ಸುದ್ದಿಮೂಲ ವಾರ್ತೆ ಕವಿತಾಳ, ಜ.19:
ಬಳ್ಳಾಾರಿ ಯಲ್ಲಿ ಮಹರ್ಷಿ ವಾಲ್ಮೀಕಿ ಮೂರ್ತಿ ಪ್ರತಿಷ್ಠಾಾಪನೆ ವಿಳಂಬವಾ ದಲ್ಲಿ ಹೋರಾಟ ಮಾಡಲಾಗು ತ್ತದೆ ಎಂದು ಅಖಿಲ ಕರ್ನಾಟಕ ಮಹರ್ಷಿ ವಾಲ್ಮೀಕಿ ಮಹಾಸಭಾದ ರಾಯಚೂರು ಜಿಲ್ಲಾ ಉಪಾಧ್ಯಕ್ಷ ಭೀಮಣ್ಣ ನಾಯಕ ಕಾಚಾಪುರು ಆಗ್ರಹಿಸಿದರು.
ಪಟ್ಟಣದಲ್ಲಿ ಸೋಮವಾರ ಸುದ್ದಿಗೊಷ್ಟಿಿಯಲ್ಲಿ ಮಾತನಾಡಿದ ಅವರು ಬಳ್ಳಾಾರಿಯಲ್ಲಿ ಮಹರ್ಷಿ ವಾಲ್ಮೀಕಿ ಮೂರ್ತಿಯ ಅನಾವರಣ ಕಾರ್ಯಕ್ರಮದ ಬ್ಯಾಾನರ್ ಕಟ್ಟುವ ಬಗ್ಗೆೆ ಉಂಟಾದ ಗೊಂದಲದಿಂದ ಪ್ರತಿಷ್ಠಾಾಪನೆ ವಿಳಂಬವಾಗುತ್ತಿಿದೆ. ಆಡಳಿತ ಪಕ್ಷದ ಮುಖಂಡರು ಈ ಬಗ್ಗೆೆ ಮಾತನಾಡುತ್ತಿಿಲ್ಲ,
ಸಮಾಜದ ಹೆಸರಿನಲ್ಲಿ ಹಲವಾರು ಸಂಘಟನೆಗಳನ್ನು ಕಟ್ಟಿಿ ಸಮಾಜದ ಸವಲತ್ತುಗಳನ್ನು ತೆಗೆದುಕೊಂಡು, ಈಗ ಇಂತ ಸಮಯದಲ್ಲಿ ಮೌನವಾಗಿರುದು ಸರಿಯಲ್ಲ, ಮೂರ್ತಿ ಪ್ರತಿಷ್ಠಾಾಪನೆಗೆ ಮುಂದಾಗಬೇಕು. 2026 ೆಬ್ರವರಿ 8 ರಿಂದ 9 ರವರಿಗೆ ರಾಜನಹಳ್ಳಿಿಯಲ್ಲಿ ನಡೆಯುವ ವಾಲ್ಮೀಕಿ ಜಾತ್ರೆೆಗೆ ಮುನ್ನ ಮೂರ್ತಿ ಸ್ಥಾಾಪನೆಗೆ ಎಲ್ಲಾ ಪಕ್ಷದ ಮುಖಂಡರು, ಸಮಾಜದ ಹೋರಾಟಗಾರರು, ಮುಖಂಡರು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಯಂಕನಗೌಡ ಮಲ್ಲದಗುಡ್ಡ, ಬಸವರಾಜ ನಾಯಕ ಮಲ್ಲದಗುಡ್ಡ, ಚನ್ನಪ್ಪ ನಾಯಕ ಸೈದಾಪುರು ಇದ್ದರು.

