ಸುದ್ದಿಮೂಲ ವಾರ್ತೆ ಬೆಳಗಾವಿ, ಡಿ.18:
ವಿಜಯನಗರ ಜಿಲ್ಲಾಸ್ಪತ್ರೆೆಯನ್ನು ಹಂಪಿ ಉತ್ಸವದ ಸಂದರ್ಭದಲ್ಲಿಯೇ ಉದ್ಘಾಾಟಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದರು.
ವಿಧಾನಸಭೆಯಲ್ಲಿ ಕೂಡ್ಲಿಿಗಿ ಶಾಸಕ ಎನ್.ಟಿ. ಶ್ರೀನಿವಾಸ್ ಅವರ ಪ್ರಶ್ನೆೆಗೆ ಉತ್ತರಿಸಿದ ಸಚಿವರು, ಆಸ್ಪತ್ರೆೆ ಕಟ್ಟಡದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಅಂತಿಮ ಕೆಲಸಗಳು ನಡೆಯುತ್ತಿಿವೆ. ಕೆಕೆಆರ್ಡಿಬಿ ಅನುದಾನದಲ್ಲಿ 10 ಕೋಟಿ ರೂ. ಅನುದಾನದಲ್ಲಿ ಉಪಕರಣಗಳನ್ನು ಖರೀದಿಸಲು ಅನುಮತಿಸಲಾಗಿದ್ದು, ಶೀಘ್ರವೇ ಟೆಂಡರ್ ಕರೆಯಲಾಗುವುದು ಎಂದು ಹೇಳಿದರು.
ಹೊಸಪೇಟೆ ನಗರದಲ್ಲಿರುವ ತಾಲ್ಲೂಕು ಆಸ್ಪತ್ರೆೆಯನ್ನು 100 ಹಾಸಿಗೆಗಳಿಂದ 250 ಹಾಸಿಗೆಗಳಿಗೆ ಮೇಲ್ದರ್ಜೆಗೆ ಏರಿಸಲು ಕಟ್ಟಡ ಮತ್ತು ಪೀಠೋಪಕರಣಗಳಿಗಾಗಿ 129.89 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಇಲ್ಲಿ ಎಚ್ಟಿಲೈನ್ ಹಾದು ಹೋಗುತ್ತಿಿರುವುದರಿಂದ ಅದನ್ನು ಸ್ಥಳಾಂತರಿಸಲು ಸ್ವಲ್ಪ ವಿಳಂಬ ಆಗುತ್ತಿಿದೆ. ಆದಷ್ಟು ಶೀಘ್ರ ಇದನ್ನು ಪೂರ್ಣಗೊಳಿಸಿ ಹಂಪಿ ಉತ್ಸವದ ವೇಳೆಗೆ ಮುಖ್ಯಮಂತ್ರಿಿಗಳಿಂದ ಆಸ್ಪತ್ರೆೆ ಉದ್ಘಾಾಟನೆ ಮಾಡಿಸಲಾಗುವುದು ಎಂದು ಭರವಸೆ ನೀಡಿದರು.
ಪ್ರಶ್ನೆೆ ಕೇಳಿದ್ದ ಎನ್.ಟಿ. ಶ್ರೀನಿವಾಸ್, ಹೊಸಪೇಟೆ, ಕೂಡ್ಲಿಿಗಿ ಸೇರಿದಂತೆ ಹಲವು ತಾಲ್ಲೂಕುಗಳಿಗೆ ಅನುಕೂಲ ಅಗುವಂತಹ ಜಿಲ್ಲಾಸ್ಪತ್ರೆೆಯ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಈ ಭಾಗದ ಜನರಿಗೆ ಆರೋಗ್ಯ ಸೇವೆಗೆ ಅನುವು ಮಾಡಿಕೊಡಬೇಕು. ಹಂಪಿ ಉತ್ಸವಕ್ಕೆೆ ಮುಖ್ಯಮಂತ್ರಿಿಗಳು ಹೊಸಪೇಟೆಗೆ ಅಗಮಿಸುತ್ತಾಾರೆ. ಅದೇ ವೇಳೆಗೆ ಆಸ್ಪತ್ರೆೆಯನ್ನೂ ಉದ್ಘಾಾಟಿಸಬೇಕು ಎಂದರು.
ಅಲ್ಲದೆ, 50 ಎಕರೆ ಜಾಗ ಇದ್ದು, ಇಲ್ಲಿ ಮುಂದಿನ ಬಜೆಟ್ನಲ್ಲಿ ವೈದ್ಯಕೀಯ ಕಾಲೇಜು ಘೋಷಿಸಬೇಕು ಎಂದು ಶ್ರೀನಿವಾಸ್ ಮನವಿ ಮಾಡಿದರು.
ಹೊಸಪೇಟೆ ಜಿಲ್ಲಾಸ್ಪತ್ರೆ ಹಂಪಿ ಉತ್ಸವದ ವೇಳೆ ಉದ್ಘಾಟನೆ – ಗುಂಡೂರಾವ್

