ಸುದ್ದಿಮೂಲವಾರ್ತೆ
ಕೊಪ್ಪಳ ಜು 24: ಕೊಪ್ಪಳ ಜಿಲ್ಲೆಯ ಹಿರೇಹಳ್ಳ ಯೋಜನೆಯಲ್ಲಿ ಪುನವರ್ಸತಿ ಯೋಜನೆಯಲ್ಲಿ ಭ್ರಷ್ಟಾಚಾರವಾಗಿದೆ. ಈ ಕುರಿತು ಗುತ್ತಿಗೆದಾರ ಹಾಗು ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಇಲ್ಲಿದಿದ್ದರೆ ಲೋಕಾಯುಕ್ತರಿಗೆ ದೂರು ನೀಡಿ ಪ್ರತಿಭಟನೆ ಮಾಡಲಾಗುವುದು ಎಂದು ಟಿ ರತ್ನಾಕರ ಹೇಳಿದರು.
ಅವರು ಇಂದು ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಮಾತನಾಡಿ 2011 ರಲ್ಲಿ ಹಿರೇಹಳ್ಳದಲ್ಲಿ ಮುಳಗಡೆಯಾಗಿರುವ ವೀರಾಪುರ, ಶಿರೂರು ಹಾಗು ಮುತ್ತಾಳದಲ್ಲಿ ಕಾಮಗಾರಿ ನಡೆಸಲಾಗಿದೆ. ಆದರೆ ಇಲ್ಲಿ ತೀರಾ ಕಳಪೆಯಾಗಿದೆ. ಕಳಪೆ ಕಾಮಗಾರಿ ಮಾಡಿರುವ ವಿಜಯಪುರ ಎಸ್ ಎಸ್ ಪಾಟೀಲ ಹಾಗ ಅಪ್ಪಾಜಿಗೌಡ ಹೊಸಮನಿ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಹಿಂದೆ ನೂರಾರು ಕೋಟಿಯ ಕಾಮಗಾರಿ ಮಾಡಲಾಗಿದೆ. ಈ ಮೂರು ಗ್ರಾಮದಲ್ಲಿ ಈಗ ನೋಡಲು ಒಂದು ಕೆಲಸವು ಕಾಣುವುದಿಲ್ಲ. ಈಗ 60 ಕೋಟಿ ರೂಪಾಯಿ ಕಾಮಗಾರಿ ನಡೆಸಲಾಗುತ್ತಿದೆ. ಇಲ್ಲಿಯೂ ತೀರಾ ಕಳಪೆಯಾಗಿದೆ. ಈ ಕಾಮಗಾರಿಗಳ ಸಮಗ್ರ ತನಿಖೆಯಾಗಬೇಕೆಂದು ಆಗ್ರಹಿಸಿದರು.
ಕುಕನೂರು ತಾಲೂಕಿನ ಮೂರು ಗ್ರಾಮಗಳು ಪುನರ್ವಸತಿ ಕಲ್ಪಿಸಲು ಆಗಿಲ್ಲ. ಈ ಬಗ್ಗೆ ನೀರಾವರಿ ಇಲಾಖೆ ಕ್ರಮಕ್ಕಾಗಿ ಆಗ್ರಹ ಹೋರಾಟ ಮಾಡುವುದಾಗಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಅವರೊಂದಿಗೆ ಯಮನೂರಪ್ಪ ಗೋರ್ಲೆಕೊಪ್ಪ. ಪರಸುರಾಮ, ಈಶಪ್ಪ ಹರಿಜನ ಇದ್ದರು.