ಸುದ್ದಿಮೂಲವಾರ್ತೆ ಮಾನ್ವಿ ಏ-8
ಮುಸ್ಲಿಂ ಕಮಿಟಿಯಿಂದ ಶುಕ್ರವಾರ ಮಾನ್ವಿ ಪಟ್ಟಣದ ಈದ್ಗಾ ಶಾದಿ ಮಹಲ್ ನಲ್ಲಿ ಇಫ್ತಾರ್ ಕೂಟ ಏರ್ಪಡಿಸಲಾಗಿತ್ತು.
ಪಟ್ಟಣದ ಮಸೀದಿಗಳಿಂದ ಮುಸ್ಲಿಂ ಬಾಂಧವರು ಭಾಗವಹಿಸಿದ್ದರು.ಈ ಇಫ್ತಾರ್ ಕೂಟದಲ್ಲಿ ಶಾಸಕ ರಾಜಾ ವೆಂಕಟಪ್ಪ ನಾಯಕ ಭಾಗವಹಿಸಿ ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಅಧ್ಯಕ್ಷ ಟಿ. ಮಲ್ಲಿಕಾರ್ಜುನ ಪಾಟೀಲ್, ಮುಖಂಡರಾದ ರಾಜಾ ರಾಮಚಂದ್ರ ನಾಯಕ, ರಾಜಾ ಆದರ್ಶ ನಾಯಕ, ಮುಸ್ಲಿಂ ಮುಖಂಡರಾದ ಸೈಯದ್ ಹುಸೇನ್ ಸಾಹೇಬ್, ಜಿ.ಸಮದಾನಿ ನಾಯ್ಕ್, ಸೈಯದ್ ನಜೀರುದ್ದಿನ್ ಖಾದ್ರಿ, ಸೈಯದ್ ಅಕ್ಬರ್ ಪಾಷಾ, ಖಲೀಲ್ ಖುರೇಶಿ, ಶಕೀಲ್ ಬೇಗ್, ಸೈಯದ್ ತನ್ವೀರುಲ್ ಹಸನ್, ಬಾಷಾ ಸಾಬ್, ಸೈಯದ್ ಸಾಜೀದ್ ಖಾದ್ರಿ, ಎ. ಕೆ. ರಹೆಮತ್ ಸಾಹೇಬ್, ಸುಭಾನ್ ಬೇಗ್ ಹಾಗೂ ಮುಸ್ಲಿಂ ಮುಖಂಡರು ಹಾಗೂ ಅನೇಕ ಮುಸ್ಲಿಂ ಬಾಂಧವರು ಭಾಗವಹಿಸಿದ್ದರು.