ಸುದ್ದಿಮೂಲವಾರ್ತೆ
ಕೊಪ್ಪಳ ಮೇ30: ಕೊಪ್ಪಳ ಗ್ರಾಮೀಣ ಠಾಣೆಯ ಎ ಎಸ್ ಐ ನ ಹಣದಾಸಗೆ ಹೋಂ ಗಾರ್ಡ್ ಬಲಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಇಂದು ಮುಂಜಾನೆ ಕೊಪ್ಪಳ ತಾಲೂಕಿನ ಸೂಳಿಕೇರಿ ಬಳಿ ರಾ.ಹೆ 50 ರಲ್ಲಿರಾಘವೇಂದ್ರ ಕಮ್ಮಾರ್(40 ) ಮೃತ ಹೋಂ ಗಾರ್ಡ್ ಕ್ಯಾಂಟರ್ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾನೆ.
ರಾ.ಹೆ 50 ರಲ್ಲಿ ವಸೂಲಿಗೆ ಹೋಂ ಗಾರ್ಡ್ ನನ್ನು ಕರೆದುಕೊಂಡು ಹೋಗಿದ್ದ ಎ ಎಸ್ ಐ ಅಂದಪ್ಪ ನಾಯ್ಕ ಅಕ್ರಮವಾಗಿ ಹೈವೇಯಲ್ಲಿ ಹಣ ವಸೂಲಿ ಮಾಡುತ್ತಿದ್ದ. ಈ ಸಮಯದಲ್ಲಿ ಪ್ರತಿನಿತ್ಯ ಹೋಂ ಗಾರ್ಡ್ ಗಳನ್ನು ವಸೂಲಿಗೆ ಕರೆದುಕೊಂಡು ಹೋಗುತ್ತಿದ್ದ. ಇಂದು ಬೆಳಿಗ್ಗೆ ವಸೂಲಿಗೆ ರಾಘವೇಂದ್ರ ನನ್ನು ಕರೆದುಕೊಂಡು ಹೋಗಿದ್ದಾಗ ಹೈವೇಯಲ್ಲಿ ಲಾರಿಯನ್ನು ತಡೆಯಲು ಹೋಂ ಗಾರ್ಡ್ ಮುಂದಾಗಿದ್ದಾರೆ.ಈ ವೇಳೆ ರಾಘವೇಂದ್ರ ಮೇಲೆ ಕ್ಯಾಂಟರ್ ಹರಿದಿದೆ. ಇದರಿಂದಾಗಿ ರಾಘವೇಂದ್ರ ಕಮ್ಮಾರ ಸ್ಥಳದಲ್ಲಿಯೇ ಸಾವನಪ್ಪಿದ್ದಾನೆ.
ರಾಘವೇಂದ್ರ ಕುಟುಂಭಸ್ಥರಿಗೆ ಸಾವಿನ ಬಗ್ಗೆ ಪೊಲೀಸರು ಸರಿಯಾದ ಮಾಹಿತಿ ನೀಡಿಲ್ಲ. ಈ ಘಟನೆ ಬಳಿಕ ಎ ಎಸ್ ಐ ಅಂದಪ್ಪ ನಾಪತ್ತೆಯಾಗಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ,ಪರಿಶೀಲನೆ ನಡೆಸಿದ್ದಾರೆ.