ಸುದ್ದಿಮೂಲ ವಾರ್ತೆ ಬಳ್ಳಾರಿ, ಜ.05:
ಬಳ್ಳಾರಿ ನಗರದ ಸಿರುಗುಪ್ಪ ರಸ್ತೆೆಯ ಶಾಸಕ ಜಿ. ಜನಾರ್ಧನ ರೆಡ್ಡಿಿ ಅವರ ಮನೆಯ ಮುಂದೆ ಜ.01 ರಂದು ಬ್ಯಾಾನರ್ ಹರಿದ ವಿಚಾರವಾಗಿ ನಡೆದ ಗಲಾಟೆಯ ಕುರಿತು ‘ರೆಕಾರ್ಡ್ ಮಾಡಿರುವ’ ದೃಶ್ಯಾಾವಳಿಗಳಿದ್ದಲ್ಲಿ ಸಾರ್ವಜನಿಕರು ಬ್ರೂಸ್ಪೇಟೆ ಪೊಲೀಸ್ ಠಾಣೆಗೆ ಮಾಹಿತಿಯಾಗಿ ನೀಡಬಹುದಾಗಿದೆ.
ಜನವರಿ 01 ರಂದು ರಾತ್ರಿಿ 09 ಗಂಟೆಯಿಂದ 9.20 ಗಂಟೆಯ ಮಧ್ಯದ ಅವಧಿಯಲ್ಲಿ ಸಿರುಗುಪ್ಪ ರಸ್ತೆೆಯ ಅವಂಭಾವಿಯ ಜನಾರ್ಧನ ರೆಡ್ಡಿಿ ಅವರ ಮನೆಯ ಮುಂದೆ ಹಾಗೂ ಸಾರ್ವಜನಿಕರ ರಸ್ತೆೆಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ರಾಜಶೇಖರ್ ರೆಡ್ಡಿಿಯ ಹತ್ಯೆೆಯಾಗಿದೆ.
ಈ ಹತ್ಯೆೆಗೆ ಸಂಬಂಧಿಸಿದಂತೆ ಬ್ರೂಸ್ಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಸಂಖ್ಯೆೆ 01/2026 ಕಲಂ 103(1), 54, 352, 351(2) ಆಧಾರ 190 ಬಿ.ಎನ್.ಎಸ್-2023 ಹಾಗೂ ಕಲಂ 27 ಆರ್ಮ್ಸ್ ಆ್ಯಕ್ಟ್-1959 ರಡಿ ಪ್ರಕರಣ ದಾಖಲಾಗಿದೆ.
ಹಾಗಾಗಿ ಸಾರ್ವಜನಿಕರು ತಮ್ಮ ಮೊಬೈಲ್ ಹಾಗೂ ಇತರೆ ಎಲೆಕ್ಟ್ರಾಾನಿಕ್ ಸಾಧನಗಳಲ್ಲಿ ರೆಕಾಡಿರ್ಂಗ್ ಮಾಡಿದ್ದ ದೃಶ್ಯಾಾವಳಿಗಳಿದ್ದಲ್ಲಿ ಬ್ರೂಸ್ ಪೇಟೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆೆಕ್ಟರ್ ವ್ಯಾಾಟ್ಸಆ್ಯಪ್ ಸಂಖ್ಯೆೆ 9480803045 ನಂಬರ್ಗೆ ಕಳಿಸಬಹುದಾಗಿದೆ ಅಥವಾ ಖುದ್ದಾಾಗಿ ಠಾಣೆಗೆ ಹಾಜರಾಗಿ ಮಾಹಿತಿ ನೀಡಬಹುದಾಗಿದೆ.

