ಸುದ್ದಿಮೂಲವಾರ್ತೆ
ಕೊಪ್ಪಳ,ಸೆ.12:ನಾನು ಲೋಕಸಭೆ ಚುನಾವಣೆಯ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿ ಎಂದು ಕುಷ್ಟಗಿ ಮಾಜಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿದರು.
ಅವರು ಇಂದು ಕೊಪ್ಪಳ ಜಿಲ್ಲೆಯ ಕುಷ್ಟಗಿಯ ನಿವಾಸದಲ್ಲಿ ಅಮರೇಗೌಡ ಪಾಟೀಲ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ರಾಜಕಾರಣ ಅಂದ್ಮೇಲೆ ಜಿದ್ದಾಜಿದ್ದಿ ಇದ್ದೇ ಇರುತ್ತದೆ. ಈ ಹಿಂದೆ ತಂದಿದ್ದ ಅನುದಾನ ತಂದಿದ್ದೆ. ಈಗಿನ ಶಾಸಕರು ಜಾಗ ಬೇರೆ ಕಡೆ ಇರೋದ್ರಿಂದ ಅಲ್ಲಿ ಮಾಡ್ತಿದ್ದಾರೆ ಲೋಕಸಭಾ ಚುನಾವಣೆಯ ಆಕಾಂಕ್ಷಿ ನಾನೂ ಒಬ್ಬಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಮೂರು ಬಾರಿ ಇಚ್ಛೆ ವ್ಯಕ್ತಪಡಿಸಿದ್ದೇನೆ ಎಂದರು.
2013 ರಲ್ಲಿ ಸೋತಾಗ ಲೋಕಸಭಾ ಸ್ಪರ್ಧಿಸಲು ಪ್ರಯತ್ನ ಮಾಡಿದ್ದೆ. 2019 ರಲ್ಲಿಯೂ ಸ್ಕ್ರೀನಿಂಗ್ ಕಮಿಟಿಯಲ್ಲಿ ಲೋಕಸಭೆ ಟಿಕೇಟ್ ಕೇಳಿದ್ದೆ. ಈ ಬಾರಿಯೂ ಆಕಾಂಕ್ಷಿಯಾಗಿದ್ದು ವರಿಷ್ಠರ ಗಮನಕ್ಕೆ ತಂದಿದ್ದೇನೆ. ಟಿಕೆಟ್ ಕೊಡೋಡು ಪಕ್ಷದ ಹೈಕಮಾಂಡ್ ಬಿಟ್ಟಿದ್ದು. ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಬದ್ದವಾಗಿರುವೆ. ಟಿಕೆಟ್ ಸಿಗಬಹುದು ಎಂಬ ಆಶಾಭಾವವಿದೆ ಎಂದರು.
ಶಾಸಕರು ಮುಖ್ಯಮಂತ್ರಿಗಳಿಗೆ, ಸಚಿವರಿಗೆ ಪತ್ರ ಬರೆಯೋದು ತಪ್ಪಲ್ಲ. ಅದನ್ನು ಮಾಧ್ಯಮಕ್ಕೆ ಕೊಡೋದು ತಪ್ಪು. ಬಿ.ಕೆ. ಹರಿಪ್ರಸಾದ್ ಅವರಿಗೆ ಎಲ್ಲೋ ನೋವಾಗಿರಬಹುದು.ಅವರ ಸಿಟ್ಟು ಶಮನ ಮಾಡುವ ಪ್ರಯತ್ನವನ್ನು ಪಕ್ಷದ ನಾಯಕರು ಮಾಡಿದ್ದಾರೆ ಎಂದು ಹೇಳಿದ್ದಾರೆ.