ಆ,14:ಸರ್ಕಾರಿ ಸ್ವಾಮ್ಯದ ಸ್ಮಶಾನದ ಜಾಗವನ್ನು ಖಾಸಗಿ ವ್ಯಕ್ತಿಯೊಬ್ಬ ಕಬಳಿಕೆ ಮಾಡಿರುವ ಆರೋಪ ಕೇಳಿ ಬಂದಿದೆ ಆನೇಕಲ್ ತಾಲೂಕಿನ ಬಹದ್ದೂರ್ ಪುರ ಸ್ಮಶಾನ ಜಾಗ ಸರ್ವೆ ನಂಬರ್ 170 ರಲ್ಲಿ 5 ಎಕರೆ ಜಾಗವನ್ನು ಅಲ್ಲಿನ ಬಹುದ್ದೂರ್ ಪುರ ನಿವಾಸಿಗಳಿಗೆ ರುದ್ರಭೂಮಿಗೆ ಅಂತ ಬಿಡಲಾಗಿತ್ತು .ಆದರೆ ಅಲ್ಲಿನ ಪ್ರಭಾವಿ ನಾಯಕರೊಬ್ಬರು ಆ ಜಾಗವನ್ನು ಕಬಳಿಕೆ ಮಾಡಲು ಹುನ್ನಾರ ನಡೆಸುತ್ತಿದಾರೆ ಅಂತ ಆರೋಪ ಕೇಳಿ ಬಂದಿದೆ.
ಇನ್ನು ಸುಮಾರು 45 ವರ್ಷಗಳಿಂದ ಸ್ಮಶಾನದಲ್ಲಿ ಅಂತ್ಯಕ್ರಿಯೆಯನ್ನು ನಡೆಸಲಾಗುತ್ತಿತ್ತು ಆದರೆ ಈಗ ನೆನ್ನೆಯಿಂದ ಪ್ರಭಾವಿ ವ್ಯಕ್ತಿಯೊಬ್ಬ ಜೆಸಿಬಿ ತರಿಸಿ ಆ ಜಾಗವನ್ನ ಹದ ಮಾಡಿರುವುದಾಗಿ ಆರೋಪ ಕೇಳಿ ಬಂದಿದೆ. ಇನ್ನು ಈ ಜಾಗ ಸುಮಾರು 45 ವರ್ಷಗಳ ಹಿಂದೆ ಸರ್ಕಾರದಿಂದ ಹಿಂಧೂ ರುದ್ರ ಭೂಮಿಗೆ ಮಂಜೂರು ಮಾಡಲಾಗಿತ್ತು ಅದೇ ಜಾಗದಲ್ಲಿ ಒಂದು ಎಕರೆ ಜಾಗ ಬಹದ್ದೂರ್ ಪುರ ರಮೇಶಗೆ ಮಂಜೂರು ಮಾಡಲಾಗಿತ್ತು ಆದರೆ ಈಗ ಆ ಜಾಗವನ್ನು ಬಿಟ್ಟು ಸ್ಮಶಾನದ ಜಾಗವನ್ನು ಕಬಳಿಕೆ ಮಾಡುತ್ತಿದ್ದಾರೆ ಅಂತ ಸ್ಥಳೀಯರು ಆರೋಪ ಮಾಡುತ್ತಿದ್ದಾರೆ .. ಇನ್ನು ಸ್ಮಶಾನದ ಒತ್ತುವರಿ ಜಾಗಕ್ಕೆ ಪುರಸಭೆ ಅಧ್ಯಕ್ಷ ಪದ್ಮನಾಭ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನು ಇದೆ ವೇಳೆ ಪುರಸಭೆ ಅಧ್ಯಕ್ಷ ಪದ್ಮನಾಭ ಮಾತಾಡಿ ಆದಷ್ಟು ಬೇಗ ಈ ಸಮಸ್ಯೆಗೆ ಪರಿಹಾರ ಹುಡುಕುವುದಾಗಿ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಸಮಸ್ಯೆಯನ್ನು ಬಗೆಹರಿಸುವುದಾಗಿ ತಿಳಿಸಿದರು. ಇನ್ನು ಅಲ್ಲಿ ಸ್ಥಳಿ ನಿವಾಸಿಯಾಗಿದ್ದ ಮುನಿಸ್ವಾಮಿಪ್ಪ ಮಾತನಾಡಿ ಕಳೆದ 30 40 ವರ್ಷಗಳಿಂದ ಈ ಜಾಗದಲ್ಲಿ ಅಂತ್ಯ ಸಂಸ್ಕಾರವನ್ನು ಮಾಡುತ್ತಿದ್ವಿ ಆದರೆ ಈಗ ಸ್ಥಳೀಯರು ಒಬ್ಬರು ತುಂಬಾ ತೊಂದರೆ ಕೊಡುತ್ತಿದ್ದಾರೆ ಈ ಜಾಗವನ್ನ ಸರ್ಕಾರ ಗಮನಿಸಿ ಸಮಸ್ಯೆಯನ್ನು ಬಗೆಹರಿಸಬೇಕು ಅಂತ ಸರ್ಕಾರಕ್ಕೆ ಒತ್ತಾಯ ಮಾಡಿದರು.