ಸುದ್ದಿಮೂಲ ವಾರ್ತೆ
ಕೆ.ಆರ್.ಪುರ,ಆ.28;ಯಾವುದೇ ಕ್ಷೇತ್ರ ಆದರೂ ಶ್ರದ್ಧೆ, ಶಿಸ್ತು, ಪ್ರಾಮಾಣಿಕತೆ ಹಾಗೂ ಆಸಕ್ತಿ ಇದ್ದರೆ ಅಮೋಘ ಸಾಧನೆ ಮಾಡಬಹುದು ಎಂಬುದನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಮುನಿವೆಂಕಟಪ್ಪ ಯುವಕರಿಗೆ ತೋರಿಸಿಕೊಟ್ಟಿದ್ದಾರೆ ಎಂದು ಆದಿಜಾಂಬವ ಜನ ಸಂಘದ ಪೂರ್ವ ತಾಲ್ಲೂಕು ಅಧ್ಯಕ್ಷ ಕೃಷ್ಣಮೂರ್ತಿ ಹೇಳಿದರು.
ಕೆ.ಆರ್.ಪುರ ಸಮೀಪದ ಮಂಡೂರಿನ ಅಂಬೇಡ್ಕರ್ ಭವನದಲ್ಲಿ ಆದಿಜಾಂಬವ ಜನ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಮುನಿವೆಂಕಟಪ್ಪನವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪಾಶ್ಚಿಮಾತ್ಯ ಸಂಸ್ಕೃತಿ ಪ್ರಭಾವದಿಂದ ನಮ್ಮ ಅಚಾರ ವಿಚಾರ ಕಲೆ ಸಂಸ್ಕೃತಿ ನಶಿಸುತ್ತಿರುವ ಸಮಯದಲ್ಲಿ ತಮಟೆ ಭಾರಿಸುವ ಕಲೆಯ ಮೂಲಕ ತಮ್ಮ ಪ್ರತಿಭೆ ಯನ್ನು ನಾಡಿನಾದ್ಯಂತ ಪ್ರದರ್ಶಿಸಿ ಅಮೋಘ ಸಾಧನೆ ಮಾಡಿದ್ದಾರೆ ಎಂದರು.
ಯಾವುದೇ ಕ್ಷೇತ್ರವಾದರೂ ಶ್ರದ್ಧೆ, ಶಿಸ್ತು. ಪ್ರಾಮಾಣಿಕತೆ ಹಾಗೂ ಆಸಕ್ತಿ ಇದ್ದರೆ ಸಾಧನೆ ಮಾಡಬಹುದು ಎಂಬುವುದನ್ನು ಯುವಜನತೆಗೆ ತೋರಿಸಿಕೊಟ್ಟಿದ್ದಾರೆ ಎಂದು ಬಣ್ಣಿಸಿದರು. ಮುನಿವೆಂಕಟಪ್ಪ ನವರ ಪ್ರತಿಭೆಯನ್ನು ಗುರುತಿಸಿ ಕೇಂದ್ರ ಸರಕಾರ ಪದ್ಮಶ್ರೀ ಪ್ರಶಸ್ತಿ ಕಲ್ಪಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ವಿಷಯವಾಗಿದೆ. ಇದು ಪ್ರತಿಭಾವಂತರಿಗೆ ಸ್ಪೂರ್ತಿಯಾಗಿದೆ ತಿಳಿಸಿದರು.
ಶಾಲಾ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ನೀಡಲಾಗಿದೆ ಎಂದು ಬೆಂಗಳೂರು ಪೂರ್ವ ತಾಲ್ಲೂಕು ಆದಿಜಾಂಬವ ಜನಸಂಘದ ಪ್ರಧಾನ ಕಾರ್ಯದರ್ಶಿ ಮಾದೇಶ್ ತಿಳಿಸಿದರು.
ಇದೇ ವೇಳೆ ಸಮುದಾಯದ 30 ಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳಿಗೆ ಅಧಿಜಾಂಬವ ಜನಸಂಘದ ವತಿಯಿಂದ ಜಾತಿ ಪ್ರಮಾಣ ಪತ್ರಗಳನ್ನು ನೋಂದಾಯಿಸಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯ ಚಿಕ್ಕಮುನಿಯಪ್ಪ, ಕೆಎಎಸ್ ಅಧಿಕಾರಿ ದಿನೇಶ್, ಬಿಜೆಪಿ ಎಸ್.ಸಿ ಘಟಕದ ರಾಜ್ಯ ಉಪಾಧ್ಯಕ್ಷ ಶಂಕರಪ್ಪ, ಭಾರತೀಯ ಸೇವಾ ಸಮಿತಿ ರಾಜ್ಯಾದ್ಯಕ್ಷ ಹೂಡಿ ರಾಮಚಂದ್ರ, ಚಿಂತಾಮಣಿ ಅಮರ್ ನಾಥ್, ಗ್ರಾ.ಪಂ ಸದಸ್ಯ ಅಶೋಕ್, ಸಂಘದ ಪಧಾದಿಕಾರಿಗಳಾದ ಮಧು, ನಂದಿನಿ ಇದ್ದರು.