ಸುದ್ದಿಮೂಲ ವಾರ್ತೆ ಬೆಂಗಳೂರು, ಡಿ.29:
ನೂತನ ವರ್ಷ ಆಚರಣೆಗೆ ಮಾಹಿತಿ ತಂತ್ರಜ್ಞಾನ ನಗರ ಬೆಂಗಳೂರು ಹೊಸ ಮದುವಣಗಿತ್ತಿಿಯಂತೆ ಶೃಂಗರಿಸಿಕೊಂಡು ಕಂಗೊಳಿಸುತ್ತಿದೆ.
ಎಂಜಿ ರಸ್ತೆೆ, ಬ್ರಿಗೇಡ್, ಚರ್ಚ್ ಸ್ಟ್ರೀಟ್, ಮ್ಯೂಸಿಯಂ, ಬಿಷಪ್ ಕಾಟನ್ ಶಾಲೆ ರಸ್ತೆೆ ಸೇರಿದಂತೆ ಸುತ್ತಲಿನ ಪ್ರದೇಶಗಳ ಪಬ್, ಬಾರು, ಕ್ಲಬ್ಗಳು ಈಗಾಗಲೇ ವಿದ್ಯುತ್ ದೀಪಗಳಿಂದ ಶೃಂಗಾರ ಮಾಡಿಕೊಂಡು ಗ್ರಾಾಹಕರನ್ನು ಸೆಳೆಯುತ್ತಿಿವೆ.
ನಗರದ ಇತರ ಪ್ರದೇಶಗಳಲ್ಲೂ ಕೂಡ ವರ್ಷಾಚರಣೆಗೆ ಸಿದ್ಧತೆಗಳು ಭರದಿಂದ ಸಾಗಿವೆ. ನಗರದಲ್ಲಿರುವ ಬಹುತೇಕ ಕ್ಲಬ್ಗಳಲ್ಲಿ ಈಗಾಗಲೇ ಸಿದ್ಧತೆಗಳ ಭರದಿಂದ ಸಾಗಿವೆ. ಮಾಲ್ಗಳಲ್ಲೂ ಸಿದ್ಧತೆ ಬರದಿಂದ ಸಾಗಿದೆ. ಬೇಕರಿ, ಐಸ್ ಕ್ರೀೆಂ ಪಾಲರ್ಗಳು ಹೊಸ ರೀತಿಯ ಕೇಕ್ ಹಾಗೂ ಐಸ್ ಕ್ರೀೆಂ ತಯಾರಿಸಿಕೊಂಡು ಗ್ರಾಹಕರನ್ನು ಸೆಳೆಯಲು ಮುಂದಾಗಿವೆ.
ಕೂಪ್ಗಳ ವಿತರಣೆ:
ಬೆಂಗಳೂರು ನಗರದ ಬಹುತೇಕ ಕ್ಲಬ್ಗಳು, ಪಬ್ಗಳು, ಬಾರ್ ಮತ್ತು ರೆಸ್ಟೋರೆಂಟ್ಗಳು ಹೊಸ ವರ್ಷದ ಆಚರಣೆಗೆ ಹಲವು ರಿಯಾತಿಗಳನ್ನು ನೀಡಲು ಮುಂದಾಗಿವೆ. ಕ್ಲಬ್ಗಳು ಸದಸ್ಯರಿಗೆ ಹಾಗೂ ಅವರ ಕುಟುಂಬದವರಿಗೆ ಕೂಪ್ಗಳನ್ನು ವಿತರಿಸಿ ಮದ್ಯ, ಆಹಾರ ಸೇವೆಗೆ ಅವಕಾಶ ಮಾಡಿಕೊಟ್ಟಿಿವೆ. ಮಕ್ಕಳಿಗಾಗಿ ಹಲವು ಆಟಗಳನ್ನು ಪರಿಚಯಿಸಿವೆ.
