ಸುದ್ದಿಮೂಲ ವಾರ್ತೆ ಬೆಳಗಾವಿ, ಡಿ.16:
ಬೀದರ್ ದಕ್ಷಿಣ ವಿಧಾನಸಭೆ ಕ್ಷೇತ್ರದ ಮನ್ನಾಾಎಖ್ಖೆೆಳ್ಳಿಿ ಹತ್ತಿಿರ ಮೊಗದಾಳ ಗ್ರಾಾಮದ ಬಳಿ ಅಗ್ನಿಿ ಶಾಮಕ ಠಾಣೆ ನಿರ್ಮಿಸಲು 3 ಎಕರೆ ಜಾಗ ಗುರುತಿಸಲಾಗಿದೆ. ಜಿಲ್ಲಾಡಳಿತ ಗೃಹ ಇಲಾಖೆಗೆ ಜಾಗ ಹಸ್ತಾಾಂತರಿಸಿದ ಬೆನ್ನಲ್ಲೇ ಅಗತ್ಯ ಅನುದಾನ ಒದಗಿಸಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದ್ದಾರೆ.
ಬೆಳಗಾವಿ ಅಧಿವೇಶನದಲ್ಲಿ ಮಂಗಳವಾರ ಚುಕ್ಕೆೆ ಗುರುತಿನ ಪ್ರಶ್ನೆೆ ವೇಳೆಯಲ್ಲಿ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಾಳೆ ಅವರು ಈ ವಿಷಯವನ್ನು ಮತ್ತೆೆ ಪ್ರಸ್ತಾಾಪಿಸಿ ಸದನದ ಗಮನ ಸೆಳೆದರು. ಜನರ ಆಸ್ತಿಿ ಹಾಗೂ ಜೀವ ರಕ್ಷಣೆಯ ಮಹತ್ವದ ಈ ವಿಷಯವನ್ನು ನಾನು ಕಳೆದ ಎರಡೂವರೆ ವರ್ಷದಿಂದ ಸತತ ಇಲ್ಲಿ ಪ್ರಸ್ತಾಾಪಿಸುತ್ತಿಿದ್ದೇನೆ.
ಸರ್ಕಾರಕ್ಕೆೆ ಜಾಗ ಕೊಡಿಸುವುದು ಏಕೆ ಆಗುತ್ತಿಿಲ್ಲ? ಸರ್ಕಾರದ ನಿರ್ಲಕ್ಷ್ಯ ಧೋರಣೆ ಅತಿಯಾಗಿದೆ ಎಂದು ಅತೃಪ್ತಿಿ ವ್ಯಕ್ತಪಡಿಸಿ ಎಷ್ಟು ತಿಂಗಳಲ್ಲಿ ಅಗ್ನಿಿ ಶಾಮಕ ಠಾಣೆ ನಿರ್ಮಿಸಲಾಗುವುದು ಎಂದು ಕಾಲಮಿತಿ ತಿಳಿಸಿ ಎಂದು ಪಟ್ಟು ಹಿಡಿದರು ಇದಕ್ಕೆೆ ಪ್ರತಿಕ್ರಿಿಯಿಸಿದ ಗೃಹ ಸಚಿವರು, ಜಾಗದ ಸಮಸ್ಯೆೆ ಬಗೆಹರಿದಿದೆ.
ಕೆಲಸ ಬೇಗ ಆರಂಭಿಸಲು ಆದ್ಯತೆ ನೀಡುವೆ ಎಂದು ಅಭಯ ನೀಡಿದರು.
ಮನ್ನಾಾಎಖ್ಖೆೆಳ್ಳಿಿಯ ಮೊಗದಳ್ ಬಳಿ ಸರ್ವೆ ನಂಬರ್ 95ರಲ್ಲಿ ಲಭ್ಯವಿರುವ 10 ಎಕರೆ ಜಾಗದಲ್ಲಿ ಅಗ್ನಿಿ ಶಾಮಕ ಠಾಣೆಗೆ 3 ಎಕರೆ ಒದಗಿಸಲು ಈಗಾಗಲೇ ತಹಸೀಲ್ದಾಾರರು ಸಹಾಯಕ ಆಯುಕ್ತರಿಗೆ ಶಿಾರಸ್ಸು ಮಾಡಿದ್ದಾರೆ. ಇವರು ಪರಿಶೀಲಿಸಿದ ಬಳಿಕ ಡಿಸಿಗೆ ಕಳಿಸುತ್ತಾಾರೆ. ಡಿಸಿಯವರು ಅಂತಿಮಗೊಳಿಸಿ ಜಾಗ ಗೃಹ ಇಲಾಖೆಗೆ ಹಸ್ತಾಾಂತರಿಸಿದ ತಕ್ಷಣ ಮಂಜೂರಿ ನೀಡಿ ಮುಂದಿನ ಪ್ರಕ್ರಿಿಯೆ ಆರಂಭಿಸಲಾಗುವುದು. ಜಾಗದ ಬಗ್ಗೆೆ ಯಾವುದೇ ಸಮಸ್ಯೆೆ ಇಲ್ಲ. ವಕ್ಫ್ ಮಂಡಳಿಯಿಂದಲೂ ನಿರಾಪೇಕ್ಷಣಾ ಪತ್ರ( ಎನ್ ಓಸಿ) ಬಂದಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಗೃಹ ಸಚಿವ ಡಾ.ಪರಮೇಶ್ವರ ಹೇಳಿಕೆ, ಸದನದಲ್ಲಿ ಮತ್ತೆೆ ಧ್ವನಿ ಎತ್ತಿದ ಬೆಲ್ದಾಳೆ ಅಗ್ನಿ ಶಾಮಕ ಠಾಣೆಗೆ 3 ಎಕರೆ ಜಾಗ

