ಸುದ್ದಿಮೂಲ ವಾರ್ತೆ
ಹೊಸಕೋಟೆ, ಸೆ.1: ತಾಲ್ಲೂಕಿನ ಕಸಬಾ ಹೋಬಳಿ, ಕುಂಬಳಹಳ್ಳಿ ಗ್ರಾಮದಲ್ಲಿ ನಡೆದ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥುಗಳು ಜಯಭೇರಿ ಬಾರಿಸಿದ್ದಾರೆ.
ಐದು ವರ್ಷದ ಅವಧಿಗೆ ನಡೆದ ಚುನಾವಣೆಯಲ್ಲಿ ಒಟ್ಟು 11 ಸ್ಥಾನಗಳಲ್ಲಿ ಪರಿಶಿಷ್ಠ ವರ್ಗಕ್ಕೆ ಸೇರಿದ ಒಂದು ಸ್ಥಾನವು ಅವಿರೋಧವಾಗಿ ಆಯ್ಕೆಯಾಗಿದ್ದು, ಇನ್ನು ಉಳಿದಂತೆ ಎಂಟು ಸ್ಥಾನಗಳು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವನ್ನು ಸಾಧಿಸಿದರೆ, ಎರಡು ಸ್ಥಾನ ಮಾತ್ರ ಬಿ.ಜೆ.ಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಆರ್. ಗಜೇಂದ್ರ, ಗೀತಾ, ನಾರಾಯಣಪ್ಪ ಬಿನ್ ದೊಡ್ಡ ಮುನಿಯಪ್ಪ, ವೆಂಕಟೇಶ್ ಬಿನ್ ಕೃಷ್ಣಪ್ಪ, ವೆಂಕಟೇಶ್ ಬಿನ್ ವೆಂಕಟಪ್ಪ, ಗೋಪಿ, ಮಹಿಳಾ ಮೀಸಲಿನಲ್ಲಿ ನಾಗರತ್ನಮ್ಮ, ಮುನಿಯಮ್ಮ ಮುನಿರಾಜು, ಮಂಜುನಾಥ್.ಸಿ ಇವರುಗಳು ಚುನಾವಣೆಯಲ್ಲಿ ಗೆಲುವನ್ನು ಸಾಧಿಸಿದರೆ, ಮುನಿಕದಿರಪ್ಪ ಅವಿರೋದವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ಘೋಷಿಸಿದ್ದಾರೆ.
ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶ್ರೀನಿವಾಸ್ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿ, ನಮ್ಮ ಗ್ರಾಮದ ಹಾಲು ಉತ್ಪಾಧಕರ ಸಹಕಾರ ಸಂಘದಲ್ಲಿ ಚುನಾವಣೆ ತುಂಬಾ ಕಠಿಣವಾಗಿತ್ತು. ನಮ್ಮ ರಾಜ್ಯದ ಮುಖ್ಯ ಮಂತ್ರಿಗಳು ರಾಜ್ಯದಲ್ಲಿ ತಂದಿರುವಂತಹ ಉತ್ತಮ ಯೋಜನೆಗಳು, ತಾಲ್ಲೂಕಿನ ಶಾಸಕರಾದ ಶರತ್ಬ ಚ್ಚೇಗೌಡರ ಅಭಿವೃದ್ದಿ ಕೆಲಸಗಳನ್ನು ಒಪ್ಪಿ ಮತದಾರರು ಕಾಂಗ್ರೆಸ್ ಪಕ್ಷದ ಅಭ್ಯಾರ್ಥಿಗಳಿಗೆ ಆರ್ಶಿವಾದ ಮಾಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ವೇಣುಗೋಪಾಲ್, ಗ್ರಾ. ಪಂಚಾಯಿತಿ ಮಾಜಿ ಅಧ್ಯಕ್ಷರಾದ ವೆಂಕಟೇಶ್, ಗ್ರಾಮ ಪಂಚಯಿತಿ ಮಾಜಿ ಉಪಾಧ್ಯಕ್ಷರು ಹಾಲಿ ಸದಸ್ಯರಾದ ಬಿ. ರಾಜಣ್ಣ, ಸದಸ್ಯರುಗಳಾದ ರಘು, ಮಂಜುಳ ಶಿವಕುಮಾರ್, ಮಂಜುಳಾ ನಾಗರಾಜ್, ಲಕ್ಷ್ಮಮ್ಮ ರಾಮಂಜಿ, ಮಾಜಿ ಗ್ರಾ. ಪಂಚಾಯಿತಿ ಸದಸ್ಯರಾದ ಬುಲೇಟ್ ನಾರಾಯಣಸ್ವಾಮಿ, ಎಸ್.ಎಪ್.ಸಿ.ಎಸ್ ಸೋಸೈಟಿ ಮಾಜಿ ಅಧ್ಯಕ್ಷರಾದ ಮುನಿಯಪ್ಪ, ಮುಖಂಡರುಗಳಾದ ಬಾಲು, ಶ್ರೀನಿವಾಸ್, ಮುರಳಿಕುಮಾರ್, ಶೇಖರ್, ಉಮೇಶ್, ಡೈರಿಯ ಕಾರ್ಯನಿರ್ವಾಹಕರಾದ ಕೃಷ್ಣ ಹಾಜರಿದ್ದರು.