ಸುದ್ದಿಮೂಲ ವಾರ್ತೆ ಬೆಂಗಳೂರು, ಜ.8:
ಹುಬ್ಬಳ್ಳಿಿಯಲ್ಲಿ ಪೊಲೀಸರೇ ಮಹಿಳೆಯನ್ನು ದುಶ್ಯಾಾಸನನಂತೆ ವಿವಸ ಮಾಡಿ ಹಲ್ಲೆ ಮಾಡಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ
ಆರ್.ಅಶೋಕ್ ಗಂಭೀರ ಆರೋಪ ಮಾಡಿದರು.
ವಿಧಾನಸೌಧದಲ್ಲಿ ಗುರುವಾರ ಪತ್ರಿಿಕಾಗೋಷ್ಠಿಿಯಲ್ಲಿ ಮಾತನಾಡಿದ ಅವರು, ಕಾಂಗ್ರೆೆಸ್ ಸರ್ಕಾರದಲ್ಲಿ ಮಹಿಳೆಯರಿಗೆ ಬದುಕುವ ಗ್ಯಾಾರಂಟಿ ಇಲ್ಲ. ಈ ಹಿಂದೆ ಬೆಳಗಾವಿಯಲ್ಲಿ ಅಧಿವೇಶನ ನಡೆಯುವಾಗ ದಲಿತ ಮಹಿಳೆಯನ್ನು ವಿವಸ ಮಾಡಿ ಹಲ್ಲೆ ಮಾಡಿದ್ದರು. ಇತ್ತೀಚೆಗೆ ಮೈಸೂರಿನಲ್ಲಿ ಬಾಲಕಿಯ ಅತ್ಯಾಾಚಾರವಾಗಿತ್ತು. ಈಗ ಹುಬ್ಬಳ್ಳಿಿಯಲ್ಲಿ ಪೊಲೀಸರೇ ಮಹಿಳೆಯನ್ನು ವಿವಸ ಮಾಡಿ ಹಲ್ಲೆ ಮಾಡಿದ್ದಾರೆ. ಮಹಾಭಾರತದಲ್ಲಿ ಧೃತರಾಷ್ಟ್ರ ಕುರುಡಾಗಿದ್ದರೆ, ಗಾಂಧಾರಿ ಕಣ್ಣಿಿಗೆ ಬಟ್ಟೆೆ ಕಟ್ಟಿಿಕೊಂಡಿದ್ದಳು. ಹಾಗೆಯೇ ಇಲ್ಲಿ ಸಿಎಂ ಸಿದ್ದರಾಮಯ್ಯ ಕುರುಡಾಗಿದ್ದರೆ, ಡಿಸಿಎಂ ಡಿ.ಕೆ.ಶಿವಕುಮಾರ್ ಕಣ್ಣಿಿಗೆ ಬಟ್ಟೆೆ ಕಟ್ಟಿಿಕೊಂಡಿದ್ದಾರೆ. ಪೊಲೀಸರು ದುಶ್ಯಾಾಸನನಂತೆ ವಿವಸ ಮಾಡಿದ್ದಾರೆ. ಇದು ಕಾನೂನು ಸುವ್ಯವಸ್ಥೆೆಗೆ ಹಿಡಿದ ಕೈಗನ್ನಡಿ ಎಂದರು.
ಹುಬ್ಬಳ್ಳಿಿಯಲ್ಲಿ ಮಹಿಳೆಯನ್ನು ಪೊಲೀಸರು ವಿವಸಗೊಳಿಸಿದ ಘಟನೆಯಿಂದ ಇಡೀ ರಾಜ್ಯ ತಲೆ ತಗ್ಗಿಿಸುವಂತಾಗಿದೆ. ಆದರೆ, ಮಹಿಳೆಯೇ ಬಟ್ಟೆೆ ಬಿಚ್ಚಿಿಕೊಂಡಿದ್ದು ಎಂದು ಸಿದ್ದರಾಮಯ್ಯ ನ್ಯಾಾಯಾಧೀಶರಂತೆ ತೀರ್ಪು ನೀಡಿದ್ದಾರೆ. ವರದಿ ಬರುವ ಮುನ್ನವೇ ಮುಖ್ಯಮಂತ್ರಿಿ ತೀರ್ಪು ನೀಡುತ್ತಾಾರೆ ಎಂದರೆ ಪೊಲೀಸರು ಅದೇ ರೀತಿ ವರದಿ ಬರೆಯಬೇಕಾಗುತ್ತದೆ. ಈ ಪ್ರಕರಣ ಮುಚ್ಚಿಿ ಹಾಕಲು ಷಡ್ಯಂತ್ರ ನಡೆದಿದೆ ಎಂದರು.