ನಸುಕಿನ 2ಗಂಟೆವರೆಗೂ ಮೆಟ್ರೋ ರೈಲು ವಿಸ್ತರಣೆ:
ಹೊಸ ವರ್ಷ 2026ರ ಸಂಭ್ರಮಾಚರಣೆಗಾಗಿ ಬೆಂಗಳೂರು ಮೆಟ್ರೋೋ ಡಿಸೆಂಬರ್ 31ರ ಮಧ್ಯ ರಾತ್ರಿಿ 2ಗಂಟೆವರೆಗೆ ರೈಲು ಸೇವೆ ವಿಸ್ತರಿಸಿದೆ.
ಪರ್ಪಲ್, ಗ್ರೀನ್ ಮತ್ತು ಯೆಲ್ಲೋ ಮಾರ್ಗಗಳಲ್ಲಿ ಹೆಚ್ಚುವರಿ ಸಮಯದವರೆಗೆ ಮೆಟ್ರೋೋ ಓಡಾಟ ಇರುತ್ತದೆ. ಎಂ.ಜಿ. ರಸ್ತೆೆ ನಿಲ್ದಾಣವನ್ನು ರಾತ್ರಿಿ 10 ಗಂಟೆಯಿಂದ ಮುಚ್ಚಲಾಗುತ್ತದೆ, ಆದರೆ ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ನಿಲ್ದಾಾಣಗಳಿಂದ ಸೇವೆಗಳು ಲಭ್ಯವಿರುತ್ತವೆ. ಜನವರಿ 1, 2026ರ ನಸುಕಿನ 2ಗಂಟೆವರೆಗೂ ಮೆಟ್ರೋೋ ಸೇವೆಗಳು ಲಭ್ಯವಿದ್ದು, ರಾತ್ರಿಿ 11:30ರ ನಂತರ ರೈಲುಗಳ ಆವರ್ತನ ಹೆಚ್ಚಿಿರುತ್ತದೆ (ಪರ್ಪಲ್ ಮತ್ತು ಗ್ರೀೀನ್ ಲೈನ್ಗಳಲ್ಲಿ 8 ನಿಮಿಷ, ಯೆಲ್ಲೋ ಲೈನ್ನಲ್ಲಿ 15 ನಿಮಿಷಕ್ಕೊೊಮ್ಮೆೆ ರೈಲುಗಳ ಸಂಚಾರ ಇರಲಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ವರ್ಷಾಚರಣೆಯಲ್ಲಿ ತೊಂದರೆ ಕೊಟ್ಟರೆ ಬಂಧನ
ಹೊಸ ವರ್ಷಾಚರಣೆ ಸಂಭ್ರಮದ ಸಂದರ್ಭದಲ್ಲಿ ಬೇರೆಯವರಿಗೆ ತೊಂದರೆ ಕೊಟ್ಟರೆ ಮುಲಾಜಿಲ್ಲದೇ ಬಂಧಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ಕುರ್ಮಾ ಸಿಂಗ್ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಿಯಲ್ಲಿ ಮಾತನಾಡಿದ ಅವರು, ನೀವು ಹೊಸವರ್ಷವನ್ನು ಸಂತೋಷದಿಂದ ಆಚರಿಸಿ. ಬೇರೆಯವರಿಗೂ ಆಚರಿಸಲು ಬಿಡಿ. ಆದರೆ ಸಂಭ್ರಮದ ಸಂದರ್ಭದಲ್ಲಿ ಬೇರೆಯವರಿಗೆ ಅದರಲ್ಲೂ ಮಹಿಳೆಯರಿಗೆ ತೊಂದರೆ ಕೊಟ್ಟರೆ ಅಂತಹವರ ವಿರುದ್ಧ ನಾವು ಕಠಿಣ ಕ್ರಮ ಕೈಗೊಳ್ಳುತ್ತೆೈವೆ ಎಂದು ತಿಳಿಸಿದರು.
