ಸುದ್ದಿಮೂಲ ವಾರ್ತೆ ರಾಯಚೂರು, ಡಿ.31:
ರಾಸಾಯನ ಮಿಶ್ರಿಿತ ಮದ್ಯ ಮಾರಾಟ ಮಾಡುತ್ತಿಿದ್ದ ರಾಯಚೂರಿನ ಗಜ್ಜಿಿ ವೀರೇಶ ತಂದೆ ಜಂಬಯ್ಯ ಎನ್ನುವ ಆರೋಪಿಯನ್ನು ಮೂರು ತಿಂಗಳ ಗಡಿಪಾರು ಮಾಡಲಾಗಿದೆ.
ಸಹಾಯಕ ಆಯುಕ್ತ ಗಜಾನನ ಬಾಳೆ ಅವರು ಆದೇಶ ಮಾಡಿದ್ದುಘಿ, ಇವರು ಕೈ ಹೆಂಡ, ರಾಸಾಯನಿಕ ಕಲಬೆರಕೆ ಹೆಂಡ ತಯಾರಿಸಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿಿದ್ದ ಆರೋಪ ಗಜ್ಜಿಿ ವೀರೇಶನ ಮೇಲಿತ್ತುಘಿ. ಈಗಾಗಲೇ 21 ಪ್ರಕರಣಗಳು ನೇತಾಜಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದವು. ಹೀಗಾಗಿ, ಈ ಆರೋಪಿಯನ್ನು ಮೂರು ತಿಂಗಳು ಮಂಡ್ಯ ಜಿಲ್ಲೆೆಯ ಮಳವಳ್ಳಿಿಯ ಹಲಗೂರು ಪೊಲೀಸ್ ಠಾಣೆ ವ್ಯಾಾಪ್ತಿಿಯಲ್ಲಿ ಮೂರು ತಿಂಗಳು ಗಡಿಪಾರು ಮಾಡಲಾಗಿದೆ ಎಂದು ನೇತಾಜಿ ನಗರ ಪೊಲೀಸ್ ಠಾಣೆ ಪಿಎಸ್ಐ ಬಸವರಾಜ ನಾಯಕ ತಿಳಿಸಿದ್ದಾಾರೆ.
ಅಕ್ರಮ ಮದ್ಯಮಾರಾಟ, ಓರ್ವನ ಗಡಿಪಾರು

