ಸುದ್ದಿಮೂಲ ವಾರ್ತೆ ಕವಿತಾಳ, ನ.27:
ಪಟ್ಟಣದಲ್ಲಿ ಸಂವಿಧಾನ ದಿನಾಚರಣೆ ಮಾಡಲಾಯಿತು.
ಇಲ್ಲಿನ ಪಟ್ಟಣ ಪಂಚಾಯತಿಯಲ್ಲಿ ಸಂವಿಧಾನ ದಿನಾಚರಣೆ ಅಂಗವಾಗಿ ಬುಧವಾರ ಹಮ್ಮಿಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖಂಡ ಕಿರಿಲಿಂಗಪ್ಪ ಅವರು ಅಂಬೇಡ್ಕರ ಅವರ ಭಾವಚಿತ್ರ ಮತ್ತು ಪೀಠಿಕೆಗೆ ಮಾಲಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಂವಿಧಾನ ಮೂಲಕ ಕಾನೂನು ಜಾರಿಯಾಗಿರುವುದರಿಂದ ನಾವು ನೀವೆಲ್ಲರೂ ಬದುಕಲು ಸಾಧ್ಯವಾಗುತ್ತಿಿದೆ ಸಂವಿಧಾನ ಉಳಿಸುವ ಕೆಲಸವಾಗಬೇಕು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಕೆಲಸ ಆಗಬೇಕು ಎಂದರು.
ಪಟ್ಟಣ ಪಂಚಾಯತಿ ಮುಖ್ಯಾಾಧಿಕಾರಿ ಜಸ್ಪಾಲ್ ಸಿಂಗ್ ಅವರು ಕಾರ್ಯಕ್ರಮ ಕುರಿತು ಮಾತನಾಡಿದರು.
ರಾಘವೇಂದ್ರ ಮುತಾಲಿಕ್ ಅವರು ಪೀಠಿಕೆ ಬೋಧಿಸಿದರು.
ಈ ಸಂದರ್ಭದಲ್ಲಿ ಪ್ರಾಾಥಮಿಕ ಕೃಷಿ ಪತ್ತಿಿನ ಸಹಕಾರ ಸಂಘದ ಅಧ್ಯಕ್ಷ ಯಮನಪ್ಪ ದಿನ್ನಿಿ, ಪಟ್ಟಣ ಪಂಚಾಯತಿ ಸದಸ್ಯರಾದ ಯಲ್ಲಪ್ಪ ಮಾಡಗಿರಿ, ಅಮರೇಶ ಕಟ್ಟಿಿಮನಿ, ಮುಖಂಡರಾದ ಕರಿಯಪ್ಪ ಅಡ್ಡೆೆದ್, ಮೌನೇಶ ದಿನ್ನಿಿ, ಚಾಂದಪಾಶ, ಅಲ್ಲಮಪ್ರಭು, ಮೌನೇಶ ಕಟ್ಟಿಿಮನಿ, ಸಿಬ್ಬಂದಿ ಪ್ರಶಾಂತಕುಮಾರ, ಮಹೇಶ, ರಾಮಲಿಂಗಪ್ಪ, ರಂಗಸ್ವಾಾಮಿ, ವೆಂಕಟೇಶ, ರಾಮು ಇನ್ನಿಿತರರು ಇದ್ದರು.
‘ಸಂವಿಧಾನ ಉಳಿದರೆ ನಾವು – ನೀವು ಬದುಕಲು ಸಾಧ್ಯ’

