ಸುದ್ದಿಮೂಲ ವಾರ್ತೆ ಬಳ್ಳಾರಿ, ಜ.03:
ಬಳ್ಳಾಾರಿ ನಗರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಿ ವಿಚಾರದಲ್ಲಿ ಬಹಿರಂಗ ಚರ್ಚೆಗೆ ನಾನು ಮತ್ತು ನಮ್ಮವರು ರೆಡಿ ಎಂದು ಮಾಜಿ ಶಾಸಕ ಜಿ. ಸೋಮಶೇಖರರೆಡ್ಡಿಿ ಅವರು ತಿಳಿಸಿದ್ದಾಾರೆ.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬುಡಾ ಮಾಜಿ ಅಧ್ಯಕ್ಷ, ಕಾಂಗ್ರೆೆಸ್ ಮುಖಂಡ ನಾರಾ ಪ್ರತಾಪರೆಡ್ಡಿಿ ಅವರು ಶುಕ್ರವಾರ ಹಾಕಿದ್ದ ಸವಾಲನ್ನು ಸ್ವೀಕರಿಸಿರುವ ಮಾಜಿ ಶಾಸಕ ಜಿ. ಸೋಮಶೇಖರರೆಡ್ಡಿಿ ಅವರು, ಕಾಂಗ್ರೆೆಸ್ನವರು ಲಕ್ಷ್ಮಿಿ ಮಿತ್ತಲ್ ಕೈಗಾರಿಕೆ ಸ್ಥಾಾಪನೆಗೆ ಪ್ರಯತ್ನಿಿಸಲಿ, ನಾವು ಎನ್ಎಂಡಿಸಿಗಾಗಿ ಹೋರಾಡುತ್ತೇವೆ. ಕೊಳಗಲ್ಲಿನಲ್ಲಿ ತಂದೆ -ತಾಯಿ ಹೆಸರಲ್ಲಿ ಕುಡಿಯುವ ನೀರಿನ ಕೆರೆ ಕಟ್ಟಿಿಸಲು ಪ್ರಯತ್ನಿಿಸಿದಾಗ ಆ ಕೆರೆಯಲ್ಲಿ ನೀರು ನಿಲ್ಲುವುದಿಲ್ಲ ಎಂದು ತಜ್ಞರು ಅಭಿಪ್ರಾಾಯ ನೀಡಿದ ಕಾರಣ ಪ್ರಸ್ತಾಾಪನೆಯನ್ನು ಕೈಬಿಡಲಾಯಿತು.
ನಮ್ಮ ‘ಗಾಲಿ’ ಮನೆತನದ ಬಗ್ಗೆೆ ಟೀಕಿಸಿ ‘ಗಾಳಿ’ ಇಲ್ಲದೇ ಯಾರೂ ಬದುಕಲು ಬರುವುದಿಲ್ಲ. ವಿವಾದದಲ್ಲಿ ನಮ್ಮ ಮನೆತನದ ಹೆಸರನ್ನು ತೆಗೆದುಕೊಂಡಿರುವುದು ಸರಿಯಲ್ಲ ಎಂದು ಟೀಕಿಸಿದರು.
ಈ ಸಂದರ್ಭದಲ್ಲಿ ಶ್ರೀನಿವಾಸ್ ಮೊತ್ಕರ್, ವೆಂಕಟರಮಣ, ದಿವಾಕರ್, ಪಿ. ಪಾಲಣ್ಣ ಇನ್ನಿಿತರರು ಈ ಸಂಧರ್ಭದಲ್ಲಿ ಉಪಸ್ಥಿಿತರಿದ್ದರು.

