ಸುದ್ದಿಮೂಲವಾರ್ತೆ
ಕೊಪ್ಪಳ ಜು 04:ಮಾರುಕಟ್ಟೆಯಲ್ಲಿ ಈಗ ಟೊಮೆಟೊ ದರ ಕೇಳಿದರೆ ಹೌಹಾರುವಂತೆ ಇದೆ. ಮಾರುಕಟ್ಟೆಯಲ್ಲಿ ಪ್ರತಿ ಕೆಜಿ 150 ಕ್ಕಿಂತ ಅಧಿಕವಾಗುವ ಸಾಧ್ಯತೆ ಇದೆ. ಈ ಮಧ್ಯೆ ರೈತನೊಬ್ಬ ಟೊಮೆಟೊ ಒಂದು ಬಾಕ್ಸ್ ಗೆ ಬರೋಬ್ಬರಿ 2900 ರೂಪಾಯಿಗೆ ಮಾರಾಟವಾಗಿದೆ. ಇದರಿಂದ ರೈತ ಖುಷಿಯಾಗಿದ್ದಾನೆ.
ಕೊಪ್ಪಳ ಜಿಲ್ಲೆಯಲ್ಲಿ ಟೊಮೆಟೊ ದರವು
ಗಗನಕ್ಕೇರಿದೆ. ಈಗ ಸಗಟು ಮಾರಾಟದಲ್ಲಿ ಒಂದು ಬಾಕ್ಸ್ ಟೆಮೆಟೊ 2500 ರೂಪಾಯಿಗೆ ಮಾರಾಟವಾಗುತ್ತಿದೆ.ಕೊಪ್ಪಳದ ತರಕಾರಿ ಮಾರುಕಟ್ಟೆಯಲ್ಲಿ ಈಗ ದಾಖಲೆ ದರದಲ್ಲಿ ಮಾರಾಟವಾಗುತ್ತಿದೆ.
ಕಳೆದೊಂದು ವಾರದಿಂದ ಟೊಮೆಟೊ ದುಬಾರಿಯಾಗಿ ಮಾರಾಟವಾಗುತ್ತಿದೆ ಎನ್ನುತ್ತಾರೆ ವ್ಯಾಪಾರಿಗಳು ಹಾಗು ರೈತರು.
ಈ ಮಧ್ಯೆ ಸೋಮುವಾರ ಕನಕಗಿರಿ ಮಾರುಕಟ್ಟೆಯಲ್ಲಿ 20 ಬಾಕ್ಸ್ ಟೊಮೆಟೊ ತಂದಿದ್ದ ರೈತನಿಗೆ 25 ಸಾವಿರ ರೂಪಾಯಿಗೆ ಮಾರಾಟವಾಗಿದೆ. ಅದರಲ್ಲಿ ಒಂದು ಬಾಕ್ಸ್ ಗೆ 2900 ಯಂತೆ ಮಾರಾಟವಾಗಿದೆ. ಕನಕಗಿರಿ ತಾಲೂಕಿನ ಸೋಮಸಾಗರದ ಶರಣಪ್ಪ ಕರಡಿ ಎಂಬುವವರು ಟೊಮೆಟೊ ಮಾರಾಟಕ್ಕಾಗಿ ಮಾರುಕಟ್ಟೆಗೆ ತಂದಿದ್ದರು. ಅವರ ಟೊಮೆಟೊ ದಾಖಲೆ ಪ್ರಮಾಣ ದರಕ್ಕೆ ಮಾರಾಟವಾಗಿರುವದರಿಂದ ರೈತ ಖುಷಿಯಾಗಿದ್ದಾನೆ.
ಟೊಮೆಟೊ ಸ್ವಲ್ಪ ದಿನದ ಹಿಂದೆ 40-50 ರೂಪಾಯಿಗೆ ಮಾರಾಟವಾಗಿದ್ದ ಟೊಮೆಟೊ
ಈಗ 2500 ರೂಪಾಯಿಯವರೆಗೂ ಮಾರಾಟವಾಗುತ್ತಿದೆ. ಇದಕ್ಕೆ ಕಾರಣ ಮಳೆ ಕೊರತೆ.ಟೊಮೆಟೊ ಬೇಸಿಗೆಯ ಬಿಸಿಲಿನಿಂದಾಗಿ ಬೆಳೆ ಕಡಿಮೆ ಇಳುವರಿ ಬಂದಿದೆ.ರೈತರ ಬಳಿಯಲ್ಲಿ ಟೊಮೆಟೊ ಇಲ್ಲದ ಹಿನ್ನೆಲೆ ದಾಖಲೆ ಮಾರಾಟವಾಗುತ್ತಿದೆ. ಈ ದರದಿಂದಾಗಿ ರೈತನಿಗೆ ಲಾಭವಾಗುತ್ತದೆ ಎನ್ನುತ್ತಾರೆ ತಾಳಕನಕಾಪುರದ ರೈತ ವೀರೇಶ.
ಇನ್ನೂ ಇಷ್ಟು ಪ್ರಮಾಣದಲ್ಲಿ ಮಾರಾಟವಾದರೆ ರೈತರಿಗೆ ಲಾಭವಾಗುತ್ತದೆ ಎಂಬ ಖುಷಿ
ಮಾರುಕಟ್ಟೆಯಲ್ಲಿ ಟೊಮೆಟೊ ಕಡಿಮೆ ಆವಕವಾಗುತ್ತಿರುವದರಿಂದ ದುಬಾರಿಯಾಗಲು ಕಾರಣ ಕಳೆದ ತಿಂಗಳು ಕೇವಲ 700 ರಿಂದ 800 ರೂಪಾಯಿಗೆ ಮಾರಾಟವಾಗುತ್ತಿದ್ದ ಟೊಮೆಟೊ ಈಗ ಭಾರಿ ದರದಲ್ಲಿ ಮಾರಾಟವಾಗುತ್ತಿದೆ. ಇನ್ನೂ ತರಕಾರಿಯನ್ನು
ಗ್ರಾಹಕರಿಗೆ 150 ರಿಂದ 200 ರವರೆಗೂ ಮಾರಾಟವಾಗುವ ಹಂತಕ್ಕೆ ಬಂದಿದೆ. ಒಮ್ಮೊಮ್ಮೆ ದರವಿಲ್ಲದೆ ರಸ್ತೆಗೆ ಚೆಲ್ಲಿ ಹೋಗುವ ರೈತರಿಗೆ ಈಗ ದುಬಾರಿ ದರವಿದೆ. ಆದರೆ ಬಹಳಷ್ಟು ರೈತರಲ್ಲಿ ಟೊಮೆಟೊ ಇಲ್ಲದಂತಾಗಿದೆ.