ವ್ಯಾಾನ್ನಲ್ಲಿ 20 ಪೊಲೀಸರಿರುವಾಗ ಮಹಿಳೆ ಬಟ್ಟೆೆ ಬಿಚ್ಚಿಿಕೊಳ್ಳಲು ಸಾಧ್ಯವಿಲ್ಲ. ಸ್ಥಳೀಯ ಕಾಂಗ್ರೆೆಸ್ ಕಾರ್ಪೊರೇಟರ್ ಮತದಾರರ ಪಟ್ಟಿಿ ಪರಿಷ್ಕರಣೆ ಮಾಡಲು ಅಡ್ಡಿಿ ಮಾಡಿದ್ದಾರೆ. ಕಾರ್ಪೊರೇಟರ್ ಮಾತು ಕೇಳಿಕೊಂಡು ಪೊಲೀಸರು ಕ್ರಮ ವಹಿಸಿದ್ದಾರೆ. ಬಾಂಗ್ಲಾಾದೇಶಿಯರನ್ನು ಬಂಧಿಸಲು, 7 ಕೋಟಿ ರೂ. ಬ್ಯಾಾಂಕ್ ಹಣ ಕದ್ದ ದರೋಡೆಕೋರರನ್ನು ಬಂಧಿಸಲು ಇಷ್ಟು ಉತ್ಸಾಾಹ ತೋರಿಲ್ಲ. ಕಾಂಗ್ರೆೆಸ್ ಅವಧಿಯಲ್ಲಿ 43,053 ಮಹಿಳಾ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಮಾಜಿ ಮುಖ್ಯಮಂತ್ರಿಿ ದೇವರಾಜು ಅರಸು ಅವರ ಸಂಪೂರ್ಣ ಅವಧಿಯಲ್ಲಿ ಇಷ್ಟು ಪ್ರಕರಣಗಳು ನಡೆದಿರಲಿಲ್ಲ. ಆದರೂ ಸಿದ್ದರಾಮಯ್ಯ ಹೋಲಿಕೆ ಮಾಡಿಕೊಳ್ಳುತ್ತಾಾರೆ ಎಂದರು.
ಅಮಾನತು ಮಾಡಿ : ಮಹಿಳಾ ಆಯೋಗ ಈಗಾಗಲೇ ಛೀಮಾರಿ ಹಾಕಿದೆ. ನಾನು ಮಾನವ ಹಕ್ಕು ಆಯೋಗ ಹಾಗೂ ಮಹಿಳಾ ಆಯೋಗಕ್ಕೆೆ ಪತ್ರ ಬರೆದಿದ್ದೇನೆ. ದೌರ್ಜನ್ಯಕ್ಕೊೊಳಗಾದ ಮಹಿಳೆಯ ಮೇಲೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾದ ಇನ್ಸ್ಪೆಕ್ಟರ್ ಹಾಗೂ ಎಲ್ಲ ಪೊಲೀಸರನ್ನು ಜನವರಿ 9 ರ ಬೆಳಗ್ಗೆೆ 10 ಗಂಟೆಯೊಳಗೆ ಅಮಾನತು ಮಾಡಬೇಕು. ನಾನು ಹುಬ್ಬಳ್ಳಿಿಗೂ ತೆರಳಿ ಪ್ರತಿಭಟಿಸಲಿದ್ದೇನೆ. ಇಲ್ಲವಾದರೆ ಇದು ದುಶ್ಯಾಾಸನ ಸರ್ಕಾರ ಎಂದು ಹೇಳುತ್ತೇವೆ ಎಂದರು.
