ಸುದ್ದಿಮೂಲ ವಾರ್ತೆ
ಹೊಸಕೋಟೆ, ಏ.4: ಕರ್ನಾಟಕದ ಬಡವರ ಕಣ್ಣೀರನ್ನು ಒರೆಸಿ, ಶಿಕ್ಷಣ ಆರೋಗ್ಯ, ಅನ್ನದಾಸೋಹ ನೀಡಿ ಅಪಾರ ಜನತೆಗೆ ದಾದೀಪ ಆಗಿ ನಮ್ಮೆಲ್ಲರ ಮಾರ್ಗದರ್ಶಕರಾಗಿ ಸಮಾಜಕ್ಕೆ ಕೊಡುಗೆಯಾದ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಆದರ್ಶಗಳನ್ನು ನಾವೆಲ್ಲ ಮೈಗೂಡಿಸಿಕೊಳ್ಳಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಹೆಚ್ ಎಂ ಮುನಿರಾಜು ತಿಳಿಸಿದರು.
ನಗರದಲ್ಲಿ ಆಯೋಜಿಸಲಾಗಿದ್ದ ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಮರ್ಪಿಸಿ ಅವರ116ನೆಯ ಜನ್ಮದಿನಾಚರಣೆಯನ್ನು ಆಚರಣೆ ಮಾಡಿ ಸಿಹಿ ಹಂಚಿ ಸಂಭ್ರಮಿಸಿ ಮಾತನಾಡಿದರು. ರಾಜ್ಯದ ಮೂಲೆ ಮೂಲೆಗಳಲ್ಲಿ ಸ್ವಾಮೀಜಿಗಳ ಸ್ಮರಣೆ ಜನ್ಮದಿನಾಚರಣೆ ಮಾಡುವುದರೊಂದಿಗೆ ಶಿವಕುಮಾರ ಮಹಾಸ್ವಾಮಿಗಳು ನಾಡಿನ ಜನರಲ್ಲಿ ನೆಲೆಯೂರಿದ್ದಾರೆ.
ಇಂಥವರ ಜನ್ಮ ದಿನಾಚರಣೆಗಳನ್ನು ಆಚರಣೆ ಮಾಡುವುದರೊಂದಿಗೆ ನಮಗೆಲ್ಲ ಸ್ಪೂರ್ತಿ ತಂದಿದೆ. ಸಮಾಜಕ್ಕೆ ಮಾದರಿಯಾದಂತವರು. ಇಂತಹ ಆಧ್ಯಾತ್ಮಿಕ ಚಿಂತಕ ಶಿಕ್ಷಣ ತಜ್ಞ ಅನ್ನದಾಸೋಹಿ ಬಡವರಿಗೆ ಆಶ್ರಯ ನೀಡಿದ ಸ್ವಾಮೀಜಿಗಳಿಗೆ ಭಕ್ತರ ಮನದಲ್ಲಿ ಇನ್ನೂ ಜೀವಂತವಾಗಿದ್ದಾರೆ ಇವರು ನೀಡಿದಂತಹ ಆದರ್ಶ ತತ್ವಗಳನ್ನು ಮೈಗೂಡಿಸಿಕೊಂಡು ಸಮಾಜಕ್ಕೆ ಮಾದರಿಯಾಗಿ ಜೀವನ ಸಾಗಿಸೋಣ ಎಂದರು.
ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಚ್. ಎಮ್. ಮುನಿರಾಜ್, ವೆಂಕಟೇಶ್ ಗೌರವ ಕಾರ್ಯದರ್ಶಿ, ಬಚ್ಚೇಗೌಡ, ಮಾರ್ಖಂಡಪ್ಪ ವಾಸುದೇವಯ್ಯ, ಬಿಎಂಟಿಸಿ ನಾಗರಾಜ್, ಶಿಕ್ಷಕರಾದ ಮುನಿ ಅಂಜಿನಪ್ಪ ಇನ್ನು ಮುಂತಾದವರು ಇದ್ದರು.