ಸುದ್ದಿಮೂಲ ವಾರ್ತೆ ಬೆಂಗಳೂರು, ಅ.09:
ಅಂತರಜಲ ಅಭಿವೃದ್ಧಿಿಗಾಗಿ ಎಷ್ಟೇ ಹಣ ಖರ್ಚಾದರೂ ಹಿಂಜರಿಯದೆ ಕಾಮಗಾರಿ ಕೈಗೆತ್ತಿಿಕೊಳ್ಳುವುದರ ಜೊತೆಗೆ ಜಲ ಜಾಗೃತಿ ಮೂಡಿಸುವಂತೆ ಮುಖ್ಯಮಂತ್ರಿಿ ಸಿದ್ದರಾಮಯ್ಯ ಸಲಹೆ ಮಾಡಿದರು.
ಸಣ್ಣ ನೀರಾವರಿ ಇಲಾಖೆ ಬ್ಯಾಾಂಕ್ವೆೆಟ್ ಹಾಲ್ನಲ್ಲಿ ಆಯೋಜಿಸಿದ್ದ ನೀರಿದ್ದರೆ ನಾಳೆ ಎಂಬ ವಿನೂತನ ಕಾರ್ಯಕ್ರಮಕ್ಕೆೆ ಚಾಲನೆ ನೀಡಿ ಮಾತನಾಡಿದ ಅವರು, ಅಂತರ್ಜಲ ಅಭಿವೃದ್ಧಿಿ ಮತ್ತು ನೀರಿನ ಸದ್ಬಳಕೆ ಅತಿ ಮುಖ್ಯವಾಗಿದ್ದು ಈ ದಿಸೆಯಲ್ಲಿ ನೀರಿದ್ದರೆ ನಾಳೆ ಎಂಬ ಈ ವಿನೂತನ ಕಾರ್ಯ ಕೈಗೆತ್ತಿಿಕೊಂಡ ಎನ್.ಎಸ್.ಬೋಸರಾಜು ಬಗ್ಗೆೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಅಂತರ್ಜಲ ಅಭಿವೃದ್ಧಿಿಗೆ ಚೆಕ್ ಡ್ಯಾಾಂ, ಕೃಷಿ ಹೊಂಡ, ಬದು ನಿರ್ಮಾಣ, ಕೆರೆಗಳ ಭರ್ತಿಯಂತ ಯೋಜನೆಗಳನ್ನು ಕೈಗೆತ್ತಿಿಕೊಳ್ಳಿಿ ಅದಕ್ಕೆೆ ಎಷ್ಟೇ ಅನುದಾನ ಖರ್ಚಾದರೂ ನೀಡುತ್ತೇನೆ ಎಂದು ಅಭಯ ನೀಡಿದರು. ಜಲ ಜಾಗೃತಿ ಅತಿ ಮುಖ್ಯವಾಗಿದ್ದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಈ ರೀತಿಯ ಜಾಗೃತಿ ಕಾರ್ಯಕ್ರಮ ಹಮ್ಮಿಿಕೊಂಡು ಇಲಾಖೆ ವತಿಯಿಂದ ಬಿಡುಗಡೆ ಮಾಡಿದ ಪುಸ್ತಕವನ್ನು ರಾಜ್ಯದ ಎಲ್ಲ ಜಿಲ್ಲೆಗಳ ಜನರಿಗೆ ಹಂಚುವಂತೆ ಸೂಚನೆ ನೀಡಿದರು.
ಜಲಮೂಲಗಳ ಒತ್ತುವರಿ ಬಗ್ಗೆೆ ಬೇಸರ ವ್ಯಕ್ತಪಡಿಸಿದ ಅವರು, ಕೆರೆ ಒತ್ತುವರಿ ಮಾಡಿಕೊಂಡಿದ್ದರೆ ಸ್ವಯಂ ಪ್ರೇೇರಣೆಯಿಂದ ಬಿಟ್ಟುಬಿಡಬೇಕು. ಇಲ್ಲವಾದರೆ ಅತಿಕ್ರಮ ಮಾಡಿಕೊಂಡಿರುವವರ ಮೇಲೆ ಮುಲಾಜಿಲ್ಲದೆ ಬಿಡಿಸಿ ಎಂದು ಸಚಿವ ಎನ್.ಎಸ್.ಬೋಸರಾಜು ಅವರಿಗೆ ಸಿಎಂ ಸೂಚನೆ ನೀಡಿದರು.