ಮಹಿಳೆಯರ ಸುರಕ್ಷತೆ ಮತ್ತು ಜನಸಂದಣಿ ನಿಯಂತ್ರಣ ನಮ ಮೊದಲ ಆದ್ಯತೆ. ಅಂದು ಕ್ಯೂಆರ್ಟಿ, ಚನ್ನಮ ಪಡೆ ಸೇರಿದಂತೆ ವಿಶೇಷ ಪಡೆಗಳನ್ನು ನಿಯೋಜಿಸಲಾಗುತ್ತದೆ. ಅ ಮಧ್ಯರಾತ್ರಿ ಸಂಭ್ರಮದ ನಂತರ ಜನಸಂದಣಿಯನ್ನು ತೆರವುಗೊಳಿಸಲು ಮೊದಲ ಬಾರಿಗೆ ಬಸ್ಗಳು ಮತ್ತು ಟೆಂಪೋ ಟ್ರಾಾವೆಲರ್ಗಳನ್ನು ಸೂಕ್ತ ಸ್ಥಳಗಳಲ್ಲಿ ವ್ಯವಸ್ಥೆೆ ಮಾಡಲಾಗಿದೆ. ಒಟ್ಟಾಾರೆ ಅಧಿಕಾರಿಗಳು ಸೇರಿದಂತೆ ಅಂದಾಜು 20 ಸಾವಿರ ಸಿಬ್ಬಂದಿಯನ್ನು ಭದ್ರತಾ ಕರ್ತವ್ಯಕ್ಕೆೆ ನಿಯೋಜಿಸಲಾಗಿದೆ ಎಂದು ಆಯುಕ್ತರು ತಿಳಿಸಿದರು.
ಎಂಜಿ ರಸ್ತೆ ಸುತ್ತ ವಾಹನ ಸಂಚಾರ ನಿಷೇಧ
ಹೊಸ ವರ್ಷಾಚರಣೆ ಹಿನ್ನೆೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಗರದ ಪೊಲೀಸರು ಡಿಸೆಂಬರ್ 31ರ ರಾತ್ರಿಿಯಿಂದ ಮಾರನೇ ದಿನ ಬೆಳಗಿವಜಾವದವರೆಗೂ ಎಂ.ಜಿ. ರಸ್ತೆೆ, ರೆಸಿಡೆನ್ಸಿಿ ರಸ್ತೆೆ ಹಾಗೂ ಚರ್ಚ್ ಸ್ಟ್ರೀಟ್ ಸೇರಿದಂತೆ ನಗರದ ಹಲವೆಡೆ ಸಂಚಾರದಲ್ಲಿ ಮಾರ್ಪಾಡು ಮಾಡಿದ್ದಾರೆ.
ಸಂಭ್ರಮಾಚರಣೆಯ ಪ್ರಮುಖ ಸ್ಥಳವಾಗಿರುವ ಎಂ.ಜಿ. ರಸ್ತೆೆ ಹಾಗೂ ಬ್ರಿಗೇಡ್ ರಸ್ತೆೆಗಳಲ್ಲಿ ಡಿ.31ರ ರಾತ್ರಿಿ 8ರಿಂದ ತಡರಾತ್ರಿಿ 2 ಗಂಟೆವರೆಗೆ ಸಾರ್ವಜನಿಕ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಎಂ.