ಸುದ್ದಿಮೂಲ ವಾರ್ತೆ
ಮೈಸೂರು,ಜೂ.21: ಹೂಟಗಳ್ಳಿ ನಗರಸಭೆ ಕಂದಾಯ ನಿರೀಕ್ಷಕ ಮಂಜುನಾಥ್ ಬುಧವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ನಮೂನೆ ಇ- ಸ್ವತ್ತು ಮಾಡಿಕೊಡಲು ಒಂದು ಲಕ್ಷ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ. ಚಾಮರಾಜನಗರದ ಹರದನಹಳ್ಳಿಯ ತಾಲೂಕಿನ ಕುಮಾರ್ ಎಂಬುವರಿಗೆ ನಮೂನೆ ಇ ಸ್ವತ್ತು ಮಾಡಿಕೊಡಲು 3 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು .ಮಂಜುನಾಥ್ ಕಿರುಕುಳಕ್ಕೆ ಬೇಸತ್ತ ಕುಮಾರ್ ಲೋಕಾಯುಕ್ತ ಮೊರೆ ಹೋಗಿದ್ದರು .ಆರೋಪಿ ಮಂಜುನಾಥ್ ನಗರಸಭೆ ಕಾರ್ಯಾಲಯದಲ್ಲಿ 1 ಲಕ್ಷ ರೂ. ತೆಗೆದುಕೊಳ್ಳುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಲೋಕಾಯುಕ್ತ ಎಸ್ಪಿ ಸುರೇಶಬಾಬು ನೇತೃತ್ವದಲ್ಲಿ ಡಿವೈಎಸ್ಪಿ ಕೃಷ್ಣಯ್ಯ ಇನ್ ಸ್ಪೆಕ್ಟರ್ ಗಳಾದ ರವಿಕುಮಾರ್,ಜಯರತ್ನ,ಮಡಿಕೇರಿ ಲೋಕಾಯುಕ್ತ ಇನ್ಸ್ಪೆಕ್ಟರ್ ಲೋಕೇಶ್, ಮೈಸೂರು ಲೋಕಾಯುಕ್ತ ಸಿಬ್ಬಂದಿಗಳಾದ ಪ್ರಕಾಶ್, ಗೋಪಿ, ವೀರಭದ್ರ, ಆಶಾ, ತ್ರಿವೇಣಿ ಚಾಲಕರಾದ ಲೋಕೇಶ್ ಮತ್ತು ಶೇಖರ್, ಮಡಿಕೇರಿ ಲೋಕಾಯುಕ್ತ ಸಿಬ್ಬಂದಿಗಳಾದ ಮಂಜುನಾಥ್, ಸಲಾಂದ್ದಿನ್, ಶಶಿಕುಮಾರ್, ಪ್ರವೀಣಕುಮಾರ್, ಲೋಹಿತ್ ಟ್ರಾಪ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.