ಸುದ್ದಿಮೂಲ ವಾರ್ತೆ ಸಿಂಧನೂರು, ೆ.12:
ಕೇಂದ್ರ ಸರಕಾರ ಹೊಸ ಕಾರ್ಮಿಕ ಕಾಯ್ದೆೆಗಳನ್ನು ಬಂಡವಾಳ ಶಾಹಿಗಳ ಪರವಾಗಿ ರಚಿಸಿದ್ದು, ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳುವ ಹುನ್ನಾಾರವಿದೆ ಎಂದು ಎಐಸಿಸಿಟಿಯು ರಾಜ್ಯ ಸಹಕಾರ್ಯದರ್ಶಿ ನಾಗರಾಜ ಪೂಜಾರ್ ಆಕ್ರೋೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ 4 ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತಂದಿರುವುದನ್ನು ವಿರೋಧಿಸಿ, ಮಾರಕ ಸಂಹಿತೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಎಐಸಿಸಿಟಿಯುನಿಂದ ನಗರದ ಎಪಿಎಂಸಿ ಗಣೇಶ ಗುಡಿಯಿಂದ ಪ್ರವಾಸಿ ಮಂದಿರದವರೆಗೆ ಹಮ್ಮಿಿಕೊಂಡಿದ್ದ ಬೈಕ್ ರ್ಯಾಾಲಿಯ ನೇತೃತ್ವವಹಿಸಿ ಅವರು ಮಾತನಾಡಿದರು. ಈ ಹಿಂದೆ ಇದ್ದ 8 ಗಂಟೆ ಕೆಲಸದ ಅವಧಿ ಹೊಸ ಸಂಹಿತೆಗಳ ಮೂಲಕ 12 ಗಂಟೆಯವರೆಗೆ ವಿಸ್ತರಿಸಿವೆ. ಕಾರ್ಮಿಕರ ಹಕ್ಕುಗಳಿಗೆ ಚ್ಯುತಿ ಬಂದಾಗ, ಸಂಘಟನೆಗಳು ಹೋರಾಟ ನಡೆಸದಂತೆ ಪ್ರತಿಬಂಧಿಸಲಾಗಿದೆ. ಇದಕ್ಕಾಾಗಿ ಹಲವು ನಿಬಂಧನೆಗಳನ್ನು ತರುವ ಮೂಲಕ ಹೋರಾಟದ ಹಕ್ಕು ಕಿತ್ತುಕೊಳ್ಳಲಾಗಿದೆ. ಹೋರಾಟದಲ್ಲಿ ತೊಡಗಿದವರನ್ನು ಕೆಲಸದಿಂದ ತೆಗೆಯುವ ಮತ್ತು ಜೈಲಿಗೆ ಹಾಕುವ ಶಿಕ್ಷೆ ಗುರಿಪಡಿಸಲು ಅವಕಾಶ ಕಲ್ಪಿಿಸಲಾಗಿದೆ. ಕೇಂದ್ರ ಸರ್ಕಾರ ಪರೋಕ್ಷವಾಗಿ ಕಾರ್ಮಿಕರನ್ನು ಆಧುನಿಕ ಜೀತಪದ್ಧತಿಗೆ ತಳ್ಳಿಿದೆ ಎಂದು ಆಪಾದಿಸಿದರು.
ರ್ಯಾಾಲಿಯಲ್ಲಿ ಮುಖಂಡರಾದ ಸಿಪಿಐ(ಎಂಎಲ್) ತಾಲೂಕು ಕಾರ್ಯದರ್ಶಿ ಬಸವರಾಜ ಬೆಳಗುರ್ಕಿ, ಬಸವರಾಜ ಕೊಂಡೆ, ಆಯರ್ಲಾ ತಾಲೂಕು ಸಂಚಾಲಕ ಆರ್.ಎಚ್.ಕಲಮಂಗಿ, ತುಂಗಭದ್ರಾಾ ಕಾರ್ಮಿಕ ಸಂಘ ತುರ್ವಿಹಾಳ ಉಪ ವಿಭಾಗದ ಅಧ್ಯಕ್ಷ ಶರಣಪ್ಪ ಉದ್ಬಾಾಳ, ಜವಳಗೇರಾ ವಿಭಾಗದ ಅಧ್ಯಕ್ಷ ವೀರೇಶ, ಘನತ್ಯಾಾಜ್ಯ ವಾಹನ ಚಾಲಕರ ಸಂಘದ ಮೌನೇಶ ಕವಿತಾಳ, ವೀರೇಶ ಕೇಸರಿ, ಬಸ್ ನಿಲ್ದಾಾಣ ಕಾರ್ಮಿಕರಾದ ಜಯಮ್ಮ, ಮಹಾದೇವಮ್ಮ, ಮಹಾಂಕಾಳಮ್ಮ, ರೈತನಗರ ಕ್ಯಾಾಂಪ್, ಹುಸೇನಪ್ಪ ಅರಳಹಳ್ಳಿಿ ಹಾಗೂ ನೂರಾರು ಕೃಷಿ ಕೂಲಿ ಕಾರ್ಮಿಕರು ಪಾಲ್ಗೊೊಂಡಿದ್ದರು.
ಕಾರ್ಮಿಕ ಕಾನೂನುಗಳನ್ನು ವಿರೋಧಿಸಿ ಬೈಕ್ರ್ಯಾಾಲಿ ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳುವ ಹುನ್ನಾರ – ಪೂಜಾರ

