ಸುದ್ದಿಮೂಲ ವಾರ್ತೆ ಬೆಂಗಳೂರು, ೆ.16:
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಾಪುರ ಜಿಲ್ಲೆಯ ಭಾಗ್ಯನಗರ (ಬಾಗೇಪಲ್ಲಿ) ಕ್ಷೇತ್ರದಿಂದ ಆಯ್ಕೆೆ ಆಗಿರುವ ಕಾಂಗ್ರೆೆಸ್ ಶಾಸಕ ಎಸ್.ಎನ್.ಸುಬ್ಬಾಾರೆಡ್ಡಿಿ ಆಯ್ಕೆೆಯನ್ನು ಅಸಿಂಧುಗೊಳಿಸಿ ಹೈಕೋರ್ಟ್ ಆದೇಶಿದೆ.
ಸುಬ್ಬಾಾರೆಡ್ಡಿಿ ಆಯ್ಕೆೆಯನ್ನು ಅಸಿಂಧು ಎಂದು ಘೋಷಣೆ ಮಾಡಬೇಕು ಎಂದು ಬಿಜೆಪಿಯ ಪರಾಜಿತ ಅಭ್ಯರ್ಥಿ ಸಿ. ಮುನಿರಾಜು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಾಯಮೂರ್ತಿ ಎಂಜಿಎಸ್ ಕಮಲ್ ಅವರಿದ್ದ ನ್ಯಾಾಯಪೀಠ ಈ ಆದೇಶ ನೀಡಿದೆ.
ಅಲ್ಲದೇ, ಮುನಿರಾಜು ಅವರನ್ನು ಜಯಶಾಲಿಯನ್ನಾಾಗಿ ಘೋಷಣೆ ಮಾಡಲು ನಿರಾಕರಿಸಿದ್ದು, ಪ್ರಕರಣವನ್ನು ಮತ್ತೆೆ ಚುನಾವಣಾ ಆಯೋಗ ಮತ್ತು ವಿಧಾನಸಭೆ ಕಾರ್ಯದರ್ಶಿಗೆ ರವಾನಿಸಲು ಆದೇಶಿಸಿದೆ.
ಸುಪ್ರೀೀಂ ಕೋರ್ಟ್ನಲ್ಲಿ ಸುಬ್ಬಾಾರೆಡ್ಡಿಿ ತೀರ್ಪು ಪ್ರಶ್ನಿಿಸಿ ತಡೆಯಾಜ್ಞೆ ತರದಿದ್ದರೆ ಚುನಾವಣಾ ಆಯೋಗ 6 ತಿಂಗಳಲ್ಲಿ ಚುನಾವಣೆ ನಡೆಸುವ ಸಾಧ್ಯತೆ ಇದೆ.
ಆದೇಶ ಪ್ರಕಟವಾಗುತ್ತಿಿದ್ದಂತೆ ಸುಬ್ಬಾಾರೆಡ್ಡಿಿ ಪರ ವಕೀಲರು, ಅರ್ಜಿಯ ಸಂಬಂಧ ಸುಪ್ರೀೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಕೆ ಮಾಡುವವರೆಗೂ ತಡೆಯಾಜ್ಞೆ ನೀಡಲು ಮನವಿ ಮಾಡಿದರು. ಇದಕ್ಕೆೆ ಅರ್ಜಿದಾರರ ಪರ ವಕೀಲರು ಆಕ್ಷೇಪಿಸಿದರು. ಹೀಗಾಗಿ ಮನವಿಯನ್ನು ನ್ಯಾಾಯಪೀಠ ತಿರಸ್ಕಿಿರಿಸಿತು. ಇದೀಗ ಸುಬ್ಬಾಾರೆಡ್ಡಿಿ ಸುಪ್ರೀೀಂ ಕೋರ್ಟ್ಗೆ ಅರ್ಜಿ ಸಲ್ಲಿಸಬೇಕಾಗಿದೆ. ಆದೇಶದ ವಿಸ್ತೃತ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಾಗಿದೆ.
