ಸುದ್ದಿಮೂಲವಾರ್ತೆ
ಕೊಪ್ಪಳ,ಆ.22: ನೆನೆಗುದಿಗೆ ಬಿದ್ದಿದ್ದ ಮುನಿರಾಬಾದ್ ಹುಲಿಗಿ ರೈಲ್ವೆ ಗೇಟಿಗೆ ಕೇಂದ್ರ ಸರಕಾರ ಮಂಜೂರು ಮಾಡಿಸಿದ್ದು. ಅದಕ್ಕೆ ಸಂಸದರಿಗೆ ಹುಲಿಗಿ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದರು.
ಈ ಕುರಿತು ಇಂದು ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಮಾಹಿತಿ ನೀಡಿದ ತಾಲೂಕಾ ಪಂಚಾಯತ್ ಮಾಜಿ ಸದಸ್ಯ ಪಾಲಾಕ್ಷಪ್ಪ ಗುಂಗಾಡಿ ಲಕ್ಷಾಂತರ ಜನ ಬರುವ ಹುಲಿಗಿಗೆ ರೈಲ್ವೆ ಗೇಟ್ ಅವಶ್ಯವಿತ್ತು. ಈ ಸಂದರ್ಭದಲ್ಲಿ ಸಂಸದರ ಪ್ರಯತ್ನದಿಂದ ಗೇಟ್ ನಿರ್ಮಾಣವಾಗಲಿದೆ. ಇದು ಸಾಕಷ್ಟು ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸೈಯದ್ ಇನಾಮುತ್ತುಲ್. ಯೋಗೀಶ, ಗವಿಸಿದ್ದಪ್ಪ ಗುಂಗಾಡಿ ಹಾಗು ಬಾಬುಗೌಡ ಇದ್ದರು.