ಸುದ್ದಿಮೂಲ ವಾರ್ತೆ ರಾಯಚೂರು, ನ.30:
ಶಿಕ್ಷಣ ಒದಗಿಸುವ ಮತ್ತು ಸಮಾಜದ ಆಡಳಿತವನ್ನು ಹಿಡಿದಿರುವ ಜನಪ್ರತಿನಿಧಿಗಳೇ ಧಾರ್ಮಿಕ, ಮೌಢ್ಯತೆ ಆಚರಣೆ ಮಾಡುತ್ತಿಿರುವುದು ಆತಂಕಕಾರಿಯಾಗಿದ್ದು ಮೌಢ್ಯತೆ ತೊಲಗಿಸುವ ಮೂಲಕ ಪ್ರಜಾಪ್ರಭುತ್ವದ ವಾರಸುದಾರರ ಭವಿಷ್ಯದ ಕುರಿತು ಚಿಂತನೆ ನಡೆಸುವ ಜವಾಬ್ದಾಾರಿ ಪ್ರತಿಯೊಬ್ಬರದ್ದಾಗಿದೆ ಎಂದು ಮಹಾನಗರ ಪಾಲಿಕೆ ಹಿರಿಯ ಸದಸ್ಯ ಜಯಣ್ಣ ಹೇಳಿದರು.
ಅವರಿಂದು ನಗರದ ಕನ್ನಡ ಭವನದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಘಟಕದಿಂದ ಹಮ್ಮಿಿಕೊಂಡಿದ್ದ ಶಿಕ್ಷಕ ಮತ್ತು ಸಮುದಾಯ ಒಂದು ವೈಜ್ಞಾನಿಕ ಅವಲೋಕನ ಹಾಗೂ ಆಕಾಶ ನಮಗೆಷ್ಟು ಗೊತ್ತು ಎಂಬ ವಿಷಯದ ಕುರಿತು ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿದರು. ಜಗತ್ತು ಸಾಕಷ್ಟು ಮುಂದುವರೆಯುತ್ತಿಿದೆ. ಜೊತೆಗೆ ಮನುಷ್ಯ ಚಂದ್ರನ ಮೇಲೆ ಹೋಗುತ್ತಿಿದ್ದರೂ. ಸಮಾಜ ಇನ್ನೂ ಮೌಢ್ಯತೆಯಲ್ಲಿದೆ. ಒಂದು ಸಮಾಜ ವೈಜ್ಞಾನಿಕ ಚಿಂತನೆ ಮೂಡಿಸುತ್ತಿಿದ್ದು, ಮತ್ತೊೊಂದು ಸಮಾಜ ಅದಕ್ಕೆೆ ವಿರುದ್ಧವಾಗಿ ಮೌಢ್ಯತೆಯಲ್ಲಿ ಬೆರೆತು ಹೋಗಿವೆ ಇದು ಶಿಕ್ಷಣಕ್ಕೆೆ ಹೆಚ್ಚಿಿನ ತೊಂದರೆ ಉಂಟುಮಾಡುತ್ತದೆ ಎಂದರು.
ಸಮಿತಿಯ ಸಂಚಾಲಕ ಸೈಯದ್ ಹಫೀಜುಲ್ಲಾ ಪ್ರಾಾಸ್ತಾಾವಿಕವಾಗಿ ಮಾತನಾಡಿ ಸರ್ಕಾರಿ ಶಾಲೆಗಳ ಬಲವರ್ಧನೆ, ವೈಜ್ಞಾನಿಕ ಕಲಿಕೆಯ ಆಸಕ್ತಿಿಯನ್ನು ಹೆಚ್ಚಿಿಸುವುದು, ಜನರಲ್ಲಿರುವ ಮೂಢನಂಬಿಕೆಗಳನ್ನು ತೊಲಗಿಸುವುದು, ಶಿಕ್ಷಕರಲ್ಲಿ ಹೊಸ ವಿಚಾರಗಳ ಬಗ್ಗೆೆ ತಿಳಿಸುವುದು. ಸಮಿತಿಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಶಿಕ್ಷಣ ಶಿಕ್ಷಕ ಮತ್ತು ಸಮುದಾಯ ಒಂದು ವೈಜ್ಞಾನಿಕ ಅವಲೋಕನದ ಕುರಿತು ಸಮಿತಿಯ ಸಂವಹನಕಾರ ಎಚ್.ಎ ಅಹ್ಮದ್ ಮಾತನಾಡಿದರು. ನಂತರ ಆಕಾಶ ನಮಗೆಷ್ಟು ಗೊತ್ತು ಎಂಬ ವಿಷಯದ ಕುರಿತು ನಿವೃತ್ತ ಪ್ರಾಾಧ್ಯಾಾಪಕ ಶಂಶುದ್ದೀನ್ ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಡಯಟ್ ಉಪನ್ಯಾಾಸಕ ಬಸವರಾಜ, ವಿವಿಧ ಶಾಲೆಗಳ ಮುಖ್ಯಗುರುಗಳಾದ ಬಸಪ್ಪ ಗದ್ದಿ, ವೀರೇಶ, ವೀರೇಂದ್ರ ಪಾಟೀಲ್, ಬಸವರಾಜ. ರಾಜಕುಮಾರ್, ಯೂನೂಸ್ ಸೇರಿದಂತೆ ಶಾಲಾ ಶಿಕ್ಷಕರು ಉಪಸ್ಥಿಿತರಿದ್ದರು.
ಜಿಲ್ಲಾ ಮಟ್ಟದ ಆಕಾಶ ನಿಮಗೆಷ್ಟು ಗೊತ್ತು ಕಾರ್ಯಾಗಾರ ಜನಪ್ರತಿನಿಧಿಗಳೆ ಮೌಢ್ಯತೆ ಆಚರಿಸುವುದು ಆತಂಕಕಾರಿ – ಜಯಣ್ಣ

