ಸುದ್ದಿಮೂಲ ವಾರ್ತೆ ಬೆಂಗಳೂರು, ಅ.19:
ಕಾಂಗ್ರೆೆಸ್ ಸರ್ಕಾರಕ್ಕೆೆ ಬಿಜೆಪಿ ವಿರುದ್ಧ ಸಿಟ್ಟಿಿದ್ದರೆ, ಆ ಸಿಟ್ಟನ್ನು ಬಿಜೆಪಿಯ ಮೇಲೆಯೇ ತೀರಿಸಿಕೊಳ್ಳಲಿ. ಆದರೆ ರಾಷ್ಟ್ರಭಕ್ತಿಿಯಿಂದ ಕೆಲಸ ಮಾಡುತ್ತಿಿರುವ ಆರ್ಎಸ್ಎಸ್ ವಿರುದ್ಧ ಕ್ರಮ ಕೈಗೊಳ್ಳಬೇಕಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರಭಕ್ತಿಿಯಿಂದ ಕೆಲಸ ಮಾಡುತ್ತಿಿರುವ ಆರ್ಎಸ್ಎಸ್ ವಿರುದ್ಧ ಸರ್ಕಾರ ಅನಗತ್ಯ ದ್ವೇಷ ಸಾಧಿಸುತ್ತಿಿದೆ ಎಂದು ಆರೋಪಿಸಿದರು.
ಕಾಂಗ್ರೆೆಸ್ ಸರ್ಕಾರ ಪಾಕಿಸ್ತಾಾನಕ್ಕೆೆ ಜೈ ಹಾಕುವವರನ್ನು ಬೆಂಬಲಿಸುತ್ತದೆ. ಭಾರತ್ ಮಾತಾ ಕೀ ಜೈ ಎನ್ನುವವರನ್ನು ವಿರೋಧಿಸುತ್ತದೆ. ವಿಧಾನಸೌಧದಲ್ಲಿ ಪಾಕಿಸ್ತಾಾನಕ್ಕೆೆ ಜೈಕಾರ ಹಾಕಿದ್ದು ಸಾಬೀತಾಗಿದೆ. ಆಗ ಅವರು ಹಾಗೆ ಹೇಳಿಯೇ ಇಲ್ಲ ಎಂದು ಸಚಿವರು ಹೇಳಿದ್ದರು. ಕುಕ್ಕರ್ ಬಾಂಬ್ ಬ್ಲಾಾಸ್ಟ್ ಮಾಡುವವರನ್ನು ಬ್ರದರ್ ಎಂದಿದ್ದರು. ಎಲ್ಲವೂ ಸಾಬೀತಾದರೂ ಅವರನ್ನೇ ಕಾಂಗ್ರೆೆಸ್ ನಾಯಕರು ಬೆಂಬಲಿಸುತ್ತಾಾರೆ ಎಂದರು.
ಬೆಂಗಳೂರಿನ ಮಾರುಕಟ್ಟೆೆಯಲ್ಲಿ ಪ್ರತಿ ಶುಕ್ರವಾರ ನಮಾಜ್ ಮಾಡಿ ರಸ್ತೆೆ ಬಂದ್ ಮಾಡುತ್ತಾಾರೆ. ಬಿಜೆಪಿ ಸರ್ಕಾರವಿದ್ದಾಗ ಅದನ್ನು ಎಂದೂ ನಿಷೇಧಿಸಿರಲಿಲ್ಲ. ಆದರೆ ಆರ್ಎಸ್ಎಸ್ ಪಥ ಸಂಚಲನ ಮಾಡಲು ಹೊರಟರೆ ಅದಕ್ಕೆೆ ಅವಕಾಶ ನೀಡಲ್ಲ. ಆರ್ಎಸ್ಎಸ್ ಅನುಮತಿ ಪಡೆದೇ ಪಥ ಸಂಚಲನ ಮಾಡುತ್ತಿಿದೆ. ಎಲ್ಲ ಬಿಜೆಪಿ ನಾಯಕರ ಮಕ್ಕಳು ಆರ್ಎಸ್ಎಸ್ಗೆ ಖಂಡಿತ ಹೋಗುತ್ತಾಾರೆ. ಹಾಗಾದರೆ ಕಾಂಗ್ರೆೆಸ್ ನಾಯಕರ ಮಕ್ಕಳು ಯಾವುದಾದರೂ ಹೋರಾಟಕ್ಕೆೆ ಹೋಗಿದ್ದಾರಾ? ಯಾವ ದಲಿತ ಸಂಘಟನೆಯ ಹೋರಾಟಗಳಲ್ಲಿ ನಾಯಕರ ಮಕ್ಕಳು ಭಾಗವಹಿಸಿದ್ದಾರೆ? ಎಂದು ಪ್ರಶ್ನಿಿಸಿದರು.
