ. ಸಿ ಸಂಯೋಜಕ ಶ್ರೀಮತಿ ರೋಹಿಣಿ ಮೂರ್ತಿ, ಹಿರಿಯ ಪ್ರಾಾಧ್ಯಾಾಪಕರಾದ ರಾಮಣ್ಣ ಜುಮ್ಮ, ಬಸವರಾಜ, ಸಹಾಯಕ ಪ್ರಾಾಧ್ಯಾಾಪಕ ಶಿವ ಗ್ಯಾಾನಪ್ಪ, ಹಾಜಿಬಾಬಾ, ಪರಮಾನಂದ ಹಂಗರಗಿ ಉಪಸ್ಥಿಿತರಿದ್ದರು. ಸಮಸ್ತ ವಿಭಾಗಗಳ ಮುಖ್ಯಸ್ಥರು, ಅತಿಥಿ ಉಪನ್ಯಾಾಸಕರು, ಇತಿಹಾಸ ಆಸಕ್ತರು, ವಿವಿಧ ಕಾಲೇಜುಗಳ ಇತಿಹಾಸ ಪ್ರಾಾಧ್ಯಾಾಪಕರು ಭಾಗವಹಿಸಿದ್ದರು.ಕಾರ್ಯಕ್ರಮ ಶ್ರೀನಿವಾಸ ಯಾಳಗಿ ನಿರೂಪಿಸಿದರು.
ಇತಿಹಾಸ ವಿವಿಧ ಆಯಾಮಗಳಿಂದ ಗುರುತಿಸಬೇಕು -ಕುಲಪತಿ ಪ್ರೊ. ಶಿವಾನಂದ ಕೆಳಗಿನಮನಿ

