ಸುದ್ದಿಮೂಲ ವಾರ್ತೆ ರಾಯಚೂರು , ಡಿ.05:
ಯರಮರಸ್ ಗ್ರಾಾಮದ ಕೆಎಐಡಿಬಿ ಲೇಔಟ್ ಹತ್ತಿಿರ ಕಸಾಯಿಖಾನೆ ನಿರ್ಮಾಣ ಮಾಡಬಾರದು ಒಂದೊಮ್ಮೆೆ ಮಾಡಿದರೆ ಮಹಾನಗರ ಪಾಲಿಕೆ ಮುತ್ತಿಿಗೆ ಮತ್ತು ರಸ್ತೆೆ ತಡೆಯಂತ ಉಗ್ರ ಚಳವಳಿ ನಡೆಸುವುದಾಗಿ ಯರಮರಸ್ ಗ್ರಾಾಮದ ಮುಖಂಡರಾದ ಸುರೇಂದ್ರ ಬಾಬು, ಶಿವಕುಮಾರ್ ಪಾಟೀಲ, ಶಂಶಾಲಂ ಎಚ್ಚರಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ, ನಿನ್ನೆೆ ಸಹಾಯಕ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಈ ಬಗ್ಗೆೆ ಆಕ್ಷೇಪಿಸಿ ಮನವಿ ನೀಡಲಾಗಿದೆ. ಜನವಸತಿ ಪ್ರದೇಶದ ಬಳಿ ಕಸಾಯಿಖಾನೆ ನಿರ್ಮಾಣಕ್ಕೆೆ ಮುಂದಾಗಿರುವುದು ಸರಿಯಲ್ಲಘಿ. ಈ ಬಗ್ಗೆೆ ಈಗಾಗಲೆ ದೂರು ಸಲ್ಲಿಸಿ ಕೆಎಐಡಿಬಿ ಹತ್ತಿಿರ ಸ್ಥಳ ಆಯ್ಕೆೆ ನಿರ್ಧಾರವೇ ತಪ್ಪು. ಇಲ್ಲಿ ಪರಿಸರ ಹಾಳು ಮಾಡುವ ಉದ್ದೇಶದಿಂದ ಈ ರೀತಿ ಮಾಡಲಾಗುತ್ತದೆ.
ಕಸಾಯಿಖಾನೆ ನಿರ್ಮಾಣಕ್ಕೆೆ ಆಯ್ಕೆೆ ಮಾಡಿದ ಸ್ಥಳದ ಹತ್ತಿಿರದಲ್ಲಿ ವೌಲಾನ ಅಬುಲ್ ಕಲಾಂ ಆಜಾದ್ ಶಾಲೆ ವಸತಿ ಶಾಲೆಗಳಿವೆ ಬಸವೇಶ್ವರ, ಕಾಳಿಕಾಂಬ ದೇವಸ್ಥಾಾನಗಳಿವೆ.ನ್ಯಾಾಯಾಧೀಶರ ವಸತಿಗಾಗಿ ಸಮೀಕ್ಷೆ ಇಲ್ಲಿಯೇ ಸ್ಥಳ ಆಯ್ಕೆೆ ಮಾಡಲಾಗಿದೆ. ವಿಮಾನ ನಿಲ್ದಾಾಣ ನಿರ್ಮಿಸಲಾಗುತ್ತಿಿದೆ. ಇಷ್ಟೆೆಲ್ಲ ಯೋಜನೆಗಳ ಮಧ್ಯೆೆ ಕಸಾಯಿಖಾನೆ ಇಲ್ಲಿ ನಿರ್ಮಾಣ ಎಷ್ಟು ಸರಿ ಎಂಬುದರ ಬಗ್ಗೆೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತರಲಾಗುತ್ತದೆ. ಈಗಾಗಲೇ ರಾಜ್ಯ ಸಣ್ಣ ನೀರಾವರಿ ಸಚಿವ ಎನ್ ಎಸ್ ಬೋಸರಾಜು ಅವರ ಗಮನಕ್ಕೆೆ ತರಲಾಗಿದೆ. ಕಸಾಯಿಖಾನೆ ಸ್ಥಳಾಂತರ ಭರವಸೆ ನೀಡಿದ್ದಾಾರೆ. ಆದರೆ, ಅಧಿಕಾರಿಗಳು ಅಲ್ಲಿಯೇ ಸ್ಥಾಾಪನೆ ಮಾಡುವ ಇಂಗಿತ ಆಸಕ್ತಿಿ ತೋರಿಸುತ್ತಿಿದ್ದಾಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸೋಮವಾರ ಅಥವಾ ಮಂಗಳವಾರ ಮಹಾನಗರ ಪಾಲಿಕೆ ರಸ್ತೆೆ ತಡೆ ಚಳವಳಿ ರೂಪಿಸಲಾಗುವುದು ಎಂದು ಎಚ್ಚರಿಸಿದರು.ಬೀದಿ ಹೋರಾಟದೊಂದಿಗೆ ನ್ಯಾಾಯಾಲಯದಲ್ಲಿ ದಾವೆ ಹೂಡಿ ತಡೆಯಾಜ್ಞೆಯೂ ತರುವ ಪ್ರಯತ್ನ ನಡೆದಿದೆ. ಯಾವುದೇ ಕಾರಣಕ್ಕೆೆ ಕಸಾಯಿ ಖಾನೆ ಸ್ಥಾಾಪಿಸಲು ಬಿಡುವುದಿಲ್ಲ ಎಂದರು.
ಸುದ್ದಿಗೋಷ್ಠಿಿಯಲ್ಲಿ ಗ್ರಾಾಮದ ಮುಖಂಡರಾದ ಈರಪ್ಪಗೌಡ, ರವಿಕುಮಾರ, ವೆಂಕಣ್ಣ, ಸಂತೋಷ್ ಪಾಟೀಲ್, ಪ್ರಕಾಶ, ಅಂಬಾಜಿ ಇದ್ದರು.
ಯರಮರಸ್ ಬಳಿ ಕಸಾಯಿ ಖಾನೆ ನಿರ್ಮಿಸಿದರೆ ಪಾಲಿಕೆಗೆ ಮುತ್ತಿಗೆಯ ಎಚ್ಚರಿಕೆ

