ಹೊಸಪೇಟೆ : ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ವಿಜಯನಗರ ಕ್ಷೇತ್ರದಿಂದ ಕುರುಬ ಸಮಾಜದಿಂದ ೪ ಜನ ಆಕಾಂಕ್ಷಿಗಳಿದ್ದು, ಅವರಲ್ಲಿ ಒಬ್ಬರಿಗಾದರೂ ಟಿಕೆಟ್ ನೀಡಿದರೆ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ಇಲ್ಲವಾದರೆ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಕುರಿ ಶಿವಮೂರ್ತಿ ಹೇಳಿದರು.
ನಗರದ ಜಿಲ್ಲಾ ಕುರುಬರ ಸಂಘದ ಕಚೇರಿಯಲ್ಲಿ ಹಮ್ಮಿ ಕೊಂಡಿದ್ದ ಕುರುಬರ ಶೈಕ್ಷಣಿಕ, ಸಾಮಾಜಿಕ ಹಾಗು ರಾಜ ಕೀಯ ಕುರಿತ ಜಿಲ್ಲಾ ಮಟ್ಟದ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ಕುರುಬ ಸಮಾಜದಿಂದ ವಿಜಯನಗರ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ನಾನು, ರಾಜ ಶೇಖರ ಹಿಟ್ನಾಳ್, ಸಿದ್ದನಗೌಡ, ಕೆ.ಎಸ್.ಎಲ್.ಸ್ವಾಮಿ ಸೇರಿ ೪ ಜನ ಆಕಾಂಕ್ಷಿಗಳು ಟಿಕೆಟ್ಗಾಗಿ ರ್ಜಿ ಸಲ್ಲಿಸಿ ದ್ದೇವೆ. ಅವರಲ್ಲಿ ಒಬ್ಬರಿಗಾದರೂ ಟಿಕೆಟ್ ನೀಡಿದರೆ ಎಲ್ಲ ರೂ ಸೇರಿ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ಇಲ್ಲವಾದರೆ ಸಮಾಜದ ತಾಲೂಕುವಾರು, ಜಿಲ್ಲಾವಾರು ಸಮಾವೇಶ ಮಾಡಿ ಅಂತಿಮ ತರ್ಮಾನ ಕೈಗೊಂಡು ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಲು ಹಿಂಜರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
೧೯೮೩ ರಲ್ಲಿ ಶಂಕರಗೌಡರು, ೧೯೯೮ ರಲ್ಲಿ ಈ.ಟಿ.ಶಂಬು ನಾಥ ಅವರಿಗೆ ಬಿಟ್ಟರೆ ಇಲ್ಲಿಯವರೆಗೂ ಕುರುಬ ಸಮಾ ಜಕ್ಕೆ ಟಿಕೆಟ್ ನೀಡಿಲ್ಲ.ಶೇ.೮೦ರಷ್ಟು ಕುರುಬ ಸಮುದಾಯ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾ ಬಂದಿದೆ. ಆದರೆ ನಮ್ಮನ್ನು ಓಟು ಬ್ಯಾಂಕಾಗಿ ಪಕ್ಷ ಬಳಸಿಕೊಳ್ಳುತ್ತಿದೆ. ಕೇವ ಲ ಬೆರಳಿಣಿಕೆ ಜನಸಂಖ್ಯೆ ಇರುವ ಸಮುದಾಯಗಳಿಗೆ ಉನ್ನತ ಸ್ಥಾನಮಾನ,ಪಕ್ಷದ ಟಿಕೆಟ್ ನೀಡಿ ಕುರುಬ ಸಮಾ ಜಕ್ಕೆ ದ್ರೋಹ ಬಗೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ದರು.
ಮುಖಂಡ ರಾಜಶೇಖರಹಿಟ್ನಾಳ್ ಮಾತನಾಡಿ, ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ೪.೭೫ ಲಕ್ಷ ಜನಸಂಖ್ಯೆ ಇರುವ ಕುರು ಬ ಸಮುದಾಯಕ್ಕೆ ಒಂದೇ ಒಂದು ಟಿಕೆಟ್ ನೀಡದೇ ಅ ನ್ಯಾಯ ಮಾಡಲಾಗುತ್ತಿದೆ. ೧೦ ಕ್ಷೇತ್ರದಲ್ಲೂ ಕುರುಬರು ನರ್ಣಾಯಕರಾಗಿದ್ದಾರೆ. ಈಗಲಾದರೂ ಹೈಕಮಾಂಡ್ ಸೂಕ್ತ ನರ್ಧಾರ ಕೈಗೊಂಡು ಕುರುಬರಿಗೆ ವಿಜಯನಗರ ಕ್ಷೇತ್ರದಲ್ಲಿ ಟಿಕೆಟ್ ನೀಡಲೇಬೇಕು ಎಂದು ಒತ್ತಾಯಿಸಿ ದರು.
