ಸುದ್ದಿಮೂಲ ವಾರ್ತೆ ಕೊಪ್ಪಳ, ೆ.26:
ಕೊಪ್ಪಳದ ಹುಲಿಕೇರಿಯಲ್ಲಿ ಒತ್ತುವರಿ ಪ್ರಕರಣದಲ್ಲಿ ಸಮೀಕ್ಷೆಯಾದ ನಂತರ ಯಾರೇ ಆಗಲಿ ಕ್ರಮ ಕೈಗೊಳ್ಳಲಿ ಎಂದು ಸಂಸದ ರಾಜಶೇಖರ ಹಿಟ್ನಾಾಳ ಹೇಳಿದ್ದಾಾರೆ.
ಅವರು ಇಂದು ಕೊಪ್ಪಳದಲ್ಲಿ ಮಾಧ್ಯಮಗೋಷ್ಠಿಿ ನಡೆಸಿ ದೇವಸ್ಥಾಾನ ಹಾಗು ದರ್ಗಾ ಕಮಿಟಿಯವರು ನನ್ನ ಬಳಿ ಬಂದಿದ್ದರು. ದರ್ಗಾ ಕಮಿಟಿಯವರು ದೇವಸ್ಥಾಾನ ಅಭಿವೃದ್ದಿಯಾಗಿದೆ. ದರ್ಗಾಕ್ಕೆೆ ದಾರಿ ಇಲ್ಲ.ರಸ್ತೆೆ ನಿರ್ಮಿಸಿಕೊಳ್ಳುತ್ತೇವೆ ಎಂದರು. ಅನುಕೂಲ ನೋಡಿ ರಸ್ತೆೆ ನಿರ್ಮಿಸಿಕೊಳ್ಳಿಿ ಎಂದಿದ್ದೆೆ. ಹಾಗಂತ ನಾನೇ ರಸ್ತೆೆ ನಿರ್ಮಿಸಿ ಎಂದಿಲ್ಲ. ರಸ್ತೆೆ ನಿರ್ಮಾಣಕ್ಕೆೆ ನಾನು ಹಣ ನೀಡಿಲ್ಲ. ಕಾನೂನು ಬದ್ದವಾಗಿದ್ದರೆ ಅನುದಾನ ನೀಡುವುದಾಗಿ ಹೇಳಿದ್ದೆೆ. ದರ್ಗಾಕ್ಕೆೆ ಹೋಗಲು ರಸ್ತೆೆ ನಿರ್ಮಿಸುತ್ತಿಿರುವದಕ್ಕೆೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. ಈ ಮೊದಲೇ ಎಂಎಲ್ಸಿ ಹೇಮಲತಾರಿಗೆ ಮಾಹಿತಿ ಇತ್ತು. ರಸ್ತೆೆಗಾಗಿ ಕೆರೆ ನೀರು ಖಾಲಿ ಮಾಡುತ್ತಿಿರುವುದು ಗೊತ್ತಿಿಲ್ಲವಾ? ರಸ್ತೆೆ ನಿರ್ಮಿಸುವವರೆಗೂ ಯಾಕೆ ಸುಮ್ಮನೆ ಇದ್ದಾಾರೆ ಅವರದ್ದೂ ತಪ್ಪಿಿದೆ. ಈಗ ಸರ್ವೇ ಇಲಾಖೆಯಿಂದ ಸಮಿಕ್ಷೆಯಾದ ನಂತರ ಜಿಲ್ಲಾಾಡಳಿತ ಕ್ರಮ ಕೈಗೊಳ್ಳುತ್ತೆೆ ಎಂದು ಹೇಳಿದರು.
ರಾಘವೇಂದ್ರ ಹಿಟ್ನಾಾಳ ಸಚಿವರಾಗಲಿ : ಸಹೋದರ ರಾಘವೇಂದ್ರ ಹಿಟ್ನಾಾಳ ಸಚಿವರಾಗುವ ಅರ್ಹತೆ ಇದೆ ಎಂದು ಅಣ್ಣನ ಪರವಾಗಿ ತಮ್ಮ ರಾಜಶೇಖರ ಹಿಟ್ನಾಾಳ ಹೇಳಿಕೆ ನೀಡಿದ್ದಾಾರೆ.ರಾಘವೇಂದ್ರ ಹಿಟ್ನಾಾಳ ಮೂರು ಬಾರಿ ಶಾಸಕರಾಗಿದ್ದಾಾರೆ. ಅವರಿಗೆ ಸಚಿವ ಸ್ಥಾಾನ ನೀಡಿದರೆ ನಿಭಾಯಿಸುತಾರೆ ಎಂದರು.
