ಸುದ್ದಿಮೂಲ ವಾರ್ತೆ ಕೊಪ್ಪಳ, ಡಿ.10:
ಜಲಾಶಯ ನಿರ್ಮಿಸಿ ರೈತರಿಗೆ ನೀರಾವರಿ ಸೌಲಭ್ಯ ಒದಗಿಸಲು ಹಿನ್ನೀರಿನ ಭಾಗದ ರೈತರು ತಮ್ಮ ಭೂಮಿ ತ್ಯಾಾಗ ಮಾಡಿದ್ದಾಾರೆ. ಭೂಮಿ ಕಳೆದುಕೊಂಡ ರೈತರಿಗೆ ಪರ್ಯಾಯವಾಗಿ ಏತ ನೀರಾವರಿ ಮೂಲಕ ಭೂಮಿಗೆ ನೀರು ಹರಿಸಬೇಕು. ಈ ಕುರಿತು ಯೋಜನೆಯೊಂದು ಸಿದ್ದವಾಗಿದೆ. ಆದರೆ, ಕಾಮಗಾರಿ ಮಾತ್ರ ಆಮೆವೇಗದಲ್ಲಿ ನಡೆದಿದೆ. ಕಾಲುವೆಗಾಗಿ ಭೂ ಸ್ವಾಾಧೀನ ಪಡಿಸಿಕೊಂಡ ಸರಕಾರ ಅವರಿಗೆ ಪರಿಹಾರ ನೀಡಿಲ್ಲ.
ಕರ್ನಾಟಕ. ಆಂಧ್ರ, ತೆಲಂಗಾಣ ಭಾಗದ ಸುಮಾರು 12 ಲಕ್ಷ ಎಕರೆ ಪ್ರದೇಶಕ್ಕೆೆ ನೀರಾವರಿ ಸೌಲಭ್ಯ ಒದಗಿಸುವ ತುಂಗಭದ್ರಾಾ ಜಲಾಶಯಕ್ಕಾಾಗಿ ಅಣೆಕಟ್ಟೆೆ ಕಟ್ಟಲಾಗಿದೆ. ಒಟ್ಟು 134 ಟಿಎಂಸಿ ಸಾಮಾರ್ಥ್ಯ ಡ್ಯಾಾಂ ಗಾಗಿ ಸಾವಿರಾರು ಎಕರೆ ಭೂಮಿ ರೈತರು ಕಳೆದುಕೊಂಡಿದ್ದಾಾರೆ. ಕೊಪ್ಪಳ, ವಿಜಯನಗರ ಜಿಲ್ಲೆೆಯ ರೈತರು ಭೂಮಿ ಕಳೆದುಕೊಂಡಿದ್ದು ಅವರಿಗೆ ಪರ್ಯಾಯವಾಗಿ ಏತ ನೀರಾವರಿ ಯೋಜನೆಗಳ ಮೂಲಕ ಭೂಮಿಗೆ ನೀರು ಒದಗಿಸುವ ಯೋಜನೆ ಹಿಂದಿನಿಂದ ಹೇಳಿಕೊಳ್ಳುತ್ತಾಾ ಬರಲಾಗಿದೆ.
