ಸುದ್ದಿಮೂಲ ವಾರ್ತೆ
ಕೊಪ್ಪಳ,ಅ.9: ಈ ಬಾರಿಯ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗುವ ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎಂದು ಗಂಗಾವತಿಯ ಬಸವರಾಜಸ್ವಾಮಿ ಮಳಿಮಠ ಹೇಳಿದರು.
ಅವರು ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಮಾತನಾಡಿ ನಾನು 2019 ರಲ್ಲಿ ನಾನು ಟಿಕೆಟ್ ಪ್ರಯತ್ನ ಮಾಡಿದ್ದೆ, ಆದರೆ ಆಗ ಪಕ್ಷ ಟಿಕೆಟ್ ನೀಡಲಿಲ್ಲ. ಈಗ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ನಾನು ಬಿಇ, ಎಲ್ ಎಲ್ ಬಿ ಓದಿದ್ದೇನೆ. ನಮ್ಮ ಕುಟುಂಬವು ಕಾಂಗ್ರೆಸ್ ಕುಟುಂಬವಾಗಿದೆ. ನಗರಸಭೆಯಿಂದ ನಮ್ಮ ತಂದೆ ಕೆಲಸ ಮಾಡಿದ್ದಾರೆ. ನಾನು ಈಗಲೂ ಸಹ ಕಾಂಗ್ರೆಸ್ ಪಕ್ಷದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ನಾನು ಸಾಕಷ್ಟು ಬಾರಿ ಪಕ್ಷದ ಗೆಲುವಿಗೆ ಶ್ರಮಿಸಿದ್ದೇನೆ.
ಈ ಹಿಂದೆ ವಿಧಾನಪರಿಷತ್ ಹಾಗು ವಿಧಾನಸಭೆ. ಲೋಕಸಭೆಗೂ ಟಿಕೆಟ್ ಕೇಳಿದ್ದೇನೆ. ಕಾಂಗ್ರೆಸ್ ಭವಿಷ್ಯವಿದೆ. ಗ್ಯಾರಂಟಿ ಯೋಜನೆಯಿಂದ ಜನರ ಕಾಂಗ್ರೆಸ್ ಆಗಿದೆ. ಕೊಪ್ಪಳ ಲೋಕಸಭೆಯ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಹೀಗಾಗಿ ಲೋಕಸಭೆಯಲ್ಲಿ ಕಾಂಗ್ರೆಸ್ಸಿಗೆ ಉತ್ತಮ ಬೆಂಬಲವಿದೆ ಎಂದರು.
ಈಗಾಗಲೇ ನಾನು ಕಾಂಗ್ರೆಸ್ ಹಿರಿಯ ಮುಖಂಡರನ್ನು ಭೇಟಿಯಾಗಿದ್ದೇನೆ. ಲೋಕಸಭೆ ಸದಸ್ಯರಾಗಲು ಭಾಷೆ ಹಾಗು ಜ್ಞಾನ ಬೇಕಿದೆ ಈ ನಿಟ್ಟಿನಲ್ಲಿ ನನಗೆ ಭಾಷೆ ಜ್ಞಾನವಿದೆ ಹೀಗಾಗಿ ಕೇಳುತ್ತಿದ್ದೇನೆ ಎಂದರು.
ಕೊಪ್ಪಳ ಲೋಕಸಭೆಯಿಂದ ಆಯ್ಕೆಯಾದವರು ಇಲ್ಲಿಯವರೆಗೂ ಕಡಿಮೆಯಾಗಿದೆ. ಪ್ರಸ್ತುತ ವಿದ್ಯಾಮಾನ ಸಮಗ್ರ ಚಿಂತನೆ ಮಾಡಬೇಕು. ಈ ನಿಟ್ಟಿನಲ್ಲಿ ನಾನು ಪ್ರಸ್ತುತ ವಿಷಯಗಳ ಕುರಿತ ಅರಿವು ಇದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗೈ ಪ್ರದಾನಕಾರ್ಯದರ್ಶಿ ಜಿ ಗವಿಸಿದ್ದಪ್ಪ, ರಾಮಪ್ಪ ನಿಲೋಗಲ್ ರಮೇಶ ಕುಲಕರ್ಣಿ ಇದ್ದರು.