ಸುದ್ದಿಮೂಲ ವಾರ್ತೆ ಕೊಪ್ಪಳ, ಡಿ.05
ಕೊಪ್ಪಳ ನಗರದಲ್ಲಿರುವ ಪುರಾತನ ಕೆರೆ ಅಭಿವೃದ್ದಿಗಾಗಿ ಕೋಟ್ಯಾಾಂತರ ರೂಪಾಯಿ ಖರ್ಚು ಮಾಡಲಾಗಿದ್ದರೂ ಈಗ ಅದು ಹಾಳು ಕೊಂಪೆಯಾಗಿದೆ.
ಸುಂದರ ಪ್ರವಾಸಿ ತಾಣವಾಗಬೇಕಾಗಿದ್ದ ಸ್ಥಳ ಈಗ ಪುಡಾರಿಗಳ ಚಟುವಟಿಕೆಯ ತಾಣವಾಗಿದೆ. ಈ ಕುರಿತು ವಿವಿಧ ಮಾಧ್ಯಮಗಳಲ್ಲಿ ವರದಿ ಬಂದಾಗ ಮಾತ್ರ ತಕ್ಷಣ ಅಭಿವೃದ್ದಿ ಪಡಿಸುವುದಾಗಿ ಹೇಳುವ ರಾಜಕಾರಣಿಗಳು ನಂತರ ಮರೆತು ಬಿಡುತ್ತಾಾರೆ.
ಕೊಪ್ಪಳ ನಗರದಲ್ಲಿರುವ ಹುಲಿಕೇರಿ, ನಗರಕ್ಕೆೆ ಹೊಂದಿಕೊಂಡಿರುವ ಬೆಟ್ಟಗಳ ಮಧ್ಯೆೆ ವಿಸ್ತಾಾರವಾಗಿರುವ ಈ ಕೆರೆಯು ಒಂದು ಕಾಲದಲ್ಲಿ ಕೊಪ್ಪಳ ನಗರಕ್ಕೆೆ ಕುಡಿವ ನೀರು ಒದಗಿಸುತ್ತಿಿತ್ತು.
ಸುಮಾರು 70 ಎಕರೆ ಪ್ರದೇಶದಲ್ಲಿರುವ ಈ ಕೆರೆ ಬೆಟ್ಟಗಳ ಮಧ್ಯೆೆ ಇರುವುದರಿಂದ ಆಕರ್ಷಕವಾಗಿದೆ. ಈ ಕೆರೆ ಅಭಿವೃದ್ದಿ ಪಡಿಸಬೇಕು. ಹುಲಿಕೇರಿ ಮೇಲೆ ಒಂದು ಉದ್ಯಾಾನವನ ನಿರ್ಮಿಸಿ ಕೊಪ್ಪಳ ನಗರದ ಜನರಿಗೆ ವಿಹಾರ ತಾಣ ಮಾಡಬೇಕೆನ್ನುವ ಒತ್ತಾಾಯ ಬಹಳ ದಿನಗಳಿಂದ ಇತ್ತು. ಕೊಪ್ಪಳದಲ್ಲಿರುವ ಏಕೈಕ ದೊಡ್ಡ ಕೆರೆಯಾಗಿರುವ ಹುಲಿಕೇರಿ ಅಭಿವೃದ್ದಿಗಾಗಿ ನಗರಸಭೆ ಆಗಾಗ ಖರ್ಚು ಮಾಡುತ್ತಲೆ ಇದೆ. ಆದರೆ ಈ ಕೆರೆ ನಿರ್ವಹಣೆ ಇಲ್ಲದೆ ಹಾಳಾಗಿದೆ.
ಈ ಮಧ್ಯೆೆ 2016 ರಲ್ಲಿ ಅಂದಿನ ಸರಕಾರ ಪ್ರವಾಸೋದ್ಯಮ ಇಲಾಖೆಯಿಂದ 3 ಕೋಟಿ ರೂಪಾಯಿಯಲ್ಲಿ ಹುಲಿಕೇರಿ ಅಭಿವೃದ್ದಿಗಾಗಿ ಹಣ ಮಂಜೂರು ಮಾಡಿದೆ. ಈ ಹಣದಲ್ಲಿ ಇಲ್ಲೊೊಂದು ವಿಹಾರ ತಾಣ ನಿರ್ಮಾಣ ಮಾಡಿದ್ದಾಾರೆ. ಆರಂಭದಲ್ಲಿ ವಿಹಾರ ತಾಣಕ್ಕೆೆ ಸಾಕಷ್ಟು ಜನ ಭೇಟಿ ನೀಡಿ ಸಂಜೆ, ಬಿಡುವಿನ ವೇಳೆಯಲ್ಲಿ ಸಮಯ ಕಳೆದು ಉಲ್ಲಸಿತರಾಗುತ್ತಿಿದ್ದರು.