ಮೊದಲ ಬಾರಿ ಶಾಸಕರು ಸಚಿವ ಸ್ಥಾಾನ ಕೇಳುವದರಲ್ಲಿ ತಪ್ಪೇನಿಲ್ಲ ಎಲ್ಲರಿಗೂ ಆಸೆ ಇರುತ್ತೆೆ ರಾಜಕೀಯವಾಗಿ ಮೇಲೆ ಬರಬೇಕೆಂಬ ಆಸೆ ಇದೆ. ಆದರೆ ಹೈಕಮಾಂಡ ನಿರ್ಧಾರಕ್ಕೆೆ ಬದ್ದರಾಗಿರುತ್ತಾಾರೆ ಎಂದರು.
ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿರುತ್ತಾಾರೆ. ಹೈಕಮಾಂಡ ಈಗಾಗಲೇ ಹೇಳಿದೆ.ಸಿಎಂ ಸ್ಥಾಾನದ ವ್ಯತ್ಯಾಾಸವಾಗಲಿಕ್ಕಿಿಲ್ಲ. ಹೈಕಮಾಂಡ ಏನು ತೀರ್ಮಾನಿಸುತ್ತಾಾರೊ ನೋಡಬೇಕು ಎಂದರು.
ಹಿಟ್ನಾಾಳ ಬ್ರದರ್ಸ್ ಕಾರ್ಖಾನೆಯವರ ಪರವಿದ್ದಾಾರೆ ಎಂಬ ಜನಾರ್ದನರಡ್ಡಿಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಿಯಿಸಿದ ಅವರು ಕಾರ್ಖಾನೆ ವಿಷಯದಲ್ಲಿ ರಾಜಕಾರಣ ಬೇಡ. ಅವರು ಶಾಸಕರಿದ್ದಾಾರೆ. ಮೊನ್ನೆೆ ಹೋರಾಟದಲ್ಲಿ ಬಿಜೆಪಿ ಯವರು ನಾವು ಭಾಗಿಯಾಗಿದ್ದವು, ರಾಜ್ಯ ಹಾಗೂ ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಿ ಬಿಎಸ್ಪಿಿಎಲ್ ವಿಸ್ತರಣೆ ತಡೆಗೆ ಯತ್ನಿಿಸುತ್ತೇವೆ ಎಂದರು.
ಅದ್ದೂರಿ ಹೋಳಿ;ಮಾ 4 ರಂದು ಅದ್ಧೂರಿ ಹೋಳಿ ಆಚರಣೆ ಆಯೋಜನೆ ಮಾಡಲಾಗಿದೆ.ಜಿಲ್ಲಾಾ ಅಥ್ಲೆೆಟಿಕ್ ಅಸೋಸಿಯೇಷನ್ ನಿಂದ ಎರಡನೆಯ ಹೋಳಿ ಆಚರಣೆ ಮಾಡುತ್ತಿಿದ್ದೇವೆ.ಕೊಪ್ಪಳ ತಾಲೂಕಾ ಕ್ರೀೆಡಾಂಗಣದಲ್ಲಿ ಹೋಳಿ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಲ್ಲಿ ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ಹೋಳಿ ಆಚರಣೆಗೆ ಅವಕಾಶ. ಆರ್ಗಾನಿಕ್ ಬಣ್ಣ. ಟಿಫಿನ್ ವ್ಯವಸ್ಥೆೆ ಮಾಡಲಾಗಿದೆ. ರೇನ್ ಡ್ಯಾಾನ್ಸ್ ಗೆ ವ್ಯವಸ್ಥೆೆ ಮಾಡಲಾಗಿದೆ ಎಂದು ಹೇಳಿದರು.
ಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ – ಹಿಟ್ನಾಳ

