ಸುದ್ದಿಮೂಲ ವಾರ್ತೆ ಬೆಂಗಳೂರು, ನ.27:
ಉಪ ಮುಖ್ಯಮಂತ್ರಿಿ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಿಯಾಗಲು ಕಾಂಗ್ರೆೆಸ್ ಪಕ್ಷ ಹೈಕಮಾಂಡ್ ಅವಕಾಶ ಮಾಡಿಕೊಡಬೇಕು ಎಂದು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಎಲ್. ಶ್ರೀನಿವಾಸ್ ಆಗ್ರಹಿಸಿದರು.
ಸುದ್ದಿಗೋಷ್ಠಿಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆೆಸ್ ಪಕ್ಷವನ್ನು ಅಧಿಕಾರಕ್ಕೆೆ ತರಲು ಶಿವಕುಮಾರ್ ಅವರು ಹಗಲಿರುಳು ಶ್ರಮಿಸಿದ್ದಾರೆ. ಕಾಂಗ್ರೆೆಸ್ ಪಕ್ಷ ಅಧಿಕಾರಕ್ಕೆೆ ಬರಲು ಅವರ ಶ್ರಮ ಸಾಕಷ್ಟು ಇದೆ. ಅದನ್ನು ಪರಿಗಣಿಸಬೇಕು. ಪಕ್ಷಕ್ಕಾಾಗಿ ಅವರು ಮಾಡಿರುವ ಕೆಲಸಕ್ಕೆೆ ಕೂಲಿ ಕೊಡಬೇಕು ಎಂದು ಅವರು ಒತ್ತಾಾಯಿಸಿದರು.
ಕಾಂಗ್ರೆೆಸ್ ಪಕ್ಷದ ನಿಷ್ಠಾಾವಂತರು, ಪಕ್ಷದ ಕಟ್ಟಾಾಳು ಶಿವಕುಮಾರ್ ಅವರಿಗೆ ಯಾವುದೇ ಕಾರಣಕ್ಕೂ ಅನ್ಯಾಾಯವಾಗಬಾರದು. ಒಂದು ವೇಳೆ ಅವರೇ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಿ ಸ್ಥಾಾನ ಸಿಗದಿದ್ದರೆ, ನಮ್ಮ ಸಮುದಾಯದ ಸ್ವಾಾಮೀಜಿಗಳ ಮಾರ್ಗದರ್ಶನದಲ್ಲಿ ಹೋರಾಟ ಮಾಡುತ್ತೇವೆ ಎಂದರು.
ನಮ್ಮ ಸಮುದಾಯದಲ್ಲಿ ಸದ್ಯಕ್ಕೆೆ ಮುಖ್ಯಮಂತ್ರಿಿ ಪ್ರಬಲ ಆಕಾಂಕ್ಷಿಯಾಗಿ ಶಿವಕುಮಾರ್ ಮುಂಚೂಣಿಯಲ್ಲಿದ್ದಾರೆ. ಬೇರೆಯವರ ಪ್ರಸ್ತಾಾಪ ಬಂದಾಗ ಅದರ ಬಗ್ಗೆೆ ಪ್ರತಿಕ್ರಿಿಯಿಸುತ್ತೇವೆ ಪ್ರತಿಕ್ರಿಿಸುತ್ತೇವೆ ಎಂದರು.
ಶಿವಕುಮಾರ್ ಅವರು ವಿಧಾನಸಭೆ ಚುನಾವಣೆ ಕೇಳಿದಂತೆ ನಾಡಿನ ಜನರು ಅವರಿಗೆ ಪೆನ್ನು ಪೇಪರ್ ಕೊಟ್ಟಿಿದ್ದಾರೆ. ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರು ಈ ಹಿಂದೆ ಐದು ವರ್ಷ ಮುಖ್ಯಮಂತ್ರಿಿ ಆಗಿದ್ದರು ಈಗ ಎರಡೂವರೆ ವರ್ಷ ಮುಖ್ಯಮಂತ್ರಿಿಯಾಗಿ ಒಳ್ಳೆೆಯ ಕೆಲಸ ಮಾಡಿದ್ದಾರೆ. ಶಿವಕುರ್ಮಾ ಅವರಿಗೆ ಮುಖ್ಯಮಂತ್ರಿಿ ಸ್ಥಾಾನ ಕೊಡುತ್ತಾಾರೋ ಇಲ್ಲವೋ ಎಂಬ ಅನುಮಾನ ಶುರುವಾಗಿದೆ. ಹಾಗಾಗಿ ಈ ಆಗ್ರಹ ಮಾಡುತ್ತಿಿದ್ದೇವೆ ಎಂದರು.
ಸಂಘದ ಮಾಜಿ ಅಧ್ಯಕ್ಷ ಬಿ.ಕೆಂಚಪ್ಪಗೌಡರು ಮಾತನಾಡಿದರು, ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಜಿ. ಗಂಗಾಧರ್ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಟಿ. ಕೋನಪ ರೆಡ್ಡಿಿ ಅವರು ಮಾತನಾಡಿದರು.
ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ. ರೇಣುಕಾ ಪ್ರಸಾದ್, ಎಂ ಪುಟ್ಟಸ್ವಾಾಮಿ, ಸಹಾಯಕ ಕಾರ್ಯದರ್ಶಿ ಡಾ. ಡಿ. ಕೆ.ರಮೇಶ್, ಖಜಾಂಚಿ ಕೆ.ವಿ.ಶ್ರೀಧರ್, ನಿರ್ದೇಶಕರಾದ ವೆಂಕಟರಾಮೇಗೌಡ, ಹನುಮಂತರಾಯಪ್ಪ, ಬಿ.ಪಿ.ಮಂಜೇಗೌಡ, ಜೆ ರಾಜು, ಲೋಕೇಶ್, ಮತ್ತಿಿತರರು ಉಪಸ್ಥಿಿತರಿದ್ದರು.
ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟುಕೊಡದಿದ್ದರೇ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಡಿಕೆಶಿಗೆ ಸಿಎಂ ಪಟ್ಟ ನೀಡದಿದ್ದರೇ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ: ಒಕ್ಕಲಿಗರ ಸಂಘ

