ಸುದ್ದಿಮೂಲ ವಾರ್ತೆ ಕೊಪ್ಪಳ, ಡಿ.09:
ಕೊಪ್ಪಳ ತಾಲೂಕಿನ ಹಿರೇಹಳ್ಳದಲ್ಲಿ ಅಕ್ರಮ ಮರಳು ದಂಧೆಗೆ ಕಡಿವಾಣವಿಲ್ಲದಂತಾಗಿದೆ. ಒಂದು ಕಡೆ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕುತ್ತೇವೆ ಎಂದು ಜಿಲ್ಲಾಾಡಳಿತ ಹೇಳುತ್ತಿಿದ್ದರೂ ಹಳ್ಳದಲ್ಲಿ ಮರಳು ದಂಧೆ ನಡೆಯುತ್ತಿಿದೆ. ಅದು ಯಾವ ಮಟ್ಟಕ್ಕೆೆ ಎಂದರೆ ಗ್ರಾಾಮದ ಸ್ಮಶಾನವನ್ನೆೆ ಬಗೆಯುತ್ತಿಿದ್ದಾಾರೆ ಮರಳು ದಂಧೆಕೋರರು.
ಕೊಪ್ಪಳ ತಾಲೂಕಿನ ಹಿರೇಹಳ್ಳದಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿಿ ಸಿಎಂಗೆ ಪತ್ರ ಬರೆದಿದ್ದರು. ಇದೇ ವೇಳೆ ಇಲ್ಲಿಯ ಗಣಿ ಮತ್ತು ಭೂ ವಿಜ್ಞಾಾನ ಇಲಾಖೆಯ ಅಧಿಕಾರಿಗಳು ಶಾಮೀಲಾಗಿದ್ದಾಾರೆ ಎಂದು ಆರೋಪ ಸಹ ಮಾಡಿದ್ದರು. ಈ ಪತ್ರ ಹಾಗು ನಂತರದ ರಾಜಕೀಯ ಮುಖಂಡರ ಹೇಳಿಕೆ. ಸಂಘಟನೆಗಳ ಹೋರಾಟದಿಂದ ಹಿರೇಹಳ್ಳದ ಹಿರೇಸಿಂಧೋಗಿ ಬಳಿಯಲ್ಲಿ ಸ್ವಲ್ಪ ಸಮಯ ಮರಳು ಅಗೆಯುವದನ್ನು ಬಂದ್ ಮಾಡಿದ್ದರು.
ಈ ಮಧ್ಯೆೆ ಕಳೆದ ವಾರ ಮತ್ತೆೆ ಆರಂಭವಾಗಿತ್ತು. ಈ ಕುರಿತು ಎಂಎಲ್ ಸಿ ಹೇಮಲತಾ ನಾಯಕ ಅಕ್ರಮ ದಂಧೆಗೆ ಶಾಸಕರ ಕುಮ್ಮಕ್ಕು ಇದೆ ಎಂದು ಆರೋಪಿಸಿದ್ದರು. ಈ ಆರೋಪದ ನಂತರ ಈಗ ಹಿರೇಸಿಂಧೋಗಿ ಬಳಿ ಮರಳು ದಂಧೆ ತಾತ್ಕಾಾಲಿಕವಾಗಿ ಬಂದ್ ಆದಂತೆ ಇದೆ.
ಆದರೆ ಕೊಪ್ಪಳ ತಾಲೂಕಿನ ಮುದ್ಲಾಾಪುರದಿಂದ ಡಂಬರಳ್ಳಿಿಯವರೆಗೂ ಅಲ್ಲಲ್ಲಿ ಅಕ್ರಮ ಮರಳು ದಂಧೆ ಮುಂದುವರಿದಿದೆ. ಇದಕ್ಕೆೆ ಸಾಕ್ಷಿ ಎಂಬಂತೆ ನರೆಗಲ್ ಬಳಿ ನಿರಂತರವಾಗಿ ಮರಳನ್ನು ಅಗೆಯುತ್ತಿಿದ್ದಾಾರೆ.
ನರೆಗಲ್ ನ ಹಿರೇಹಳ್ಳದ ದಡದಲ್ಲಿರುವ ಸ್ಮಶಾನದಲ್ಲಿ ಅಗೆದು ಮರಳು ಗಣಿಗಾರಿಕೆ ಮಾಡ್ತಿಿದ್ದಾಾರೆಂದು ಗ್ರಾಾಮಸ್ಥರು ಆರೋಪಿಸುತ್ತಿಿದ್ದಾಾರೆ. ಹತ್ತಾಾರು ಟ್ರ್ಯಾಾಕ್ಟರ್ , ಟಿಪ್ಪರ್ ಮೂಲಕ ಅಕ್ರಮ ಮರಳು ಸಾಗಾಣಿಕೆ ಮಾಡಲಾಗುತ್ತಿಿದೆ.
ಇಲ್ಲಿ ಅಕ್ರಮವಾಗಿ ಮರಳು ಎತ್ತುವದು. ಸ್ಮಶಾನ ಜಾಗೆಯನ್ನು ಸಹ ಅಗೆಯುತ್ತಿಿರುವ ಬಗ್ಗೆೆ ಮಾಹಿತಿ ಇದೆ. ಕೆಲವು ಪ್ರಭಾವಿಗಳು ದಂಧೆ ಹಿಂದೆ ಇದ್ದಾಾರೆ. ಈ ಕುರಿತು ದೂರು ನೀಡಿದರೆ ಅವರ ಮೇಲೆ ಹಲ್ಲೆೆ ಮಾಡುತ್ತಾಾರೆ. ಅವರನ್ನು ಟಾರ್ಗೆಟ್ ಮಾಡುತ್ತಾಾರೆ. ಕೆಲವರು ಇಲ್ಲಿ ಮರಳು ದಂಧೆ ತಡೆಯದಂತೆ ಒಂದು ವ್ಯೂೆಹವನ್ನೇ ರಚಿಸಿಕೊಂಡಿದ್ದಾಾರೆ ಎಂದು ಕೆಲವು ಗ್ರಾಾಮಸ್ಥರು ಆರೋಪಿಸಿದ್ದಾಾರೆ.
ಈ ಕುರಿತು ಜಿಲ್ಲಾಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಕೇಳಿದರೆ ಅಕ್ರಮ ದಂಧೆ ಕಡಿವಾಣಕ್ಕೆೆ ಟೆಂಡರ್ ಕರೆದು ಸ್ಥಳ ನಿಗದಿ ಮಾಡಲಾಗುವುದು. ಗುತ್ತಿಿಗೆ ಆಧಾರದಲ್ಲಿ ಮರಳು ಸಾಗಾಟಕ್ಕೆೆ ಕ್ರಮ ಕೈಗೊಳ್ಳಲು ಜಿಲ್ಲಾಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾಾರೆ.
ಸ್ಮಶಾನ ಬಿಡದ ಅಕ್ರಮ ಮರಳು ದಂಧೆ