ಹ.ಬೊ.ಹಳ್ಳಿ ತಾಲೂಕು ಕುರುಬರ ಸಂಘದ ಅಧ್ಯಕ್ಷ ಬುಡ್ಡಿ ಬಸವರಾಜ ಮಾತನಾಡಿ, ಸಣ್ಣ ಸಣ್ಣ ಸಮುದಾಯ ಕ್ಕೆ ಸಿಗುವ ಆದ್ಯತೆ ದೊಡ್ಡ ಸಮಾಜ ಕುರುಬ ಸಮಾಜಕ್ಕೆ ಏಕಿಲ್ಲ ? ನಾವು ಬರೀ ಪಲ್ಲಕ್ಕಿ ಹೋರಲು ಇದ್ದೇವಾ ? ಎಂದು ಪ್ರಶ್ನಿಸಿದ ಅವರು, ೧೦ ವಿಧಾನಸಭಾ ಕ್ಷೇತ್ರಗಳಲ್ಲಿ ಒಬ್ಬರಿಗೂ ಟಿಕೆಟ್ ನೀಡದೇ ಇದ್ದಲ್ಲಿ ಕಾಂಗ್ರೆಸ್ ಸೋಲಿ ಸಲು ಪಣ ತೊಡುತ್ತೇವೆ. ಹಾಲುಮತ ಸಮಾಜಕ್ಕೆ ರಾಜ ಕೀಯ ಪಕ್ಷಗಳ ಅಗತ್ಯವಿಲ್ಲ. ಆದರೆ ರಾಜಕೀಯ ಪಕ್ಷಗಳಿ ಗೆ ಹಾಲುಮತ ಸಮಾಜದ ಅವಶ್ಯಕತೆ ಎಂಬುದನ್ನು ಮರೆ ಯಬಾರದು ಎಂದರು.
ಸಂಘದ ಅಧ್ಯಕ್ಷ ಅಯ್ಯಾಳಿ ತಿಮ್ಮಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜ ಅಂತ ಬಂದಾಗ ರಾಜಕೀಯ ಬದಿ ಗಿಟ್ಟು, ಸಮಾಜಕ್ಕಾಗಿ ಧ್ವನಿ ಎತ್ತೋಣ. ಸಮಾಜಕ್ಕೆ ಯಾ ರೇ ಟಿಕೆಟ್ ನೀಡಲಿ ಒಮ್ಮತದಿಂದ ಕೆಲಸ ಮಾಡೋಣ ಎಂದರು.
ಈ ಸಂರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಅಯ್ಯಾಳಿ ಮರ್ತಿ, ಖಜಾಂಚಿ ಆರ್,ಕೊಟ್ರೇಶ, ಮುಖಂಡರಾದ ರಾಮಚಂದ್ರಗೌಡ, ಎಚ್.ಮಹೇಶ, ಮಾವಿನಹಳ್ಳಿ ವೀರೇಶ, ಪಲ್ಲೇದ ಸಿದ್ದೇಶ, ಗೋಪಾಲಕೃಷ್ಣ, ಬಿಸಾಟಿ ತಾಯಪ್ಪ, ಕೆ.ಎಂ.ಪರಮೇಶ, ದಲ್ಲಾಲಿ ಕುಬೇರ, ರಾಯಪ್ಪ, ಮಲಿಯಪ್ಪ, ಹನುಮಂತಪ್ಪ, ಹಡಗಲಿಯ ವೆಂಕಟೇಶ, ಚೇತನ, ಹರಪನಹಳ್ಳಿಯ ಆನಂದ, ಕೂಡ್ಲಿಗಿಯ ಬಿ.ಬಸವರಾಜ, ಲಕ್ಕಜ್ಜ, ಮಲ್ಲಿಕರ್ಜುನ, ಕೊಟ್ಟೂರಿನ ಕರ್ತಿಕ, ನಿಜಗುಣ ಸೇರಿದಂತೆ ಇತರರು ಇದ್ದರು.