ನಮ್ಮ ಸರ್ಕಾರ ಅಂತರ್ಜಲ ವೃದ್ಧಿಿಗೆ ಸಾವಿರಾರು ಕೋಟಿ ಖರ್ಚು ಮಾಡುತ್ತಿಿದೆ,ಕೆರೆಗಳಿಗೆ ನೀರು ತುಂಬಿಸುವುದರಲ್ಲಿ ಏಷ್ಯಾಾದಲ್ಲೇ ಉತ್ತಮ ಕಾರ್ಯ ನಮ್ಮ ರಾಜ್ಯದಲ್ಲಿ ಆಗುತ್ತಿಿದೆ ನಾಗರಿಕತೆ ಬೆಳೆದದ್ದು-ಉಳಿದಿರುವುದು ನೀರಿನಿಂದಲೇ. ಜನರಲ್ಲಿ ನೀರಿನ ಬಳಕೆ, ನೀರಿನ ಮೌಲ್ಯ ಮತ್ತು ಅಂತರ್ಜಲ ವೃದ್ಧಿಿ ಬಗ್ಗೆೆ ಸಚಿವ ಬೋಸರಾಜು ಅವರು ಇಲಾಖಾ ವತಿಯಿಂದ ಉತ್ತಮ ಕಾರ್ಯಕ್ರಮಗಳನ್ನು ರೂಪಿಸುತ್ತಿಿದ್ದಾರೆ. ಇದು ಆರೋಗ್ಯಕರ ಸಂಗತಿ. ಜನರಿಗೆ ನೀರಿನ ಅಗತ್ಯ ಮತ್ತು ನೀರಿನ ಸ್ಥಿಿತಿ ಗತಿ ಬಗ್ಗೆೆ ಸಾರ್ವಜನಿಕರಿಗೆ ಮನವರಿಕೆ ಮಾಡಿಸಬೇಕು ಎಂದು ಕರೆ ನೀಡಿದರು.
ರಾಜ್ಯದಲ್ಲಿ 37 ಲಕ್ಷ ಬೋರ್ವೆಲ್ಗಳ ಮೂಲಕ ಅಂತರಜಲ ಬಳಕೆ ಆಗುತ್ತಿಿದೆ. ದಾಖಲೆಗಳಲ್ಲಿ ಇಲ್ಲದ ಲಕ್ಷಾಂತರ ಅನಧಿಕೃತ ಬೋರ್ವೆಲ್ ಗಳೂ ಇವೆ. ರಾಷ್ಟ್ರೀಯ ಸರಾಸರಿಗಿಂತ ಶೇ8 ರಷ್ಟು ಹೆಚ್ಚಿಿನ ಬಳಕೆ ಆಗುತ್ತಿಿದೆ ಎನ್ನುವ ವರದಿಗಳಿವೆ ಎಂದು ವಿವರಿಸಿದ ಅವರು, 144 ತಾಲ್ಲೂಕುಗಳನ್ನು ಹೊರತು ಪಡಿಸಿ ಉಳಿದ ತಾಲ್ಲೂಕುಗಳಲ್ಲಿ ನೀರಿನ , ಅಂತರ್ಜಲದ ಪ್ರಮಾಣ ಕೊರತೆ ಇದೆ. ಈ ಕಾರಣಕ್ಕೇ ಕೋಲಾರ ಮತ್ತು ಚಿಕ್ಕಬಳ್ಳಾಾಪುರದ ಕೆರೆಗಳನ್ನು ತುಂಬಿಸುವ ಕೆ.ಸಿ.ವ್ಯಾಾಲ್ಯೂ ಯೋಜನೆ ಜಾರಿ ಮಾಡಲಾಯ್ತು. ಇದರಿಂದ ಈಗ ಅಂತರಜಲ ವೃದ್ಧಿಿಯಾಗಿದೆ ಎಂದರು.