ಆರ್ಎಸ್ಎಸ್ ವಿರುದ್ಧ ಕೈಗೊಳ್ಳುವ ಕ್ರಮಗಳು ಮುಂದೆ ಕಾಂಗ್ರೆೆಸ್ಗೆ ತಿರುಗುಬಾಣವಾಗಲಿದೆ. ಪಥ ಸಂಚಲನದ ಅನುಮತಿಗೆ ಸಂಬಂಧಿಸಿದಂತೆ ಕೋರ್ಟ್ ಸರ್ಕಾರಕ್ಕೆೆ ಛೀಮಾರಿ ಹಾಕಿದೆ. ಯಾವುದೇ ಸಂಘಟನೆಗಳ ಕಾರ್ಯಕ್ರಮಕ್ಕೆೆ ನಾವು ಎಂದೂ ಕಡಿವಾಣ ಹಾಕಿಲ್ಲ. ಅದೇ ರೀತಿ ಕಾಂಗ್ರೆೆಸ್ ಕೂಡ ನಡೆದುಕೊಳ್ಳಬೇಕು. ಆರ್ಎಸ್ಎಸ್ನ ಕಾರ್ಯಗಳೇನು ಎಂಬುದನ್ನು ಇವರು ಮೊದಲು ತಿಳಿದುಕೊಳ್ಳಬೇಕು ಎಂದರು.
ಪ್ರತಿ ವರ್ಷ ಬಿಜೆಪಿ ಸರ್ಕಾರ ಬಿಬಿಎಂಪಿಗೆ 7-8 ಸಾವಿರ ರೂ. ನೀಡಿದೆ. ಇದೇ ಅನುದಾನದಲ್ಲಿ ಈಗಲೂ ರಸ್ತೆೆ ದುರಸ್ತಿಿ ಮಾಡಲಾಗುತ್ತಿಿದೆ. ಈಗಿನ ಸರ್ಕಾರದಲ್ಲಿ ಒಂದೇ ಒಂದು ಯೋಜನೆ ನಡೆದಿಲ್ಲ. ಸರ್ಕಾರ ಭಿಕ್ಷೆ ಬೇಡುವ ಪರಿಸ್ಥಿಿತಿ ಬಂದಿದೆ. ಹಿಂದಿನ ಕಾಂಗ್ರೆೆಸ್ ಮಾಡಿದ್ದ 15,000 ಕೋಟಿ ರೂ. ಸಾಲವನ್ನು ಬಿಜೆಪಿ ಸರ್ಕಾರ ತೀರಿಸಿದೆ. ಈ ಬಗ್ಗೆೆಯೂ ಸಿಎಂ ಸಿದ್ದರಾಮಯ್ಯ ಉತ್ತರಿಸಲಿ. ಗುತ್ತಿಿಗೆದಾರರಿಗೆ 33 ಸಾವಿರ ಕೋಟಿ ರೂ. ನೀಡಬೇಕಿದ್ದು, ಅಷ್ಟೊೊಂದು ಹಣ ಕೊಡಬೇಕೆಂದರೂ ಖಜಾನೆಯಲ್ಲಿ ಹಣವೇ ಇಲ್ಲ ಎಂದರು.
ಸುಧಾಮೂರ್ತಿ ಅವರನ್ನು ಸಿಎಂ ಸಿದ್ದರಾಮಯ್ಯ ಬೃಹಸ್ಪತಿಗಳಾ ಎಂದು ಕೇಳುತ್ತಾಾರೆ. ಇಷ್ಟ ಇದ್ದರೆ ಮಾತ್ರ ಮಾಹಿತಿ ನೀಡಿ ಎಂದು ಹೈಕೋರ್ಟ್ ಹೇಳಿದೆ. ಆದರೂ ಅವರನ್ನು ಟೀಕಿಸುವುದು ನ್ಯಾಾಯಾಂಗ ನಿಂದನೆಯಾಗಿದೆ. ಇನ್ಫೋೋಸಿಸ್ನಿಂದಲೇ ಹೆಚ್ಚು ಆದಾಯ ಬರುತ್ತಿಿದೆ. ಅವರೂ ಆಂಧ್ರಕ್ಕೆೆ ಹೋದರೆ ಸರ್ಕಾರದ ಗತಿ ಏನು? ಸಿಎಂ ಸಿದ್ದರಾಮಯ್ಯ ಯಾವ ರೀತಿಯ ಬೃಹಸ್ಪತಿ? ಎಂದು ಪ್ರಶ್ನಿಿಸಿದರು.