ಸುದ್ದಿಮೂಲ ವಾರ್ತೆ ಕಲಬುರಗಿ, ೆ.03:
ಈಡಿಗ, ಬಿಲ್ಲವ ಸೇರಿದಂತೆ 26 ಪಂಗಡಗಳ ಬೇಡಿಕೆಗಳನ್ನು ಒತ್ತಾಾಯಿಸಿ ಜ.6ರಿಂದ ಆರಂಭಗೊಂಡ 700 ಕಿಲೋಮೀಟರ್ ಐತಿಹಾಸಿಕ ಪಾದಯಾತ್ರೆೆ ೆ.12ರಂದು ಬೆಂಗಳೂರು ಫ್ರೀೀಡಂ ಪಾರ್ಕ್ ತಲುಪಲಿದ್ದು, ಕಲ್ಯಾಾಣ ಕರ್ನಾಟಕದ ಸಮಾಜ ಬಾಂಧವರು ಹೆಚ್ಚಿಿನ ಸಂಖ್ಯೆೆಯಲ್ಲಿ ಪಾಲ್ಗೊೊಳ್ಳುವಂತೆ ಕಲ್ಯಾಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿ ಅಧ್ಯಕ್ಷ ಸತೀಶ ವಿ ಗುತ್ತೇದಾರ್ ಮತ್ತು ಪ್ರದಾನ ಕಾರ್ಯದರ್ಶಿ ವೆಂಕಟೇಶ್ ಕಡೆಚೂರ್ ಪತ್ರಿಿಕಾಗೋಷ್ಠಿಿಯಲ್ಲಿ ಮನವಿ ಮಾಡಿದರು.
ಪಾದಯಾತ್ರೆೆ ತುಮಕೂರು ಜಿಲ್ಲೆಯನ್ನು ಪ್ರವೇಶಿಸಿದ್ದು ಇನ್ನು ಮುಂದಿನ ಒಂದು ವಾರ ತುಮಕೂರು ಜಿಲ್ಲೆಯಲ್ಲಿ ಪಾದಯಾತ್ರೆೆ ಸಾಗಲಿದೆ ಎಂದರು.
ೆ.12ರಂದು ಫ್ರೀೀಡಂ ಪಾರ್ಕ್ನಲ್ಲಿ ಸಾವಿರಾರು ಸಂಖ್ಯೆೆಯಲ್ಲಿ ಸಮಾಜ ಬಾಂಧವರು ಸಮಾವೇಶಗೊಂಡು ಪ್ರತಿಭಟನೆಯಲ್ಲಿ ಪಾಲ್ಗೊೊಳ್ಳಲಿದ್ದಾರೆ. ಸರ್ಕಾರವು ಕೂಡಲೇ ಪಾದಯಾತ್ರೆೆಯನ್ನು ಅಂತ್ಯಗೊಳಿಸಲು ಪರಿಹಾರ ಮಾರ್ಗವನ್ನು ಘೋಷಿಸಬೇಕು. ಪ್ರತಿಭಟನೆಯಲ್ಲಿ ಸರಕಾರ ಸ್ಪಂದಿಸದಿದ್ದರೆ ಡಾ. ಪ್ರಣವಾನಂದ ಶ್ರೀಗಳು ಅಮರಣಾಂತ ಉಪವಾಸ ಮಾಡುವುದಾಗಿ ಘೋಷಣೆ ಮಾಡಿರುವುದರಿಂದ ತಕ್ಷಣ ಪರಿಹಾರ ಕಲ್ಪಿಿಸಬೇಕೆಂದು ಸತೀಶ್ ಗುತ್ತೇದಾರ್ ಹೇಳಿದರು. ಮಹಾದೇವ ಗುತ್ತೇದಾರ್, ವೆಂಕಟೇಶ ಗುಂಡಾನೂರು, ಕುಪೇಂದ್ರ ಗುತ್ತೇದಾರ್ ನಾಗೂರ್, ತಿಮ್ಮಪ್ಪ ಗಂಗಾವತಿ, ಪ್ರವೀಣ್ ಜತ್ತನ್, ಡಾ.ಸದಾನಂದ ಪೆರ್ಲ ಇದ್ದರು.

