ಸುದ್ದಿಮೂಲ ವಾರ್ತೆ
ಹೊಸಕೋಟೆ, ಆ. 24 : ತಾಲೂಕು ಕಸಬಾ ಹೋಬಳಿಯ ಕುಂಬಳಹಳ್ಳಿ ಗ್ರಾಮ ಪಂಚಾಯಿತಿ ಅಧ್ಯೆಕ್ಷೆ ಬಿಂದು ನೇತೃತ್ವದಲ್ಲಿ ಮೊದಲ ಸಭೆ ನಡೆಯಿತು.
ಗ್ರಾಮಗಳ ಮೂಲಭೂತ ಸೌಕರ್ಯಗಳು ಹಾಗೂ ಗ್ರಾಮಗಳಿಗೆ ಕುಡಿಯುವ ನೀರು ಚರಂಡಿಗಳು ಮತ್ತು ಸರ್ಕಾರದಿಂದ ಬಂದಿರುವ ವಸತಿರಹಿತರಿಗೆ ಮನೆಗಳ ಹಂಚಿಕೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ನಂತರ ಎಲ್ಲಾ ಸದಸ್ಯರನ್ನು ಉಪಾಧ್ಯಕ್ಷ ಕುರುಬರಹಳ್ಳಿಯ ಟಿ.ವೆಂಕಟೇಶ್ ಸನ್ಮಾನಿಸಿದರು.
ಈ ಸಂದರ್ಬದಲ್ಲಿ ಪಿಡಿಓ ಚೇತನ್ ಕುಮಾರ್ ಹಾಜರಿದ್ದರು.