ಬೆಂಗಳೂರು: ಇಂದಿನಿಂದ ಹೊಸ ಆರ್ಥಿಕ ವರ್ಷದ ಆರಂಭವಾಗಿದ್ದು. ಈ ಸಮಯದಲ್ಲಿ ರ್ಕಾರ ದೊಡ್ಡ ಉಡುಗೊರೆಯನ್ನು ನೀಡಿದೆ. ಎಲ್ಪಿಜಿ ಸಿಲಿಂರ್ಗಳ ಬೆಲೆಯಲ್ಲಿ ಇಳಿಕೆಯಾಗಿದೆ. ವಾಣಿಜ್ಯ ಎಲ್.ಪಿ.ಜಿ ಸಿಲಿಂಡರ್ ಗಳ ಬೆಲೆಯನ್ನು ಸರ್ಕಾರ ಕಡಿಮೆ ಮಾಡಿದೆ. ವಾಣಿಜ್ಯ ಸಿಲಿಂಡರ್ ಬೆಲೆ ೯೧.೫೦ ರೂಪಾಯಿ ಇಳಿಕೆಯಾಗಿದೆ. ಇಂದಿನಿಂದಲೇ ಹೊಸ ದರಗಳನ್ನು ಜಾರಿಗೆ ತರಲಾಗಿದೆ. ಇದರಿಂದ ಜನರಿಗೆ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಕಳೆದ ತಿಂಗಳು ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ೩೫೦ ರೂಪಾಯಿ ಹೆಚ್ಚಳ ಮಾಡಲಾಗಿದ್ದು, ಈಗ ೯೧.೫೦ ರೂಪಾಯಿ ಇಳಿಕೆಯಾಗಿದೆ.
೨೦೨೪ ರ ಆರ್ಥಿಕ ವರ್ಷದ ಮೊದಲ ದಿನದಂದು ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಕಡಿತಗೊಳಿಸಲಾಗಿದೆ. ಆದಾಗ್ಯೂ, ಈ ಬದಲಾವಣೆಯನ್ನು ವಾಣಿಜ್ಯ ಅನಿಲ ಸಿಲಿಂರ್ಗಳ ವೆಚ್ಚದಲ್ಲಿ ಮಾತ್ರ ಮಾಡಲಾಗಿದೆ. ಮನೆಗಳಲ್ಲಿ ಬಳಸುವ ೧೪.೨ ಕೆಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಗಮನರ್ಹವಾಗಿ, ಮರ್ಚ್ನಲ್ಲಿ ರ್ಕಾರವು ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ನಲ್ಲಿ ಎಲ್ಪಿಜಿಯ ತೂಕ ೧೯ ಕೆ.ಜಿ. ಆಗಿರುತ್ತದೆ.
ಇಂಡಿಯನ್ ಆಯಿಲ್ ವೆಬ್ಸೈಟ್ ಪ್ರಕಾರ, ಇಂದಿನಿಂದ ಅಂದರೆ ಏಪ್ರಿಲ್ ೧ ರಿಂದ ವಾಣಿಜ್ಯ ಸಿಲಿಂಡರ್ ಬೆಲೆ ದೆಹಲಿಯಲ್ಲಿ ೨೦೨೮ ರೂ., ಕೋಲ್ಕತ್ತಾದಲ್ಲಿ ೨೧೩೨ ರೂ., ಮುಂಬೈನಲ್ಲಿ ೧೯೮೦ ರೂ. ಮತ್ತು ಚೆನ್ನೈನಲ್ಲಿ ೨೧೯೨.೫೦ ರೂ.ಗೆ ಲಭ್ಯವಿದೆ. ಈ ಹಿಂದೆ ವಾಣಿಜ್ಯ ಸಿಲಿಂರ್ನ ಬೆಲೆ ದೆಹಲಿಯಲ್ಲಿ ರೂ ೨೧೧೯.೫೦, ಕೋಲ್ಕತ್ತಾದಲ್ಲಿ ರೂ ೨೨೨೧.೫೦ ಮತ್ತು ಮುಂಬೈನಲ್ಲಿ ರೂ ೨೦೭೧.೫೦ ಆಗಿತ್ತು.
ಎಲ್ಪಿಜಿ ಬೆಲೆಯನ್ನು ಮುಖ್ಯವಾಗಿ ಸರ್ಕಾರಿ ತೈಲ ಕಂಪನಿಗಳು ನಿರ್ಧರಿಸುತ್ತವೆ ಮತ್ತು ಜಾಗತಿಕ ಕಚ್ಚಾ ಇಂಧನ ದರಗಳ ಆಧಾರದ ಮೇಲೆ ಮಾಸಿಕ ಆಧಾರದ ಮೇಲೆ ಬದಲಾವಣೆಗೆ ಒಳಪಟ್ಟಿರುತ್ತದೆ. ಕಚ್ಚಾ ತೈಲದ ಏರಿಕೆಯು ಎಲ್.ಪಿ.ಜಿ ದರಗಳಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ ಮತ್ತುಕಚ್ಚಾ ತೈಲದ ಏರಿಕೆಯು ಬೆಲೆ ಇಳಿಕೆ ಸಿಲಿಂಡರ್ ದರ ಇಳಿಕೆಗೆ ಕಾರಣ. ಗೃಹಬಳಕೆಯ ಐPಉ ಗ್ಯಾಸ್ ಸಿಲಿಂಡರ್ (೧೪.೨ ಞgs) ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಕರ್ನಾಟಕದಲ್ಲಿ (ಬೆಂಗಳೂರು) ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆ ರೂ. ೧,೧೦೫.೫೦ ಆಗಿದೆ.