ಜಿ. ರಸ್ತೆೆಯ ಅನಿಲ್ ಕುಂಬ್ಳೆೆ ವೃತ್ತದಿಂದ ಟ್ರಿಿನಿಟಿ ವೃತ್ತದವರೆಗೆ, ಬ್ರಿಿಗೇಡ್ ರಸ್ತೆೆಯಲ್ಲಿ, ಕಾವೇರಿ ಎಂಪೋರಿಯಂ ಜಂಕ್ಷನ್ನಿಂದ ಓಲ್ಡ್ ಪಿಎಸ್ ಜಂಕ್ಷನ್ವರೆಗೆ, ಚರ್ಚ್ ಸ್ಟ್ರೀಟ್ನ ಬ್ರಿಿಗೇಡ್ ರಸ್ತೆೆ ಜಂಕ್ಷನ್ನಿಂದಸೈಂಟ್ ಮಾರ್ಕ್ಸ್ ರಸ್ತೆೆ ಜಂಕ್ಷನ್ವರೆಗೆ, ರೆಸ್ಟ್ ಹೌಸ್ ರಸ್ತೆೆಯ, ಬ್ರಿಿಗೇಡ್ ರಸ್ತೆೆ ಜಂಕ್ಷನ್ನಿಂದ ಮ್ಯೂಸಿಯಂ ರಸ್ತೆೆ ಜಂಕ್ಷನ್ವರೆಗೆ, ಎಂ.ಜಿ. ರಸ್ತೆೆ ಜಂಕ್ಷನ್ನಿಂದ ಎಸ್ಬಿಐ ವೃತ್ತದವರೆಗೆ ಹಾಗೂ ಆಶೀರ್ವಾದ ಜಂಕ್ಷನ್ನಿಿಂದ ಮೆಯೋ ಹಾಲ್ ಜಂಕ್ಷನ್ವರೆಗೆ ಸಂಚಾರ ವ್ಯವಸ್ಥೆೆ ನಿಷೇಧಿಸಲಾಗಿದೆ.
ಸಂಚಾರ ನಿಷೇಧಿಸಿದ ಹಿನ್ನೆಲೆಯಲ್ಲಿ ಪೊಲೀಸರು ವಾಹನಗಳ ಸಂಚಾರಕ್ಕೆೆ ಪರ್ಯಾಯ ವ್ಯವಸ್ಥೆೆ ಕೂಡ ಕಲ್ಪಿಿಸಿದ್ದಾರೆ.
ಮದ್ಯ ಸೇವಿಸಿ ವಾಹನ ಚಲಾವಣೆ ತಡೆಯಲು ಕ್ರಮ
ನಗರದಾದ್ಯಂತ ಮದ್ಯಪಾನ ಮಾಡಿ ವಾಹನ ಚಾಲನೆ ತಡೆಗಟ್ಟುವ ವಿಶೇಷ ಕಾರ್ಯಾಚರಣೆಗೆ ಒಟ್ಟು 166 ಸ್ಥಳಗಳನ್ನು ಗುರುತಿಸಲಾಗಿದೆ. ವ್ಹೀಲಿಂಗ್, ಅತಿವೇಗದ ಚಾಲನೆ ತಡೆಗಟ್ಟುವ ಉದ್ದೇಶದಿಂದ ಒಟ್ಟು 92 ಸ್ಥಳಗಳನ್ನು ಗುರುತಿಸಿ ಕಟ್ಟುನಿಟ್ಟಾಾಗಿ ಮೇಲ್ವಿಿಚಾರಣೆ ಮಾಡಲು ವ್ಯವಸ್ಥೆೆ ಮಾಡಲಾಗಿದೆ. ಸಂಚಾರ ನಿಯಂತ್ರಣ ಮತ್ತು ಅತಿವೇಗದ ಚಾಲನೆ ತಡೆಯುವ ಉದ್ದೇಶದಿಂದ ರಾತ್ರಿ ಸಮಯದಲ್ಲಿ ಒಟ್ಟು 50 ್ಲೆ ಓವರ್ಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಸುರಕ್ಷಿತ ಸಂಚಾರ ವ್ಯವಸ್ಥೆಗೆ ಒಟ್ಟು 10 ಡ್ರೋನ್ಗಳು, 249 ಕೋಬ್ರಾಾ ವಾಹನಗಳು ಮತ್ತು 400 ಸಂಚಾರ ವಾರ್ಡನ್ಗಳನ್ನು ಬಳಸಲಾಗುತ್ತಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

