ಸುದ್ದಿಮೂಲವಾರ್ತೆ
ಕೊಪ್ಪಳ ಮೇ 30: ಇಡೀ ಜಗತ್ತಿನ ಜನ ದೇಶದ ದೇಗುಲ ಉದ್ಘಾಟನೆ ಮಾಡುವದನ್ನು ವೀಕ್ಷಿಸುತ್ತಿದ್ದರು. ದೇಶ, ವಿದೇಶದಿಂದ ಗಣ್ಯರು ಬಂದಿದ್ದರು. ಈ ಸಂದರ್ಭದಲ್ಲಿ ಹೋರಾಟ ಮಾಡಿರೋದು ಎಷ್ಟು ಸರಿ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಇಂದು ಕೊಪ್ಪಳದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ ಕುಸ್ತಿ ಪಟು ಆರೋಪ ಅವರ ಹೋರಾಟಕ್ಕೆ ನಮ್ಮ ವಿರೋಧವಿಲ್ಲ.ಆದರೆ ಹೋರಾಟದ ಸಂದರ್ಭ ಯಾವುದು ಎಂಬುವುದು ನೋಡಬೇಕು.ಅನ್ಯಾಯವಾಗಿದ್ದರೆ ತನಿಖೆಯಾಗಲಿ.ಹೋರಾಟ ಮಾಡೋದಕ್ಕೆ ನಮ್ಮ ವಿರೋಧವಿಲ್ಲಈ ಪ್ರಕರಣದಲ್ಲಿ ಕೇಂದ್ರ ಸರಕಾರ ಮಧ್ಯಸ್ತಿಕೆ ವಹಿಸಬೇಕೆನ್ನುವುದು ನಮ್ಮ ಒತ್ತಾಯವೂ ಇದೆ ಎಂದರು.
ಇವತ್ತಿನ ಫಲಿತಾಂಶ ಆಧಾರದಲ್ಲಿ ಮುಂದಿನ ಲೋಕಸಭೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತೆ ಎಂದು ಹೇಳೋದಕ್ಕಾಗೋಲ್ಲ ಇನ್ನೂ ಮೂರು ತಿಂಗಳಲ್ಲಿ ಏನೇನೊ ಬದಲಾವಣೆಗಳಾಗಬಹುದು. ಅವರು ಹೆಚ್ಚು ಸೀಟು ಗೆಲ್ಲುತ್ತೇನೆ ಎಂದು ಆಸೆ ಪಡಬಹುದು. ಅವರು ಆಸೆ ಪಡೋದರಲ್ಲಿ ತಪ್ಪೇನಿಲ್ಲ. ಈಗಲೂ ಸಹ ಬಿಜೆಪಿಗೆ ಶೇ 36 ರಷ್ಟು ಮತಗಳ ಬಂದಿವೆ. ಸಂಖ್ಯೆಯಲ್ಲಿ ಸೋತಿರಬಹುದು ಆದರೆ ಮತ ಗಳಿಕೆಯಲ್ಲಿ ಹೆಚ್ಚಿದ್ದೇವೆ ಎಂದರು.
ಕಾಂಗ್ರೆಸ್ ಈಗ ಘೋಷಿಸಿದ ಗ್ಯಾರಂಟಿ ಯೋಜನೆಗಳಿಗೆ ಹೇಗೆ ಹಣ ಹೊಂದಿಸುತ್ತಾರೆ ನೋಡಬೇಕು. ನಿವೇಶನಗಳ ಮೇಲೆ ತೆರಿಗೆ ಹಾಕುತ್ತೀನಿ ಎಂದಿದ್ದಾರೆ. ಅವರ ಗ್ಯಾರಂಟಿ ಯೋಜನೆ ಅನುಷ್ಠಾನದ ಕಾದು ನೋಡಬೇಕೆಂದರು.
ಪ್ರಧಾನಿ ನರೇಂದ್ರ ಮೋದಿ ದೇಶದ ಗೌರವ ಹೆಚ್ಚಿಸಿದ್ದಾರೆ 9 ವರ್ಷದಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳಾಗಿವೆ.
ನಿನ್ನೆ ದೆಹಲಿಯಿಂದ ಮುಂಜಾನೆ 10 ಗಂಟೆಗೆ ಬಿಟ್ಟು ಮದ್ಯಾಹ್ನ 2.30 ಗೆ ಹುಬ್ಬಳ್ಳಿಗೆ ಬಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದೇನೆ ಅಷ್ಟರ ಮಟ್ಟಿಗೆ ಸಂಪರ್ಕ ಕ್ರಾಂತಿಯಾಗಿದೆ.ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳಾಗಿವೆ. ಇನ್ನೂ ಮೂರು ನಾಲ್ಕು ತಿಂಗಳಲ್ಲಿ ಸಿಂಧನೂರಿನಿಂದ ಹುಬ್ಬಳ್ಳಿ, ಬೆಂಗಳೂರು ಹಾಗು ಗದಗ ವಾಡಿ ರೈಲು ಮಾರ್ಗದಲ್ಲಿ ಕುಷ್ಟಗಿಯಿಂದಲೂ ರೈಲು ಓಡಲಿವೆ.
ಕುಕನೂರು. ಯಲಬುರ್ಗಾ, ಮಸ್ಕಿ ಸಿಂಧನೂರು ಬೈ ಪಾಸ್ ಕಾಮಗಾರಿ ಆರಂಭವಾಗಲಿದೆ.ದಡೇಸಗೂರಿನಲ್ಲಿ ಸೇತುವೆ ಕಾಮಗಾರಿ ನಡೆಯಲಿದೆ. ಕೊಪ್ಪಳದ ಕುಷ್ಟಗಿ ರೈಲ್ವೆ ಮೇಲ್ಸೆತುವೆಗೆ ಒಂದಿಷ್ಟು ತಾಂತ್ರಿಕ ಸಲಹೆಯಿಂದ ಸ್ಥಗಿತಗೊಂಡಿದೆ. ಭಾನಾಪುರ ಮೇಲ್ಸೆತುವೆ. ಗಿಣಗೇರಿ ಮೇಲ್ಸೆತುವೆ ಬೇಗ ಸಂಚಾರಕ್ಕೆ ಮುಕ್ತವಾಗಲಿದೆ. ಕೊಪ್ಪಳದಲ್ಲಿ ಇಎಸ್ಐ ಆಸ್ಪತ್ರೆ ಕಾರ್ಯಾರಂಭ ಮಾಡಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು