ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.18:
ನಗರದ ತಾಲೂಕಾ ಕ್ರೀೆಡಾಂಗಣದಲ್ಲಿ ವಾಕಿಂಗ್ ಗೆಳೆಯರ ಬಳಗದಿಂದ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳಿಗೆ ಗುರುವಾರ ಬೆಳಗ್ಗೆೆ ಸನ್ಮಾಾನಿಸಿ ಗೌರವಿಸಿದರು.
ಪತ್ರಕರ್ತರ ಸಂಘದ ಅಧ್ಯಕ್ಷ ಶರಣಪ್ಪ ಗೋನಾಳ, ಪ್ರಧಾನ ಕಾರ್ಯದರ್ಶಿ ಅಮರೇಶ ಅಲಬನೂರು, ಉಪಾಧ್ಯಕ್ಷರಾದ ಯಮನಪ್ಪ ಪವಾರ್, ದುರುಗೇಶ, ಖಜಾಂಚಿ ಚಂದ್ರಶೇಖರ ಬೆನ್ನೂರು, ಕಾರ್ಯಕಾರಿ ಸಮಿತಿ ಸದಸ್ಯರಾದ ಚನ್ನಬಸವ ಕಟ್ಟಿಿಮನಿ ಹಾಗೂ ವೀರೇಶ ಗಡ್ಡಿಿಮಾಳ ಅವರನ್ನು ಸನ್ಮಾಾನಿಸಿದರು.
ಈ ಸಂದರ್ಭದಲ್ಲಿ ವಾಕಿಂಗ್ ಗೆಳೆಯರ ಬಳಗದ ಮುಖಂಡ, ನಿವೃತ್ತ ಶಿಕ್ಷಕ ಚಂದ್ರಶೇಖರ ಖಗ್ಗೋೋಡ್ ಮಾತನಾಡಿ, ತಾಲೂಕಾ ಕ್ರೀೆಡಾಂಗಣದಲ್ಲಿ ವಯೋವೃದ್ದರು, ನಿವೃತ್ತ ನೌಕರರು, ಮಹಿಳೆಯರು, ಮಕ್ಕಳು ಬೆಳಗಿನ ಜಾವ ವಾಕಿಂಗ್ಗೆ ಬರುತ್ತಾಾರೆ. ಇದೇ ಸಮಯದಲ್ಲಿ ಕ್ರೀೆಡಾಂಗಣದಲ್ಲಿ ಯುವಕರ ಕ್ರಿಿಕೆಟ್ ಆಡುತ್ತಾಾರೆ. ಅವರಿಗೆ ಕ್ರಿಿಕೆಟ್ ಆಡಲು ನಗರದಲ್ಲಿ ಬೇರೆ ಕ್ರೀೆಡಾಂಗಣಗಳಿಲ್ಲ. ಆದರೂ ವಾಕಿಂಗ್ ಮಾಡುವ ಸಂದರ್ಭದಲ್ಲಿ ಕ್ರಿಿಕೆಟ್ ಆಡುತ್ತಿಿರುವದರಿಂದ ಬಾಲ್ ಬೀಳುತ್ತದೆ ಎನ್ನುವ ಭಯದಿಂದಲೇ ವಾಕಿಂಗ್ ಮಾಡಬೇಕಿದೆ. ಈ ನಿಟ್ಟಿಿನಲ್ಲಿ ಪತ್ರಕರ್ತ ಮಿತ್ರರು ತಮ್ಮ ಸುದ್ದಿಗಳ ಮೂಲಕ ಸಂಬಂಧಿಸಿದ ಜನಪ್ರತಿನಿಧಿಗಳ, ಅಧಿಕಾರಿಗಳ ಗಮನಕ್ಕೆೆ ತರುವ ಮೂಲಕ ಬೆಳಗ್ಗೆೆ 7.30ರ ನಂತರ ಕ್ರಿಿಕೆಟ್ ಆಡುವಂತೆ ಮಾಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಾಕಿಂಗ್ ಗೆಳೆಯರ ಬಳಗದ ಮಲ್ಲಪ್ಪ ಮೈಲಾರ, ಎಚ್.ಎ್.ಮಸ್ಕಿಿ, ಜಿ.ಎಮ್.ಪಡ್ನಾಾವಿಸ್, ಮೌನೇಶ ಸಾಲವಾಡ್ಗಿಿ, ಬಸವರಾಜ, ಮಲ್ಲಿಕಾರ್ಜುನ ವಗರನಾಳ, ಕೀರಪ್ಪ ತಿಡಿಗೋಳ, ಬಸವರಾಜ ಇಂಜಿನಿಯರ್, ನಾಗರಾಜ ಮಾಡಸಿರವಾರ, ಬಸವರಾಜ ಬಪ್ಪೂೂರು, ಎಸ್.ಎಂ.ಕೃಷ್ಣ, ಅಮರೇಶ ಮಿಟ್ಟಿಿಮನಿ, ವಿಜಯ, ವಿರುಪಯ್ಯ ಸ್ವಾಾಮಿ, ಹರಿ, ಪಂಪಾಪತಿ ಬಳಗಾನೂರು ಸೇರಿದಂತೆ ಇತರರು ಇದ್ದರು.