ಈ ಮಧ್ಯೆೆ 9 ವರ್ಷಗಳ ಹಿಂದೆ ಅಳವಂಡಿ – ಬೆಟಗೇರಿ ಏತ ನೀರಾವರಿ ಯೋಜನೆಯ ಕಾಮಗಾರಿ ಆರಂಭವಾಗಿದೆ. ಅಳವಂಡಿ, ಬೆಟಗೇರಿ, ಮೈನಳ್ಳಿಿ, ಕೋಮಲಾಪುರ ಸೇರಿ ಒಟ್ಟು 9 ಸಾವಿರ ಎಕರೆ ಪ್ರದೇಶಕ್ಕೆೆ ನೀರಾವರಿ ಸೌಲಭ್ಯ ಒದಗಿಸುವ ಯೋಜನೆ ಇದಾಗಿದೆ. ಆರಂಭದಲ್ಲಿ ಕೇವಲ 8 ಕೋಟಿ ರೂಪಾಯಿಯಲ್ಲಿ ಆರಂಭವಾದ ಯೋಜನೆಯು ಪರಿಷ್ಕೃತಗೊಂಡು ಈಗ 211 ಕೋಟಿ ರೂಪಾಯಿ ಮಂಜೂರಾಗಿದೆ. ಇಲ್ಲಿ ಕೇವಲ ಯೋಜನೆ ಪರಿಷ್ಕೃತಕ್ಕೆೆ ಹೆಚ್ಚು ಆದ್ಯತೆ ನೀಡುವ ರಾಜಕಾರಣಿಗಳು ಯೋಜನೆ ಪೂರ್ಣಗೊಳಿಸಲು ಇಚ್ಛಾಾಶಕ್ತಿಿ ಹೊಂದಿಲ್ಲ. ಈ ಮಧ್ಯೆೆ ನಮ್ಮ ಭೂಮಿಗೆ ನೀರು ಇಲ್ಲ ನೀರಾವರಿ ಕನಸು ಕಂಡವರಿಗೆ ಈಗ ನಿರಾಸೆಯಾಗಿದೆ
ಕಾಲುವೆಗಾಗಿ 137 ಎಕರೆ ಭೂಮಿ ಸ್ವಾಾದೀನ ಪಡಿಸಿಕೊಳ್ಳಲಾಗಿದೆ. ಅವರಿಗೆ ಕಡಿಮೆ ಪರಿಹಾರ ನೀಡಲು ಸರಕಾರ ಮುಂದಾಗಿತ್ತು. ಆದರೆ ಈಗಿನ ಮಾರುಕಟ್ಟೆೆ ದರದಲ್ಲಿ ಪರಿಹಾರ ನೀಡಿ ಎಂದು ರೈತರು ನ್ಯಾಾಯಾಲಯಕ್ಕೆೆ ಹೋಗಿದ್ದರು. ನ್ಯಾಾಯಾಲಯವು ಮಾರುಕಟ್ಟೆೆ ದರಕ್ಕೆೆ 4 ಪಟ್ಟು ಹಣ ನೀಡಲು ಸೂಚಿಸಿದೆ. ಈ ಹಿನ್ನೆೆಲೆಯಲ್ಲಿ ಬಹುತೇಕ ರೈತರ ಸಮಸ್ಯೆೆ ಇತ್ಯರ್ಥವಾಗಿದೆ. ಆದರೆ ರಾಜಕೀಯ ಇಚ್ಛಾಾಶಕ್ತಿಿ ಕೊರತೆಯಿಂದ ಯೋಜನೆ ನೆನೆಗುದಿಗೆ ಬಿದ್ದಿದೆ. ಪ್ರತಿ ಚುನಾವಣೆಯಲ್ಲಿಯೂ ಅಳವಂಡಿ – ಬೆಟಗೇರಿ ಏತ ನೀರಾವರಿ ವಿಷಯ ಇಟ್ಟು ಮತ ಕೇಳುವ ರಾಜಕಾರಣಿಗಳು ನಂತರ ಮರೆತು ಬಿಡುತ್ತಾಾರೆ.
ಒಂದು ಯೋಜನೆ ಕಾಲಮಿತಿಯಲ್ಲಿ ಪೂರ್ಣಗೊಳಿಸದಿದ್ದರೆ ಯೋಜನೆಯ ಆರ್ಥಿಕ ಗಾತ್ರ ಹೆಚ್ಚಾಾಗುತ್ತದೆ. ಈ ಮಧ್ಯೆೆ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಯೋಜನೆ ಮುಗಿಸಲು ನಿಷ್ಕಾಾಳಜಿ ವಹಿಸಿದರೆ ಹೆಸರಿಗೆ ಮಾತ್ರ ಯೋಜನೆಯಾಗುತ್ತದೆ ಎಂಬುದಕ್ಕೆೆ ಅಳವಂಡಿ – ಬೆಟಗೇರಿ ಏತ ನೀರಾವರಿ ಯೋಜನೆ ಸಾಕ್ಷಿಯಾಗುತ್ತಿಿದೆ.
ದಶಕವಾದರೂ ಪೂರ್ಣಗೊಳ್ಳದ ಏತ ನೀರಾವರಿ