ಮಹಿಳಾ ಆಯೋಗದವರು ಎದುರಾಳಿಯ ಪರವಾಗಿ ಮಾತಾಡಿದ್ದಾರೆ. ಇನ್ನೂ ತನಿಖಾ ವರದಿ ಬರದೆ ಕ್ಲೀನ್ ಚಿಟ್ ನೀಡಿದ್ದಾರೆ. ಪೊಲೀಸರು ಭಯೋತ್ಪಾಾದಕರನ್ನು ಬಂಧಿಸುವಂತೆ ಮನೆ ಮೇಲೆ ದಾಳಿ ಮಾಡಲು ಹೋಗಿದ್ದಾರೆ. ಅವರು ದೇಶ ವಿರೋಧಿ ಚಟುವಟಿಕೆ ಮಾಡಿಲ್ಲ. ಕಾಂಗ್ರೆೆಸ್ ಕಾರ್ಪೊರೇಟರ್ ಮಾತು ಕೇಳಿಕೊಂಡು ಪೊಲೀಸರು ಈ ಕೆಲಸ ಮಾಡಿದ್ದಾರೆ. ಗೃಹಸಚಿವ ಹಾಗೂ ಮುಖ್ಯಮಂತ್ರಿಿ ಮಾತ್ರ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ಮಾಡಬಹುದು. ಉಪಮುಖ್ಯಮಂತ್ರಿಿಗೆ ಇಂತಹ ಅಧಿಕಾರ ಇಲ್ಲ. ಇದು ಸಂವಿಧಾನಬಾಹಿರ ಎಂದರು.
ನ್ಯಾಾಷನಲ್ ಹೆರಾಲ್ಡ್ಗೆ ಜಾಹೀರಾತು : ನ್ಯಾಾಷನಲ್ ಹೆರಾಲ್ಡ್ ಪತ್ರಿಿಕೆಯ ಹಗರಣದಲ್ಲಿ ಸೋನಿಯಾ ಗಾಂಧಿ ಜಾಮೀನು ಪಡೆದಿದ್ದಾರೆ. ಡಿ.ಕೆ.ಶಿವಕುಮಾರ್ ಮೇಲೂ ಪ್ರಕರಣವಿದೆ. ಕರ್ನಾಟಕದಲ್ಲಿ ಒಬ್ಬರ ಮನೆಗೂ ಈ ಪತ್ರಿಿಕೆ ಬರುವುದಿಲ್ಲ. ಆದರೆ ಈ ಪತ್ರಿಿಕೆಗೆ 2023-24 ರಲ್ಲಿ 1.90 ಕೋಟಿ ರೂ., 2024-25 ರಲ್ಲಿ 1.42 ಕೋಟಿ ರೂ. ಮೊತ್ತದ ಜಾಹೀರಾತು ನೀಡಿದ್ದಾರೆ. ಇಡೀ ಜಗತ್ತಿಿನಿಂದ ಬಂದ ಜಾಹೀರಾತು ಪ್ರಮಾಣ ಶೇ.31 ಆಗಿದ್ದರೆ, ಕರ್ನಾಟಕದಿಂದ ಶೇ.69 ಬಂದಿದೆ. ಇದು ಹಗಲು ದರೋಡೆಯಾಗಿದ್ದು, ಎಲ್ಲಾಾ ಟ್ರಸ್ಟಿಿಗಳು ಜಾಮೀನಿನ ಮೇಲೆ ಹೊರಗಿದ್ದಾರೆ ಎಂದರು.
ಹುಬ್ಬಳ್ಳಿ ಮಹಿಳೆ ಮೇಲೆ ದೌರ್ಜನ್ಯ ಪ್ರಕರಣ ನ್ಯಾಯಾಂಗ ತನಿಖೆಗೆ ವಹಿಸಲು ಆಗ್ರಹ ಪೊಲೀಸರಿಂದ ದುಶ್ಯಾಸನಂತೆ ಮಹಿಳೆ ವಿವಸ : ಅಶೋಕ್ ಟೀಕೆ