ಆದರೆ ಈಗ ಈ ಕೆರೆಗೆ ಹೋದರೆ ಮೂಗು ಮುಚ್ಚಿಿಕೊಂಡು ಹೋಗಬೇಕು. ಬಿದ್ದು ಹೋಗಿರುವ ಆಸನಗಳು. ಮಕ್ಕಳು ಆಟಕ್ಕಾಾಗಿ ಇರುವ ವಸ್ತುಗಳು. ಕುಳಿತು ಕೊಳ್ಳಲು ಇರುವ ಗುಡಿಸಲು ಮಾದರಿಯ ಕಟ್ಟಡಗಳು ಎಲ್ಲವೂ ಬಿದ್ದು ಹೋಗಿವೆ. ಇಲ್ಲಿಗೆ ಬಂದರೆ ಯಾಕಾದರೂ ಬಂದೆ ಎನ್ನುವಂತಾಗುತ್ತಿಿದೆ. ನಿರ್ವಹಣೆ ಮಾಡಬೇಕಾದ ನಗರಸಭೆಯು ಸಂಪೂರ್ಣ ನಿರ್ಲಕ್ಷ್ಯಕ್ಕೆೆ ಇದು ಸಾಕ್ಷಿಯಾಗಿದೆ.
ಈ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಸಾರವಾದಾಗ ತಕ್ಷಣ ಅಭಿವೃದ್ದಿ ಪಡಿಸುವುದಾಗಿ ಭರವಸೆ ನೀಡುವ ಶಾಸಕ ರಾಘವೇಂದ್ರ ಹಿಟ್ನಾಾಳ ನಂತರ ಮತ್ತೊೊಮ್ಮೆೆ ವರದಿ ಬಂದಾಗಲೇ ಈ ಕುರಿತು ಮಾತನಾಡುತ್ತಾಾರೆ ಎಂಬ ಆರೋಪ ಕೇಳಿ ಬರುತ್ತಿಿದೆ.
ಈ ಬಗ್ಗೆೆ ಸ್ಥಳೀಯ ಶಾಸಕ ರಾಘವೇಂದ್ರ ಹಿಟ್ನಾಾಳರನ್ನು ಕೇಳಿದರೆ ಜನರ ಒಡನಾಟವಿಲ್ಲದೆ ಹುಲಿಕೇರಿ ಹಾಳಾಗಿದೆ. ಅದನ್ನು ಸರಿಪಡಿಸಲಾಗುವುದು. ಈಗ ಪ್ರವಾಸೋದ್ಯಮ ಇಲಾಖೆಯಿಂದ ಅಭಿವೃದ್ದಿ ಪಡಿಸಲಾಗುವುದು ಪಿಪಿ ಮಾಡೆಲ್ ನಲ್ಲಿ ನಿರ್ವಹಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಒಂದು ಕಾಲದಲ್ಲಿ ಕೊಪ್ಪಳ ನಗರದ ಜನರಿಗೆ ಪ್ರವಾಸಿ ತಾಣವಾಗಿದ್ದ ಹುಲಿಕೇರಿಯ ದುಃಸ್ಥಿಿತಿಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಸಾರ್ವಜನಿಕರ ದುದ್ಡು ಪೋಲಾಗಿದೆ. ಈ ಬಗ್ಗೆೆ ಕ್ರಮ ಕೈಗೊಳ್ಳಬೇಕೆಂದು ಜನರು ಆಗ್ರಹಿಸಿದ್ದಾಾರೆ.
ಹುಲಿಕೇರಿ ಅಭಿವೃದ್ದಿ ನೆನಪಾಗುವುದು ಮಾಧ್ಯಮದವರು ಕೇಳಿದಾಗ ಮಾತ್ರ