ಉಪ ಮುಖ್ಯಮಂತ್ರಿಿ ಡಿ.ಕೆ.ಶಿವಕುಮಾರ್ ಮಾತನಾಡಿ, ಕೃಷ್ಣ , ಕಾವೇರಿ ನಮ್ಮ ರಾಜ್ಯದ ಜೀವ ನದಿಗಳು, ಆದರೆ ನಮ್ಮ ಹಕ್ಕಿಿನ ನೀರು ಬಳಸಿಕೊಳ್ಳಲು ತಮಿಳುನಾಡು ಮತ್ತು ಮಹಾರಾಷ್ಟ್ರ ಅನಗತ್ಯ ತಗಾದೆ ತೆಗೆಯುತ್ತಿಿವೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಚಿಕ್ಕಬಳ್ಳಾಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಾಮಾಂತರ ಜಿಲ್ಲೆಯಲ್ಲಿ ಕುಸಿದ ಅಂತರ್ಜಲವನ್ನು ವೃದ್ಧಿಿ ಮಾಡುವಲ್ಲಿ ಸಣ್ಣ ನೀರಾವರಿ ಇಲಾಖೆ ಕೈಗೊಂಡಿರುವ ಕಾರ್ಯಕ್ರಮಗಳು ಅತ್ಯಂತ ಶ್ಲಾಾಘನೀಯವಾಗಿವೆ ಎಂದರು.
ನೀರಿನ ಬಳಕೆ ಅಮೂಲ್ಯವಾದುದು. ಈ ದಿಸೆಯಲ್ಲಿ ಬಹಳ ದಿನಗಳಿಂದ ನನೆಗುದಿಗೆ ಬಿದ್ದಿರುವ ಕೃಷ್ಣ ಮೇಲ್ದಂಡೆ ಯೋಜನೆ ಮೂರನೇ ಹಂತದ ಕಾಮಗಾರಿಗೆ ಚಾಲನೆ ನೀಡಲು ಭೂಸ್ವಾಾಧೀನಕ್ಕಾಾಗಿ 78 ಸಾವಿರ ಕೋಟಿ ರೂ. ನೀಡಲು ನಿರ್ಧಾರ ಮಾಡಲಾಗಿದೆ ಎಂದರು.
ಅಲಮಟ್ಟಿಿ ವಿಷಯದಲ್ಲಿ ಮಹಾರಾಷ್ಟ್ರ ತಗಾದೆ ತೆಗೆದರು ಕರ್ನಾಟಕದಿಂದ ಜಯಗಳಿಸಿ ಕೇಂದ್ರದಲ್ಲಿ ಸಚಿವರಾಗಿವವರು ಮತ್ತು ಬಿಜೆಪಿ ಸಂಸದರು ಚಕಾರ ಎತ್ತದೆ ಪರೋಕ್ಷವಾಗಿ ಮಹಾರಾಷ್ಟ್ರದ ಬೇಡಿಕೆ ಟೀಕಿಸುತ್ತಿಿಲ್ಲ. ಇಂತವರ ಬಗ್ಗೆೆ ರಾಜ್ಯದ ಜನರು ಎಚ್ಚರಿಕೆಯಿಂದ ಇರಬೇಕು ಎಂದರು.
ಕಾನೂನು ಸಚಿವ ಹೆಚ್.ಕೆ.ಪಾಟೀಲ್, ಸಣ್ಣ ನೀರಾವರಿ ಸಚಿವರಾದ ಎನ್.ಎಸ್.ಬೋಸರಾಜು, ಅರಣ್ಯ ಮತ್ತು ಪರಿಸರ ಖಾತೆ ಸಚಿವರಾದ ಈಶ್ವರ್ಖಂಡ್ರೆೆ, ಕೆಕೆಆರ್ಡಿಬಿ ಅಧ್ಯಕ್ಷ ಅಜಯ್ ಸಿಂಗ್, ಮ್ಯಾಾಗ್ಸೆೆಸ್ಸೆೆ ಪ್ರಶಸ್ತಿಿ ಪುರಸ್ಕೃತ ಪರಿಸರವಾದಿ ರಾಜೇದ್ರ ಸಿಂಗ್ ಸೇರಿ ಹಲವು ಗಣ್ಯರು ಉಪಸ್ಥಿಿತರಿದ್ದರು.
ಸಣ್ಣ ನೀರಾವರಿ ಇಲಾಖೆಯ ನೀರಿದ್ದರೆ ನಾಳೆ ಅಂತರಜಲ ಅಭಿವೃದ್ಧಿಿ ಕಾರ್ಯಕ್ರಮಕ್ಕೆೆ ಸಿಎಂ ಚಾಲನೆ ಅಂತರಜಲದ ಜಾಗೃತಿ ಮೂಡಿಸಿ, ಕೆರೆ ಒತ್ತುವರಿ ತೆರವುಗೊಳಿಸಿ

