ಆ,20:ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡುವವರು ಅನೇಕ ಸಂದರ್ಭಗಳಲ್ಲಿ ಸನ್ಮಾನಿತ ಗೊಳ್ಳುತ್ತಾರೆ. ಇದರಿಂದ ಅವರ ಸಾಮಾಜಿಕ ಜವಾಬ್ದಾರಿಯೂ ಸಹ ಹೆಚ್ಚಾಗುತ್ತದೆ ಎಂದು ಬಲಕುಂದಿ ಹನುಮಂತಚಾರ್ ಹೇಳಿದರು
ನಗರದ ಶ್ರೀ ವೇಣುಗೋಪಾಲ ದೇವಸ್ಥಾನ ಅಂದರೆ ರಾಯರ ಗುಡಿ ಸಭಾಂಗಣದಲ್ಲಿ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವೇದಿಕೆಯ ಅಧ್ಯಕ್ಷೀಯ ನುಡಿಗಳಲ್ಲಿ ಅವರು ತಿಳಿಸಿದರು.
ಸಿರುಗುಪ್ಪ ತಾಲ್ಲೂಕು ಬ್ರಾಹ್ಮಣ ಸಂಘದಿಂದ ಇತ್ತೀಚಿನ ಸಾಧಕರಾದ ಜೆ. ಶ್ರೀನಿವಾಸಮೂರ್ತಿ ಅಧ್ಯಕ್ಷರು ತಾ. ಬ್ರಾಹ್ಮಣ ಸಂಘ ಇವರು ಜೋತಿಷ್ಯ ಮತ್ತು ಸಮಾಜ ಸೇವೆಯಲ್ಲಿ ಗೌರವ ಡಾಕ್ಟರೇಟ್ ಪಡೆದುದಕ್ಕಾಗಿ, ಶ್ರೀ ವಿದ್ವಾನ್ ಲಲಿತಾನಂದನಾಥ ಆಗಿರುವ ಆಶೀರ್ವಾದ್ ಐರಣಿ ವೇದಧ್ಯಾಯನ ಮತ್ತು ಧಾರ್ಮಿಕ ಕ್ಷೇತ್ರದ ಸಾಧನೆಗಾಗಿ, ಶ್ರೀನಿವಾಸ್ ಆಚಾರ್ ರಾಜಪುರೋಹಿತರು ಇವರ ಸಮಾಜ ಸೇವೆ ಮತ್ತು ಕೊಪ್ರೇಶ್ ಆಚಾರ್ ರಾಜಕೀಯ ಕ್ಷೇತ್ರದ ಸಾಧನೆಗಾಗಿ ಶನಿವಾರ ತಡ ಸಂಜೆ ಸನ್ಮಾನ ಕಾರ್ಯಕ್ರಮ ಆಯೋಜನೆಗೊಂಡಿತ್ತು
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಕೆ.ಹೆಚ್ ನಾರಾಯಣ ರಾವ್ ನಿವೃತ್ತ ಸುಪ್ರಡೆಂಟ್ ಶಿಕ್ಷಣ ಇಲಾಖೆ ಹಾಗೂ ಗೌರವ ಅಧ್ಯಕ್ಷರು ತಾಲ್ಲೂಕು ಬ್ರಾಹ್ಮಣ ಸಂಘ ಹೆಚ್. ಕೆ. ಗೋಪಾಲರಾವ್ ನಿವೃತ್ತ ಶಿಕ್ಷಕರು ಎಂ. ವಾಸುದೇವರಾವ್ ಹಿರಿಯ ರಾಜಕೀಯ ಮುಖಂಡರು ಜೆ. ರಾಮಮೂರ್ತಿ ನಿವೃತ್ತ ಶಿಕ್ಷಕರು ಶ್ರೀಮತಿ ದ್ವಾರಕಾಬಾಯಿ ಸಮಾಜದ ಹಿರಿಯರು ಇವರ ನೇತೃತ್ವದಲ್ಲಿ ಜರುಗಿತು ಪ್ರಾರ್ಥನೆ ಮತ್ತು ವೇದಿಕೆಯ ಗಣ್ಯರಿಂದ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮ ಚಾಲನೆಗೊಂಡಿತು
ಈ ವೇಳೆ ಸಾಧಕರುಗಳ ಪರಿಚಯವನ್ನು ತಿಳಿಸುತ್ತಾ ಸಾಧಕರಗಳಿಗೆ ಶಾಲು, ಮೈಸೂರು ಪೇಟ ಮತ್ತು ಮುತ್ತಿನಮಾಲೆ ಹಾಕಿ ಪುಸ್ತಕ ನೀಡುವ ಮೂಲಕ ಅವರನ್ನು ಹೃದಯಸ್ಪರ್ಶಿಯಾಗಿ ಸನ್ಮಾನ ಮಾಡಲಾಯಿತು
ಈ ಸಂದರ್ಭದಲ್ಲಿ ಅನೇಕರು ತಮ್ಮ ಅನಿಸಿಕೆಗಳನ್ನು ತಿಳಿಸಿದರು ನಂತರ ವೇದಿಕೆಯ ಗಣ್ಯರು ಸಾಧಕರನ್ನು ಕುರಿತು ಮಾತನಾಡಿದರು. ಇದೇ ಸಂದರ್ಭದಲ್ಲಿ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸನ್ಮಾನಿತರಗಳು ಸಭೆಯಲ್ಲಿ ಮಾತನಾಡಿ ತಮ್ಮ ಸಾಧನೆ ಹಾದಿಯನ್ನು ಪರಿಚಯಿಸಿದರು.
ಸನ್ಮಾನಗೊಂಡ ಶ್ರೀ ಲಲಿತಾನಂದನಾಥರು ಮಾತನಾಡಿ ವಿದ್ಯೆಗಳಲ್ಲಿಯೇ ಶ್ರೇಷ್ಠವಾದ ವಿದ್ಯೆ ವೇದಾಧ್ಯಯನವಾಗಿದೆ. ಕಾರಣ ವಿಪ್ರ ಸಮಾಜದವರಲ್ಲಾ ತಮ್ಮ ಮಕ್ಕಳಿಗೆ ಮೊದಲು ವೇದಧ್ಯಾಯನ ಕಲಿಸಿ. ಕೇವಲ ಲೌಕಿಕ ವಿದ್ಯೆಗಳಿಗೆ ಒತ್ತು ಕೊಡುತ್ತಿರುವುದರಿಂದ ಬ್ರಾಹ್ಮಣ ಸಮಜಕ್ಕೆ ತೊಂದರೆ ಆಗಬಹುದೆಂದು ತಿಳಿಸಿದರು.
ಸನ್ಮಾನ ಕಾರ್ಯಕ್ರಮದಲ್ಲಿ ತಾಲೂಕು ಮತ್ತು ನಗರದ ವಿಪ್ರರು ಉಪಸ್ಥಿತರಿದ್ದರು. ಆಗಮಿಸಿದ್ದ ಎಲ್ಲರಿಗೂ ಲಘು ಉಪಾಹಾರ ಏರ್ಪಾಟು ಮಾಡಲಾಗಿತ್ತು.