ಸುದ್ದಿಮೂಲ ವಾರ್ತೆ ಹರಪನಹಳ್ಳಿ, ಜ.11:
ತಾಲ್ಲೂಕಿನ ಉಚ್ಚಂಗಿದುರ್ಗ ಗ್ರಾಾಮದ ಹಾಲಮ್ಮನ ತೋಪಿನಲ್ಲಿ ಜಗಳೂರು ವಿಧಾನಸಭಾ ಕ್ಷೇತ್ರದ 7 ಗ್ರಾಾಮ ಪಂಚಾಯಿತಿಯ ವ್ಯಾಾಪ್ತಿಿಯ ಬಿಜೆಪಿ ಕಾರ್ಯಕರ್ತರ ಸಂಘಟನಾ ಸಭೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ ಮುಂದಿನ ದಿನಗಳಲ್ಲಿ ಗ್ರಾಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳು ಬರುವುದರಿಂದ ಕಾರ್ಯಕರ್ತರು ಸನ್ನದ್ಧರಾಗಬೇಕು ಗ್ರಾಾಮ ಪಂಚಾಯಿತಿ ಮಟ್ಟದಲ್ಲಿ ಕಮಿಟಿ ಮಾಡಿ ಬಿಜೆಪಿ ಪಕ್ಷ ಸಂಘಟನೆ ಮಾಡಲಾಗುವುದು, ಕಾರ್ಯಕರ್ತರಲ್ಲಿ ಯಾವುದೇ ಗೊಂದಲ ಬೇಡ, ಜಗಳೂರು ಕ್ಷೇತ್ರದ ಬೆಜೆಪಿ ಅಭ್ಯರ್ಥಿ ನಾನೇ. ನಾನು ಅಧಿಕಾರದಲ್ಲಿ ಇರಲಿ, ಬಿಡಲಿ ನಿಮ್ಮ ಸೇವೆಗೆ ಸದಾ ನಾನು ನಿಮ್ಮ ಜೊತೆ ಇರುತ್ತೇನೆ, ಕೇಂದ್ರದಲ್ಲಿ ನಮ್ಮದೇ ಸರ್ಕಾರವಿದೆ, ಊರಿನ ಅಭಿವೃದ್ಧಿಿಗೆ ನನ್ನನ್ನು ನೀವು ಯಾವಾಗಲೂ ಕರೆದರೂ ಬರುತ್ತೇನೆ.16/01/2026 ರ ಶುಕ್ರವಾರ ದಂದು ನನ್ನ ಹುಟ್ಟುಹಬ್ಬದ ಕಾರ್ಯಕ್ರಮ ಇರುವುದರಿಂದ ತಾವೆಲ್ಲರೂ ದಾವಣಗೆರೆಗೆ ಆಗಮಿಸಬೇಕೆಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಜಗಳೂರು ನೂತನ ಮಂಡಲ ಉಪಾಧ್ಯಕ್ಷ ಪ್ರಶಾಂತ್ ಪಾಟೀಲ್ ಮಾತನಾಡಿ ಪಕ್ಷದ ನಿಷ್ಠಾಾವಂತ ಕಾರ್ಯಕರ್ತರ ಸಭೆ ಇಲ್ಲಿ ಕರೆಯಲಾಗಿದೆ, ನಿಷ್ಠಾಾವಂತ ಪಕ್ಷವಿದೆ ಎಂದರೆ ಅದು ಬಿಜೆಪಿ ಪಕ್ಷ, ಎಸ್.ವಿ.ರಾಮಚಂದ್ರಪ್ಪ ಸೋತ ನಂತರ ಏಳು ಗ್ರಾಾಮ ಪಂಚಾಯಿತಿ ಹಾಗೂ ಜಗಳೂರು ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿಿ ಕೆಲಸವಾಗಿಲ್ಲ, ಒಂದು ಕಾರ್ಯಕ್ರಮವಿಲ್ಲ ರಾಮಚಂದ್ರರು ಅಧಿಕಾರದಲ್ಲಿದ್ದಾಗ ಅಭಿವೃದ್ಧಿಿ ಕಾರ್ಯಗಳು ಮತ್ತು ಜೊತೆಗೆ ಜಾತ್ರೆೆ ಕಾರ್ಯಕ್ರಮಗಳು ತುಂಬಾ ಅದ್ದೂರಿಯಾಗಿ ನಡೆಯುತ್ತಿಿದ್ದವು.ನಮ್ಮ ಊರಿನ ಬಸ್ ನಿಲ್ದಾಾಣ ಕಟ್ಟಡ ಪೂರ್ಣ ಗೊಂಡರು ಸಹ ಇನ್ನೂ ಉದ್ಘಾಾಟನೆ ಆಗಿಲ್ಲ, ಮುಂದಿನ ಬಾರಿ ಎಸ್.ವಿ.ರಾಮಚಂದ್ರನವರು ಶಾಸಕರಾಗಿ ಗೆಲ್ಲುವುದು ಶತ ಸಿದ್ದ ಎಂದರು.
ಇದೇ ಸಂದರ್ಭದಲ್ಲಿ ಬಿಜೆಪಿ ಪಕ್ಷದ ನೂತನ ಜಗಳೂರು ಮಂಡಲ ಉಪಾಧ್ಯಕ್ಷರಾಗಿ ಪ್ರಶಾಂತ್ ಪಾಟೀಲ್, ಪ್ರಧಾನ ಕಾರ್ಯದರ್ಶಿ ಕಮ್ಮತ್ತಹಳ್ಳಿಿ ಮುರುಗೇಶ್, ಧರ್ಮನಾಯಕ್, ಪಿ.ಕೆಂಚನಗೌಡ, ಮಾಜಿ ಪ್ರಧಾನ ಕಾರ್ಯದರ್ಶಿ ಕೆ.ಎಂ.ತೌಡೂರು ಮಂಜುನಾಥಯ್ಯ, ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಯರಬಳ್ಳಿಿ ಡಿ.ಸಿದ್ದಪ್ಪ, ಪುಣಭಘಟ್ಟ ಬಸವನಗೌಡ್ರು, ಹೊಸಕೋಟೆ ನಿವೃತ್ತ ಶಿಕ್ಷಕರಾದ ಶರಣಪ್ಪ, ಜಾತಪ್ಪ, ರಾಮಚಂದ್ರಪ್ಪ, ಯಶೋಧರ್ ನಾಯ್ಕ್, ಕಾವಲಹಳ್ಳಿಿ ಭರಮಣ್ಣ, ಸಿದ್ದಣ್ಣ, ಣಿಯಾಪುರದ ಲಿಂಗರಾಜ್, ಕೆಂಚನಗೌಡ, ಜಾತಪ್ಪ, ರಾಜನಾಯ್ಕ್, ಯುವರಾಜ್, ಭರಮನಗೌಡ, ಮಲ್ಲಿಕಾರ್ಜುನ್, ಚಂದ್ರನಾಯ್ಕ್ ಹಾಗೂ ಏಳು ಪಂಚಾಯಿತಿಯ ಬಿಜೆಪಿ ಮುಖಂಡರು ಹಾಜರಿದ್ದರು.
ಜಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾನೇ – ಎಸ್.ವಿ.ರಾಮಚಂದ್ರ

