ಸುದ್ದಿಮೂಲವಾರ್ತೆ ಮಾನ್ವಿ ಏ-2
ಮಾನ್ವಿಯಿಂದ ರಬ್ಬಣಕಲ್ ಗ್ರಾಮಕ್ಕೆ ಅಟೋದಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಮದ್ಯದ ಬಾಟಲಿಗಳನ್ನು ಅಬಕಾರಿ ಪೊಲೀಸರು ದೋಬಿಘಾಟ್ ಬಳಿ ಶನಿವಾರ ರಾತ್ರಿ ವಶ ಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಪಡೆದ ಪೊಲೀಸರು 2 ಲಕ್ಷ ರೂ.ಮೌಲ್ಯದ ಮದ್ಯ ಹಾಗೂ ಆರೋಪಿಗಳಾದ ಮಹಾಂತೇಶ ಹಾಗೂ ಶಿವಪ್ಪ ಎಂಬುವವರನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ ಎಂದು ಅಬಕಾರಿ ಇಲಾಖೆಯ ಉಪ ನಿರೀಕ್ಷಕ ಶಿವಲಿಂಗಸ್ವಾಮಿ ತಿಳಿಸಿದರು. ಈ ಸಂದರ್ಭದಲ್ಲಿ ಅಬಕಾರಿ ಉಪ ನಿರೀಕ್ಷಕರಾದ ಹೆಚ್.ವೀರಮ್ಮ ಹಾಗೂ ಸಿಬ್ಬಂದಿಗಳು ಇದ್ದರು.