ದೊಡ್ಡಪ್ಪಗೌಡ ಪಾಟೀಲ ನರಿಬೋಳವರಿಗೆ ಮಾದಿಗ ಸಮುದಾಯದ ವತಿಯಿಂದ ಸನ್ಮಾನ
ಜೇವರ್ಗಿ :ತಾಲೂಕಿನ ಮಾದಿಗ ಸಮುದಾಯದ ಮುಖಂಡರು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ಅವರಿಗೆ ಸನ್ಮಾನಿಸಿದರು.
ತಾಲೂಕಿನ ನರಿಬೋಳ ಗ್ರಾಮದಲ್ಲಿ ಕರ್ನಾಟಕ ಸರ್ಕಾರ ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗ ವರದಿಯನ್ನು ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸು ಮಾಡಿದ್ದಕ್ಕಾಗಿ ಬಿಜೆಪಿಯ ತಾಲೂಕಿನ ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ್ ನರಬೋಳ ಅವರಿಗೆ ಯಡ್ರಾಮಿ ತಾಲೂಕಿನ ಮಾದಿಗ ಸಮುದಾಯದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾದಿಗ ಸಮುದಾಯದ ಹಿರಿಯ ಮುಖಂಡರಾದ ಹಾಗೂ ಬಿಜೆಪಿ ಹಿರಿಯ ಮುಖಂಡರು ಮರೆಪ್ಪ ಕಂಡಳಕರ್ ಗುಡೂರು, ಬಾಗಪ್ಪ ಯಲಗೋಡ, ಸೈದಪ್ಪ ಹೊಸ್ಮನಿ, ಭೀಮಣ್ಣ ಯಡ್ರಾಮಿ, ಚಂದ್ರು ಕೋರಿ, ಬಸವರಾಜ್ ಹಂಗರಗ, ತಾಲೂಕಿನ ಮಾದಿಗ ಸಮುದಾಯದ ಹಿರಿಯರು ಮುಖಂಡರು ಉಪಸ್ಥಿತರಿದ್ದರು.