ಏನಿದು ಪ್ರಕರಣ: 2023ರ ವಿಧಾನಸಭಾ ಚುನಾವಣೆಯಲ್ಲಿ ಸುಬ್ಬಾಾರೆಡ್ಡಿಿ ವಿರುದ್ಧ ಸ್ಪರ್ಧಿಸಿದ್ದ ಸಿ.ಮುನಿರಾಜು ಪರಾಜಿತಗೊಂಡಿದ್ದರು. ಬಾಗೇಪಲ್ಲಿ ಶಾಸಕರಾಗಿ ಆಯ್ಕೆೆಯಾಗಿದ್ದ ಸುಬ್ಬಾಾರೆಡ್ಡಿಿ ಅವರು ಚುನಾವಣೆಗೆ ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ ಆಸ್ತಿಿಗಳನ್ನು ಘೋಷಣೆ ಮಾಡದೇ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಸಿ. ಮುನಿರಾಜು ಆರೋಪಿಸಿದ್ದರು.
ಇದು ಸಹ ಚುನಾವಣಾ ಅಕ್ರಮದ ಅಡಿಯಲ್ಲಿ ಬರಲಿದೆ. ಆದ್ದರಿಂದ ಸುಬ್ಬಾಾರೆಡ್ಡಿಿ ಆಯ್ಕೆೆ ರದ್ದುಮಾಡಬೇಕು, ಎರಡನೇ ಅತಿ ಹೆಚ್ಚು ಮತ ಗಳಿಸಿದ ತಮ್ಮನ್ನು ಜಯಶೀಲರನ್ನಾಾಗಿ ಘೋಷಣೆ ಮಾಡಬೇಕು ಎಂದು ಹೈಕೋರ್ಟ್ಗೆ ಮುನಿರಾಜು ಅರ್ಜಿ ಸಲ್ಲಿಸಿದ್ದರು.
ಸುಳ್ಳು ಆರೋಪವನ್ನು ಸತ್ಯ ಮಾಡುವ ದುರುದ್ದೇಶದಿಂದ ನಕಲಿ ದಾಖಲೆಗಳನ್ನು ಸೃಷ್ಟಿಿಸಿದ್ದಾರೆ ಎಂದು ಆರೋಪಿಸಿ ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾಾರೆಡ್ಡಿಿ ಅವರು ಸಿ.ಮುನಿರಾಜು ವಿರುದ್ಧ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಕಳೆದ ವರ್ಷ ಕ್ರಿಿಮಿನಲ್ ಪ್ರಕರಣ ದಾಖಲಿಸಿದ್ದರು.
ವಿದೇಶದಲ್ಲಿ ಅಕ್ರಮವಾಗಿ ಆಸ್ತಿಿ ಸಂಪಾದನೆ, ಹಣ ವರ್ಗಾವಣೆ ಸಂಬಂಧಿಸಿದಂತೆ ಸುಳ್ಳು ದಾಖಲೆಗಳನ್ನು ಸೃಷ್ಠಿಿಸಲಾಗಿದೆ. ನನ್ನ ಸ್ನೇಹಿತನಿಗೆ ಸಿ.ಮುನಿರಾಜು ಅವರ ವಾಟ್ಸ್ಆ್ಯಪ್ ನಂಬರ್ನಿಂದ ದಾಖಲೆಗಳು ಬಂದಿದ್ದು, ಕಾನೂನು ಕ್ರಮ ತೆಗೆದುಕೊಳ್ಳಬೇಕು. ಈ ಮೂಲಕ ಕ್ಷೇತ್ರದಲ್ಲಿ ನನ್ನ ಜನಪ್ರಿಿಯತೆಯನ್ನು ಕುಗ್ಗಿಿಸುವ ಮತ್ತು ಕಳಂಕ ತರುವ ಒಳಸಂಚು ನಡೆಸಿರುವುದಾಗಿ ದೂರಿನಲ್ಲಿ ಸುಬ್ಬಾಾರೆಡ್ಡಿಿ ದೂರಿದ್ದರು.
ಸುಪ್ರೀಂನಲ್ಲಿ ಆದೇಶ ಪ್ರಶ್ನಿಸದಿದ್ದರೆ 6 ತಿಂಗಳಲ್ಲಿ ಚುನಾವಣೆ ಕಾಂಗ್ರೆಸ್ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಆಯ್ಕೆ ಅಸಿಂಧುಗೊಳಿಸಿದ ಹೈಕೋರ್ಟ್

