ಸುದ್ದಿಮೂಲ ವಾರ್ತೆ ಬೆಂಗಳೂರು, ಜ.29:
ರಾಜ್ಯದ ಯಾವುದೇ ಕಾರ್ಖಾನೆಗಳು ತ್ಯಾಾಜ್ಯ ನೀರುಗಳನ್ನು ನದಿ, ಹಳ್ಳಗಳಿಗೆ ಬಿಡದಂತೆ ನಿರ್ಬಂಧ ಹೇರಲಾಗಿದೆ. ಇದನ್ನು ಉಲ್ಲಂಘಿಸುವ ಕಾರ್ಖಾನೆಗಳ ವಿರುದ್ಧ ಜಲ ಕಾಯ್ದೆೆಯಡಿ ಕ್ರಮ ಕೈಗೊಳ್ಳಲಾಗುತ್ತಿಿದೆ ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆೆ ಹೇಳಿದರು.
ವಿಧಾನಸಭೆಯ ಪ್ರಶ್ನೋೋತ್ತರ ಅವಧಿಯಲ್ಲಿ ಬಿಜೆಪಿಯ ಹರೀಶ್ ಅವರು ವಿಜಯನಗರ ಜಿಲ್ಲೆಯ ಹರಪನಹಳ್ಳಿಿ ತಾಲ್ಲೂಕು ದುಗ್ಗಾಾವತಿ ಗ್ರಾಾಮದ ವ್ಯಾಾಪ್ತಿಿಯಲ್ಲಿ ಶಾಮನೂರು ಶುಗರ್ಸ್ ಲಿ. ಮತ್ತು ಇಂಡಿಯನ್ ಕೇನ್ ಪವರ್ ಲಿ. ಕಾರ್ಖಾನೆಗಳು ಕೊಳಚೆ ನೀರನ್ನು ಹಳ್ಳಗಳಿಗೆ ಬಿಟ್ಟು ಅದು ತುಂಗಭದ್ರಾಾ ನದಿ ಸೇರುವ ಹಾಗೆ ಮಾಡಿದ್ದಾರೆ. ಈ ಬಗ್ಗೆೆ ಸರ್ಕಾರ ಕ್ರಮ ಕೈಗೊಂಡಿಲ್ಲ. ಸದನದಲ್ಲಿ ನೀಡಿರುವ ಉತ್ತರವೂ ತಪ್ಪಾಾಗಿದೆ ಎಂದು ಹೇಳಿದಾಗ, ಸಚಿವ ಈಶ್ವರಖಂಡ್ರೆೆ ಅವರು, ಉತ್ತರ ತಪ್ಪುು ನೀಡಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಕಾರ್ಖಾನಗಳು ತ್ಯಾಾಜ್ಯ ನೀರನ್ನು ನದಿ ಹಾಗೂ ಹಳ್ಳಗಳಿಗೆ ಬಿಡಬಾರದು ಎಂದು ನಿರ್ಬಂಧ ವಿಧಿಸಲಾಗಿದೆ. ಇದರ ವಿರುದ್ಧ ಸೂಕ್ತ ಕೈಗೊಳ್ಳುತ್ತೇವೆ ಎಂದರು.
ಶಾಮನೂರು ಶುಗರ್ ಲಿ., ಇಂಡಿಯನ್ ಕೇನ್ ಪವರ್ ಲಿ. ಕಾರ್ಖಾನೆಗಳಿಗೆ ಮಾಲಿನ್ಯ ಉಂಟಾಗುತ್ತಿಿರುವ ಕುರಿತು ಕಳೆದ ಎರಡು ವರ್ಷಗಳ ಅವಧಿಯಲ್ಲಿ ಯಾವುದೇ ಲಿಖಿತ ದೂರು ಬಂದಿಲ್ಲ. ಇದೇ ಜನವರಿ 26 ರಂದು ವಿಜಯನಗರ ಪ್ರಾಾದೇಶಿಕ ಅಧಿಕಾರಿಯ ಶಾಮನೂರು ಶುರ್ಗ ಲಿ. ಇಂಡಿಯನ್ ಕೇನ್ ಪವರ್ ಘಟಕಗಳನ್ನು ಪರಿವೀಕ್ಷಿಸಿದ್ದು, ಪರಿವೀಕ್ಷಣೆ ಸಂದರ್ಭದಲ್ಲಿ ಶಾಮನೂರು ಶುಗರ್ ಲಿ. ಘಟಕವು ಕಾರ್ಯನಿರ್ವಹಿಸುತ್ತಿಿಲ್ಲ ಎಂದು ಹೇಳಿದ್ದಾರೆ. ಇಂಡಿಯನ್ ಕೇನ್ ಲಿ. ಕಾರ್ಯನಿರ್ವಹಿಸುತ್ತಿಿದ್ದು, ತ್ಯಾಾಜ್ಯ ನೀರನ್ನು ಹದ್ದಿನಗಿಡಗ ಹಳ್ಳಕ್ಕೆೆ ವಿಸರ್ಜಿಸದ್ದು ಕಂಡು ಬಂದಿದೆ. ತ್ಯಾಾಜ್ಯ ನೀರಿನ ಮಾದರಿಯನ್ನು ಸಂಗ್ರಹಿಸಿ ಮಂಡಳಿಯ ಪ್ರಯೋಗ ವಿಶ್ಲೇಷಣೆಗೆ ಸಲ್ಲಿಸಲಾಗಿದೆ. ವರದಿ ಬಂದ ನಂತರ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು.
ಕಾರ್ಖಾನೆ ತ್ಯಾಜ್ಯ ನೀರು ನದಿ, ಹಳ್ಳಗಳಿಗೆ ಬಿಟ್ಟರೆ ಕ್ರಮ: ಖಂಡ್ರೆ

