ಸುದ್ದಿಮೂಲ ವಾರ್ತೆ ರಾಯಚೂರು, ನ.30:
ಹಿಂದುಳಿದ ವರ್ಗಗಳ ನಾಯಕ ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನ ಹೈಕಮಾಂಡ್ ಮಾಡಿದರೆ ಜಿಲ್ಲೆೆಯಲ್ಲಿ ತೀವ್ರ ಹೋರಾಟ ಮಾಡುವ ನಿರ್ಧಾರ ಮಾಡಬೇಕಾಗುತ್ತದೆ ಎಂದು ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಹನುಮಂತಪ್ಪ ಯಾದವ ಎಚ್ಚರಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆೆಸ್ ಪಕ್ಷ ಬಹುಮತದಿಂದ ಅಧಿಕಾರಕ್ಕೆೆ ಬರಲು ಸಿದ್ದರಾಮಯ್ಯನವರೇ ಕಾರಣ ವಾಗಿದ್ದಾರೆ. ಯಾವುದೇ ಆರೋಪಗಳಿಲ್ಲದಿದ್ದರೂ ಮುಖ್ಯಮಂತ್ರಿಿ ಬದಲಾವಣೆಗೆ ಒತ್ತಾಾಯಗಳು, ಚಟುವಟಿಕೆ ಆರಂಭವಾಗಿದ್ದು ಖಂಡನೀಯ ಎಂದರು.
ಕಾಂಗ್ರೆೆಸ್ ಪಕ್ಷ ಸಿದ್ದರಾಮಯ್ಯನವರನ್ನು ಕೆಳಗಿಳಿಸಿದರೆ ಬಿಹಾರದಲ್ಲಿ ಆಗಿರುವ ಸ್ಥಿಿತಿಯೇ ರಾಜ್ಯದಲ್ಲಿ ಎದುರಿಸಬೇಕಾಗುತ್ತದೆ. ರಾಜ್ಯದಲ್ಲಿ ಒಕ್ಕಲಿಗ ಸಮಾಜದ ಮಠಾಧೀಶರು ಸೇರಿದಂತೆ ಇನ್ನಿಿತರರು ಮುಖ್ಯಮಂತ್ರಿಿಗಳನ್ನು ಕೆಳಗಿಸಲು ಧಮ್ಕಿಿ ಹಾಕುತ್ತಿಿದ್ದಾರೆ ಈ ಘಟನೆ ಖಂಡನೀಯ ಬಹುಸಂಖ್ಯಾಾತ ಹಿಂದುಳಿದ ಸಮುದಾಯದ ಜನರ ಭಾವನೆಗಳಿಗೆ ಧಕ್ಕೆೆ ಆಗುವ ರೀತಿಯಲ್ಲಿ ಹೈಕಮಾಂಡ್ ನಡೆದುಕೊಳ್ಳಬಾರದು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ದೊಡ್ಡ ಖಾಜನಗೌಡ ಏಗನೂರು, ಎಂ.ನಾರಾಯಣ, ವೇಣುಗೋಪಾಲ, ಮಹಾದೇವಪ್ಪ, ಜಂಬಣ್ಣ, ಈರಮ್ಮ ಉಪಸ್ಥಿಿತರಿದ್ದರು.

